ಕಾಲ ಬದಲಾಗಬೇಕಾಗಿದೆ
ಹಿರಿಯರ ಕಂಡು ತಗ್ಗಿ ಬಗ್ಗಿ
ನಡೆಯುವಂತಿತ್ತು
ಅದು ಆ ಕಾಲ
ಹಿರಿಯರೆಂದರೆ ತಲೆ ಎತ್ತಿ
ತಿರುಗುವಂತಾಗಿದೆ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಮನೆಗೊಂದು ಟೆಲಿಫೋನ್
ಮೊಬೈಲ್ ಇದ್ದರೆ ಸಾಕಾಗಿತ್ತು
ಅದು ಆ ಕಾಲ
4G 5G Network ಇದ್ದು
ಪ್ರತಿಯೊಬ್ಬರಿಗೂ ಮೊಬೈಲ್
ಬೇಕಾಗಿದೆ ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಸಂಬಂಧಿಕರು ಇದ್ದರೆ
ಸಾಕಾಗಿತ್ತು
ಅದು ಆ ಕಾಲ
ಸಂಬಂಧಿಕರು ಇಲ್ಲದಿದ್ದರೂ
ಸಾಕಾಗಿದೆ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಊಟ ಬಟ್ಟೆ ಇದ್ದರೆ
ಸಾಕಾಗಿತ್ತು
ಅದು ಆ ಕಾಲ
ಚಿನ್ನ ಬೆಳ್ಳಿ ವಜ್ರ ವೈಡೂರ್ಯ
ಇದ್ದರು ಸಾಕಾಗುವುದಿಲ್ಲ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಊಟವೆಂದರೆ ಹೊಟ್ಟೆ ತುಂಬಾ
ಸಿಗುತ್ತಿತ್ತು
ಅದು ಆ ಕಾಲ
ಊಟವೆಂದರೆ ಹೊಟ್ಟೆ ತುಂಬಾ
ಸಿಗದಂತಾಗಿದೆ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಆದರೆ ಮನುಷ್ಯ ಬದಲಾಗುವುದಿಲ್ಲ
”ಬಡವರು”
ಬಡವರು ಸ್ವಾಮಿ ನಾವು ಬಡವರು ಮೈಮೇಲೆ ಹರಕು ಬಟ್ಟೆ ಇದ್ದರು
ಬೆವರು ಹರಿಸಿ ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿಯುವವರು ಸ್ವಾಮಿ ನಾವು ಬಡವರು
ಈ ದಿನದ ದುಡಿತಕ್ಕೆ
ಸಿಕ್ಕ ಹಣದಲ್ಲಿ ಊಟವ ಮಾಡಿ
ಈ ದಿನದ ಸುಖ ಪಯಣ
ಮುಗಿಸುವವರು ಸ್ವಾಮಿ ನಾವು ಬಡವರು ನಾವು ಬಡವರು
ಬಾಡಿಗೆ ಮನೆಯ ಸೂರಿನಡಿ
ವರ್ಷಾನುಗಟ್ಟಲೆ ಕಾಲ ಕಳೆಯುವವರು
ಗಂಜಿಯನ್ನಾಗಲಿ ಹಳಸಿದ ಅನ್ನವನ್ನಾಗಲಿ
ತಿಂದು ಬದುಕುವರು ಸ್ವಾಮಿ ನಾವು ಬಡವರು ನಾವು ಬಡವರು
ಸಾಲು ಸಾಲು ಮಗುವನ್ನು ಹೆರುವ ತಾಯಿ
ಬಡತನದ ಮನೆಯಲ್ಲಿ ಹೆಣ್ಣು
ಮಕ್ಕಳ ಮದುವೆಯ ಸರದಿ ಸಾಲು ನಾವು ಬಡವರು ಸ್ವಾಮಿ ನಾವು ಬಡವರು
ಕೊನೆಗಾಲದಲ್ಲಿ ಮಕ್ಕಳ ಮದುವೆ ಮಾಡಿ
ಒಂದೊತ್ತಿನ ಊಟಕ್ಕೂ
ಎಲ್ಲರ ಹತ್ತಿರ ಕೈ ಒಡ್ಡುವ
ಬಡಪಾಯಿಗಳು ಸ್ವಾಮಿ ನಾವು ಬಡವರು ನಾವು ಬಡವರು
ರಾಹುಲ್ ಸರೋದೆ
ಗಂಗಾವತಿ
Thank you sir/madem