ಸಂಸದ ರಮೇಶ ಜಿಗಜಿಣಗಿ ಅವರಿಂದ: ಜಲಜೀವನ ಮಿಷನ್

Must Read

ಯೋಜನೆಯ ಭೂಮಿ ಪೂಜೆ ಹಾಗೂ ಕಾರ್ಮಿಕರಿಗೆ ಕಿಟ್ ವಿತರಣೆ

ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕನ್ನೊಳ್ಳಿ ಬೂದಿಹಾಳ, ಬಂದಾಳ, ಚಿಕ್ಕ ಸಿಂದಗಿ, ಡವಳಾರ, ಗುಬ್ಬೇವಾಡ ಗ್ರಾಮಗಳಲ್ಲಿ ಕೇಂದ್ರದ ಮಾಜಿ ಸಚಿವರು ಹಾಲಿ ಸಂಸದರಾದ ರಮೇಶ್ ಜಿಗಜಿಣಗಿ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಕೇಂದ್ರದ ಸಚಿವನಾದ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದೀಜಿ ಅವರ ಸರ್ಕಾರದಲ್ಲಿ ಯೋಜನೆಯು ಪ್ರತಿ ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ನೀಡುವ ಯೋಜನೆ ಜಾರಿಗೆ ತರಬೇಕು ಎಂದು ‘ಜಲ ಜೀವನ ಮಿಷನ್’ ಯೋಜನೆ ತಂದು ದೇಶದ ಪ್ರತಿ ಮನೆಗೆ ಶುದ್ಧ ನೀರನ್ನು ಮನೆಗೆ ನೀಡುವ ಯೋಜನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಗೆ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ಹದಿನೈದು ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದರು.

ನಾನು ಸಂಸದನಾದ ಮೇಲೆ 40 ಸಾವಿರ ಕೋಟಿ ವೆಚ್ಚದಲ್ಲಿ ಕೂಡಗಿ ವಿದ್ಯುತ್ ಸ್ಥಾವರ, ಜಿಲ್ಲೆಯ ಪ್ರಮುಖ ಹೆದ್ದಾರಿಗಳು, ವಿಜಯಪುರ ನಗರದ ಮೇಲು ಸೇತುವೆಗಳು… , ಹೀಗೆ ಸಾವಿರಾರು ಕೋಟಿ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ಮಾತನಾಡಿ, ಸಂಸದರು ಸರಳ ಸಂಸದರಾಗಿದ್ದು ಅವರು ಕೆಲಸ ಮಾಡಿದ್ದನ್ನು ಎಂದೂ ಹೇಳಿಕೊಳ್ಳುವುದಿಲ್ಲ ಹೀಗಾಗಿ ಅವರು ಮಾಡಿದ ಕೆಲಸಗಳು ಬೆಳಕಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತದೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಂಸದರ ಅನುದಾನವನ್ನು ನನ್ನ ಮತ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಹಲವಾರು ರಸ್ತೆಗಳು ದೇವಸ್ಥಾನಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಸದರ ಅವಧಿಯಲ್ಲಿ ಆಗಿವೆ ಎಂದರು.

ಈ ಸಂದರ್ಭದಲ್ಲಿ ಸಂಸದರ ತಾಲೂಕು ಪಂಚಾಯತ್ ನಲ್ಲಿನ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿದರು.

ಅಶೋಕ್ ಅಲ್ಲಾಪುರ್ ಮಂಡಲ ಅಧ್ಯಕ್ಷ ಈರಣ್ಣ ರಾವೂರ್, ಶಂಕರ್ ಬಗಲಿ, ಸಿದ್ದು ಬುಳ್ಳಾ, ಬಿ.ಆರ್. ಯಂಟಮಾನ , ಸಂತೋಷ ಪಾಟೀಲ, ಬಿ.ಎಚ್. ಬಿರಾದಾರ, ರಾಜಶೇಖರ ಪೂಜಾರಿ,ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಶಿಲ್ಪಾ ಕುದರಗೊಂಡ, ಸುದರ್ಶನ್ ಜಿಂಗಾಣಿ ಸೇರಿದಂತೆ ಗ್ರಾಮಸ್ಥರು, ಕಾರ್ಯಕರ್ತರು ಬಾಗವಹಿಸಿದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಬೆಳಗಾವಿಯಿಂದ ಉಡಾನ್ ಸೇವೆ ಪುನಾರಂಭಿಸಲು ಕಡಾಡಿ ಮನವಿ

ಮೂಡಲಗಿ:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಉಡಾನ್ ಯೋಜನೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳಿಗೆ ಈ ಮೊದಲು ವಿಮಾನಯಾನ ಸಂಸ್ಥೆಗಳು ಒದಗಿಸುತ್ತಿದ್ದ...

More Articles Like This

error: Content is protected !!
Join WhatsApp Group