ಸಿಂದಗಿ: ಭೂತ್ ಮಟ್ಟದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳ ಕುರಿತು ಮನವರಿಕೆ ಮಾಡುವುದರ ಜೊತೆಗೆ ಪಕ್ಷ ಸಂಘಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರು, ಕೇಂದ್ರ ಆಹಾರ ನಿಗಮದ ರಾಜ್ಯದ ಮುಖ್ಯಸ್ಥರು ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೀದರ ಜಿಲ್ಲೆಯ ಪ್ರವಾಸ ಕೈಕೊಳ್ಳುವ ನಿಮಿತ್ತ ವಿಜಯಪುರ ಮಾರ್ಗದಿಂದ ತೆರಳಿದ ಸಂದರ್ಭದಲ್ಲಿ ಸಿಂದಗಿ ಬಿಜೆಪಿ ಮಂಡಲ ಕಛೇರಿಗೆ ಭೇಟಿ ನೀಡಿ ಪದಾಧಿಕಾರಿಗಳ ಜೊತೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವುರ, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಬಿಜೆಪಿ ಪ್ರಮುಖರಾದ ಶಂಭುಲಿಂಗ ಕಕ್ಕಳಮೇಲಿ ಮುತ್ತು ಶಾಬಾದಿ, ಚಂದ್ರಶೇಖರ ನಾಗೂರ ಶ್ಯಾಮ್ ಪುಜಾರಿ, ಪ್ರಧಾನ ಕಾರ್ಯದರ್ಶಿ ಗುರು ತಳವಾರ್, ಬಿ.ಎಚ್. ಬಿರಾದಾರ, ಶ್ರೀಶೈಲ ಯಳಮೇಲಿ ಸುದರ್ಶನ ಜಿಂಗಾಣಿ, ಶೈಲಾ ಸ್ಥಾವರಮಠ, ಶಿವಕುಮಾರ್ ಬಿರಾದಾರ, ಶ್ರೀಶೈಲ ಕಲಬುರ್ಗಿ ಸಿದ್ದಲಿಂಗಯ್ಯ ಹಿರೇಮಠ, ಶಿವಾನಂದ ಹಳಿಮನಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.