- Advertisement -
ಹೊಸದಿಲ್ಲಿ– ಈಗ ಬಹು ಚರ್ಚಿತವಾಗಿರುವ ಬ್ರಿಟನ್ ರೂಪಾಂತರಿತ ಕೊರೋನಾ ವೈರಸ್ ಭಾರತದಲ್ಲಿ ಕಳೆದ ಮಾರ್ಚ್- ಮೇ ತಿಂಗಳಲ್ಲಿಯೇ ಇತ್ತು ಎಂದು ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇಂಟೆಗ್ರೇಟಿವ್ ಬಯಾಲಾಜಿ ಸಂಸ್ಥೆ ಹೇಳಿದೆ.
ಅದರಿಂದಾಗಿಯೆ ಭಾರತದಲ್ಲಿ ವೈರಾಣು ವೇಗವಾಗಿ ಹರಡಲು ಕಾರಣವಾಯಿತು ಎಂದು ಸಂಸ್ಥೆಯ ನಿರ್ದೇಶಕ ಅನುರಾಗ ಅಗ್ರವಾಲ್ ಅವರು ಹೇಳಿದ್ದಾರೆ.
ಈ ಮಧ್ಯೆ ರೂಪಾಂತರಿತ ಕೊರೋನಾ ವೈರಾಣು ಈಗ ಇರುವ ಕೊರೋನಾದಂತೆಯೇ ಸಾಮಾನ್ಯವಾಗಿ ದ್ದು ಇದರಂತೆಯೇ ವೈರಾಣುವಿಗೆ ಚಿಕಿತ್ಸೆ ಲಭ್ಯವಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ ಗುಲೇರಿಯಾ ಹೇಳಿದ್ದಾರೆ.
- Advertisement -
ಬ್ರಿಟನ್ ವೈರಾಣು ಎಂದು ಯಾರೂ ಭಯಪಡಬೇಕಾಗಿಲ್ಲ. ಇದೊಂದು ಸಾಮಾನ್ಯ ಕೊರೋನಾ ವೈರಸ್ ಎಂದು ಅವರು ತಿಳಿಸಿದ್ದಾರೆ.