spot_img
spot_img

ಮಾನವರಿಗೆ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬ ಜ್ಞಾನವಿರಬೇಕು

Must Read

spot_img
- Advertisement -

ರಾಜಪ್ರಭುತ್ವ ದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಅಧಿಕಾರ ದಾಹವಿರಲಿಲ್ಲ. ರಾಜಕೀಯ ಕ್ಷೇತ್ರವೂ ಒಬ್ಬ ರಾಜನ ಆಡಳಿತದಲ್ಲಿತ್ತು. ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಕ್ಷೇತ್ರ ಒಬ್ಬ ವ್ಯಕ್ತಿಯ ಆಡಳಿತಕ್ಕೆ ಒಳಗಾದರೆ, ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ.

ಇಲ್ಲಿ ಧರ್ಮ ಸ್ಥಿರವಾಗಿದ್ದರೂ ಅದು ಒಂದೇ ರೀತಿಯಲ್ಲಿ ಪ್ರಚಾರ ಮಾಡದ ಕಾರಣ ಅಧರ್ಮದ ರಾಜಕೀಯತೆ ಬೆಳೆದಿದೆ. ಪ್ರಸಿದ್ದರಾದವರೆಲ್ಲರೂ ಧರ್ಮರಕ್ಷಕರಾಗಿಲ್ಲ. ಸಿದ್ದಿ ಪಡೆದವರೆಲ್ಲರೂ ಪ್ರಚಾರಕ್ಕೆ ಬಂದಿಲ್ಲ. ಕಣ್ಣಿಗೆ ಕಾಣದ ಹಿಂದಿನ ಶಕ್ತಿಯನ್ನು ನೋಡುವ ಜ್ಞಾನ ಸಾಮಾನ್ಯರಿಗಿಲ್ಲ.

ಹೀಗಾಗಿ ಎಲ್ಲಾ ಆಳೋರೆ.ಆಳಿಕೊಂಡವರು ಕಡಿಮೆ. ಪ್ರಜಾಪ್ರಭುತ್ವದ, ಪ್ರಜೆಯ ಸಹಕಾರವೆ ಇದಕ್ಕೆ ಕಾರಣ. ಸಹಕಾರವು ಸತ್ಯಕ್ಕೆ ಸಿಕ್ಕಿದಾಗಲೆ ಧರ್ಮ ವೂ ರಕ್ಷಣೆ ಆಗುತ್ತದೆ.ಸತ್ಯವೆ ಇಲ್ಲದ ಧರ್ಮ ಕುರುಡು, ಧರ್ಮವಿಲ್ಲದ ಸತ್ಯ ಕುಂಟು.

- Advertisement -

ಅದ್ವೈತ ದೊಳಗೇ ಅಡಗಿರುವ ದ್ವೈತ ಕಣ್ಣಿಗೆ ಕಾಣಬಹುದಾದರೂ ಅನುಭವಕ್ಕೆ ಬರದೆ ಸತ್ಯ ಅರ್ಥ ವಾಗುವುದಿಲ್ಲ.

ಸಿದ್ದಿ,ಪ್ರಸಿದ್ದಿ,ಸಿದ್ದ,ಪ್ರಸಿದ್ದ,ಸುಪ್ರಸಿದ್ದ,ಕುಪ್ರಸಿದ್ದ ಎಲ್ಲವೂ ಪಡೆಯಲು ಸಿದ್ದರಾಗಿ ಬಂದ ಮಾನವರಿಗೆ ಯಾವುದು ಶ್ರೇಷ್ಠ ಯಾವುದು ಕನಿಷ್ಠ ಎನ್ನುವ ಜ್ಞಾನವಿಲ್ಲವಾದರೆ
ಕುಪ್ರಸಿದ್ದರಾಗಲೂ ಸಿದ್ದರಾಗಿ ನಿಲ್ಲುತ್ತಾರೆ. ಇದಕ್ಕೆ ತಕ್ಕಂತೆ ಸಹಕಾರ ಸಿಕ್ಕಿದರಂತೂ ಕೇಳೋದೆ ಬೇಡ. ಹಣದಿಂದ ಈ ಎಲ್ಲಾ ನಡೆದಿರುವುದೇ ಅಜ್ಞಾನ.

ಹಿಂದಿನ ಜ್ಞಾನಿಗಳ ಸಿದ್ದಿಪ್ರಾಪ್ತಿಯ ಮಂತ್ರ,ತಂತ್ರ,ಯಂತ್ರಗಳು ಭೂಮಿಯಲ್ಲಿದ್ದು ಅದನ್ನು ಬಳಸಿಕೊಂಡು ಇನ್ನಷ್ಟು ಹೆಚ್ಚು ಪ್ರಸಿದ್ದಿ ಪಡೆದರು.ಪ್ರಸಿದ್ಧರಾದವರ ಹೆಸರನ್ನು ಇಟ್ಟುಕೊಂಡು ಹಣ ಸಂಪಾದಿಸಿ ಸುಪ್ರಸಿದ್ದರಾದವರು ಹಲವರು. ಈ ಸುಪ್ರಸಿದ್ದರ ಹಿಂದಿನ ಉದ್ದೇಶವನ್ನು ಅಪಾರ್ಥ ಮಾಡಿಕೊಂಡು ಕುಪ್ರಸಿದ್ದರು ಬೆಳೆದರು.

- Advertisement -

ಈ ಎಲ್ಲರ ಉದ್ದೇಶ ಭೂಮಿಯಲ್ಲಿ ಹೆಸರು,ಹಣ,ಅಧಿಕಾರ, ಸ್ಥಾನ,ಸನ್ಮಾನ ಪಡೆಯುವುದಷ್ಟೇ ಆದ ಕಾರಣ ಅವರ
ಹಿಂದೆ ನಡೆದವರಿಗೆ ತಮ್ಮೊಳಗಿನ ಆತ್ಮಜ್ಞಾನದ ಅರಿವಿಲ್ಲದೆ ಹೋಯಿತು. ಹೀಗಾಗಿ ಹೊರಗಿನ ಹೆಚ್ಚು ಪ್ರಸಿದ್ಧಿ ಪಡೆದವರನ್ನು ಸಿದ್ದ ಪುರುಷರೆಂದು ಅವರು ಹೇಳಿದ್ದೇ ಸತ್ಯ ಶುದ್ದ ವೆಂದು ನಂಬಿ ಅವರು ಹೇಳಿದಂತೆ ಕೇಳಲು ಸಿದ್ದರಾಗಿ ನಿಂತವರ ಸಂಖ್ಯೆ ಬೆಳೆದಿದೆ.

ಇದನ್ನು ಆಧ್ಯಾತ್ಮಿಕ ವಾಗಿ ತಿಳಿದರೂ ತಪ್ಪು ಅವರದ್ದಲ್ಲ. ಭೌತಿಕ ವಾಗಿ ತಿಳಿದರೂ ತಪ್ಪುಲ್ಲ. ತಪ್ಪು ನಡೆದಿರೋದು ಅಜ್ಞಾನದ ಶಿಕ್ಷಣದಲ್ಲಿ. ಕಾಲದ ಪ್ರಭಾವ ಯಾರನ್ನೂ ಬಿಡೋದಿಲ್ಲ. ಬಿಟ್ಟಿಲ್ಲ. ಹೀಗಾಗಿ ನಮ್ಮ ತಪ್ಪು ನಮ್ಮನ್ನೇ ಆವರಿಸುವುದೆನ್ನುವ ಜ್ಞಾನ ನಮಗಿದ್ದು ನಡೆಯುವುದಕ್ಕೂ ಸಿದ್ದಿ ಪಡೆಯಬೇಕಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group