spot_img
spot_img

ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಪ್ರಕೃತಿ ವಿಕೋಪ ಸಹಜ

Must Read

- Advertisement -

ಪುರಾಣ,ಇತಿಹಾಸದಲ್ಲಿ ಕಾಣುವ ರಾಜಕೀಯ ಬದುಕಿನಲ್ಲಿ ರಾಜ್ಯವಿಸ್ತರಣೆಯೆ ರಾಜನ ಶ್ರೇಯಸ್ಸು ಎಂಬುದನ್ನು ಎತ್ತಿ ಹಿಡಿದಿದೆ. ಆದರೆ ಅದು ಧರ್ಮದ ಪರವಾಗಿರಬೇಕಿತ್ತು.ಯುದ್ದ ನೀತಿ ಪವಿತ್ರಮಯ ಆಗಿತ್ತು. ದುಷ್ಟಶಕ್ತಿಯನ್ನು ಮಟ್ಟಹಾಕೋದೆ ಯುದ್ದದ ಉದ್ದೇಶವಾಗಿತ್ತು.

ರಾಮಾಯಣ,ಮಹಾಭಾರತ ಪುರಾಣ ಕಥೆಗಳಲ್ಲಿ ನಾವು ಈ ಸತ್ಯ ಗಮನಿಸಿದ್ದೇವೆ ಆದರೆ, ಈಗಿನ ರಾಜಕೀಯದಲ್ಲಿ ಕೇವಲ ಹಣ, ಸ್ಥಾನ, ಅಧಿಕಾರ ಗಳಿಸಿ ಜನರನ್ನು ಆಳೋದಷ್ಟೆ ಮುಖ್ಯವಾಗಿಸಿಕೊಂಡಿರೋ ಶಾಸಕರಾಗಲಿ, ಮಂತ್ರಿ ಮಹೋದಯರಾಗಲಿ, ವಿರೋಧ ಪಕ್ಷವಾಗಲಿ ತಮ್ಮ ಆತ್ಮಾವಲೋಕನಕ್ಕೆ ಸಮಯವಿಲ್ಲದೆ ಹೊರಗಿನ ಹಾರಾಟ, ಹೋರಾಟ ನಡೆಸಿದ್ದಾರೆ.

ಇದರಿಂದಾಗಿ ಸಮಸ್ಯೆಗಳು ಬೆಳೆದು ನಿಂತಿದೆ. ಜನರ ಸಮಸ್ಯೆಗಿಂತ ರಾಜಕಾರಣಿಗಳ ಸಮಸ್ಯೆ ಬೆಳೆದರೆ, ಜನರ ಸಮಸ್ಯೆಗೆ ಸ್ಪಂದಿಸುವ ಜ್ಞಾನವಿರುವುದೆ?. ಯಾವುದೇ ಸಮಸ್ಯೆಯ ಮೂಲ ಪ್ರಜಾಪ್ರಭುತ್ವದ ಪ್ರಜೆಗಳೆ ಆದಾಗ, ನಮ್ಮ ನಮ್ಮ ಸಮಸ್ಯೆಗೆ ಪರಿಹಾರ ಹಣದಿಂದ ದೊರೆಯಲಾಗದು.

- Advertisement -

ಇದಕ್ಕೆ ಸತ್ಯಜ್ಞಾನ ಅಗತ್ಯ. ಇಲ್ಲಿ ಸತ್ಯ ಯಾವುದು?. ನಾವೆಲ್ಲರೂ ಪ್ರಜೆಗಳಷ್ಟೆ. ಭಾರತೀಯ ಪ್ರಜೆಗಳಾಗಿ ಅದರ ಮೂಲ ಶಿಕ್ಷಣ, ಧರ್ಮ,ಸಂಸ್ಕೃತಿಗೆ ವಿರುದ್ದವಾಗಿ ನಡೆದಾಗ ಸಮಸ್ಯೆಗಳು ಸುತ್ತಿಕೊಳ್ಳುತ್ತದೆಂಬುದೆ ಸತ್ಯಜ್ಞಾನ. ಕಾಲನ್ನು ತಲೆಯೆಂದು ಬಳಸಿಕೊಳ್ಳಲು ಆಗದು ಹಾಗೆ ತಲೆಯಲ್ಲಿರೋ ಜ್ಞಾನವನ್ನು ಕಾಲಿನಿಂದ ತುಳಿದು ಹೊಸಕಿ ಹಾಕಿದರೆ ನಷ್ಟ ಯಾರಿಗೆ?.

ಜ್ಞಾನದಿಂದ ವಿಜ್ಞಾನ ಪ್ರಪಂಚ ಬೆಳೆದಿದೆ ಆದರೆ, ಇಲ್ಲಿ ಕೇವಲ ದೇಹ ಮಾತ್ರ ಕಾಣುತ್ತಿದೆ ಆತ್ಮದರ್ಶನ ಹಿಂದುಳಿದಿದೆ. ಹಿಂದುಳಿದವರಿಗೆ ಹಣ  ನೀಡಿದರೆ ಋಣ ಹೆಚ್ಚಾಗುತ್ತದೆ. ಮಾಧ್ಯಮ, ಮಾನವ, ಮಧ್ಯವರ್ತಿ, ಮಹಿಳೆ ಮಧ್ಯದಲ್ಲಿ ನಿಂತು ಸರ್ಕಾರ ಪ್ರಜೆ, ದೇವರು ಅಸುರರು,ಪತಿ ಮಕ್ಕಳು ತನ್ನ ವಶದಲ್ಲಿರಬೇಕೆಂದು ಅಸತ್ಯ, ಅಧರ್ಮ, ಅನ್ಯಾಯಕ್ಕೆ ಸಹಕರಿಸಿದರೆ ಅದು ತನ್ನ ಕಾಲಬುಡವೇ ಬರೋದೆನ್ನೋ ಸತ್ಯ ತಿಳಿದರೆ ಇದ್ದಲ್ಲಿಯೇ ನಿಂತು ಜೀವನದ ಉದ್ದೇಶ ತಿಳಿದು ತಮ್ಮ ತಮ್ಮ ಮೂಲದ ಕಡೆಗೆ ನಡೆಯೋ ಪ್ರಯತ್ನಪಟ್ಟರೆ ಮುನ್ನಡೆಯಬಹುದು.

ಆಧ್ಯಾತ್ಮದ ಈ ಸತ್ಯ ಅನುಭವದಿಂದ ತಿಳಿಯಲು ಮಹಾತ್ಮರ ಹಾಗೆ ನಡೆಯಬೇಕೆಂದು ಪುರಾಣಗಳೆ ತಿಳಿಸಿದೆ.ಆದರೆ, ಈ ಪ್ರಜಾಪ್ರಭುತ್ವ ಪ್ರಜೆಗಳ ಅಜ್ಞಾನಕ್ಕೆ ಬೆಲೆ ಕೊಟ್ಟು ರಾಜಕೀಯದಲ್ಲಿ ಮುನ್ನಡೆದರೆ ಮಧ್ಯವರ್ತಿ ಗಳಿಗೆ ಸತ್ಯ ತಿಳಿಸೋರು ಯಾರು?

- Advertisement -

ಮಧ್ಯವರ್ತಿಗಳಿಗೆ ಮೇಲೆ ಕೆಳಗೆ ,ಶ್ರೀಮಂತ ಬಡವ, ದೇಶ ವಿದೇಶ, ಬಿಜೆಪಿ, ಕಾಂಗ್ರೆಸ್ ಎಲ್ಲರಿಂದ ಹರಿದು ಬರುವ. ಹಣ,ಅಧಿಕಾರ ಹಾದು ಹೋಗುವಾಗ ಎಷ್ಟು ಪರಾವಲಂಬಿಗಳೆಂಬ ಅರಿವಿದ್ದರೆ ತನ್ನ ಆತ್ಮ ರಕ್ಷಣೆಗೆ ಸತ್ಯದ ದಾರಿ ಹಿಡಿಯಬಹುದಷ್ಟೆ. ಇಲ್ಲಿ ಮಾನವನ ಅರ್ಧಸತ್ಯದ ರಾಜಕೀಯ ಇಡೀ ಮನುಕುಲಕ್ಕೆ ಅಪಾಯ.ಎಲ್ಲಾ ‌ದೇಶದಲ್ಲಿರೋ ಮಹಿಳೆಯರಿಗಿಂತ ಭಾರತೀಯ ಮಹಿಳೆಯರಲ್ಲಿ ಸತ್ಯ ಜ್ಞಾನ ಹೆಚ್ಚು, ಹಾಗೆ ಭಾರತದೊಳಗಿನ ಎಲ್ಲಾ ರಾಜ್ಯ ಕರ್ನಾಟಕದ ಸಂಸ್ಕೃತಿ, ಭಾಷೆಯನ್ನು ಒಳಗೊಂಡು ರಾಜ್ಯದ ತುಂಬಾ ಇತರ ರಾಜ್ಯದವರಿದ್ದರೂ ರಾಜ್ಯದ ಭಾಷೆ,ಸಂಸ್ಕೃತಿಯನ್ನು ವ್ಯವಹಾರಕ್ಕಷ್ಟೇ ಬಳಸಿದರೆ ಆಗೋ ನಷ್ಟ ಕೇವಲ ಭಾರತಕ್ಕಲ್ಲ ಕನ್ನಡಮ್ಮನಿಗಲ್ಲ ಪ್ರಜಾಪ್ರಭುತ್ವಕ್ಕೆ ನಷ್ಟ.

ಯಾರನ್ನೂ,ಯಾವುದನ್ನೂ ದುರುಪಯೋಗಪಡಿಸಿಕೊಂಡರೆ ಮುಂದೆ ಅದೇ ದುಷ್ಟರಿಗೆ ದಾರಿ ಆಗುತ್ತದೆ. ಇದು ಸಂಸಾರದೊಳಗಿರಬಹುದು, ಸಮಾಜದೊಳಗಿರಬಹುದು. ಪ್ರಕೃತಿಗೆ ವಿರುದ್ದವಾಗಿ ನಡೆದರೆ ಪ್ರಕೃತಿ ವಿಕೋಪ ಸಹಜ. ಜೀವವೇ ಹೋದ ಮೇಲೆ ಜೀವನ ಎಲ್ಲಿರುತ್ತದೆ? ಜೀವದ ಮೂಲವನ್ನು ತಲುಪಲು ರಾಜಕೀಯ ಬೇಕೆ? ಜೀವಾತ್ಮ ಪರಮಾತ್ಮ ಒಳಗೆ ಹೊರಗೆ ಆವರಿಸಿರುವಾಗ ನಾನೇ ಸರಿ ಎನ್ನುವ ಅಹಂಕಾರವೆ ಮಾನವನಿಗೆ ದೊಡ್ಡ ಶತ್ರುವಾಗಿರುವಾಗ ಹೊರಗಿನ ಶತ್ರುಗಳಿಂದ ಬುದ್ದಿ ಕಲಿಸುವುದೂ ಆ ಅಗೋಚರ ಶಕ್ತಿಯೆ.

ಆದರೂ ನಾವೇನು ಮಾಡಲು ಬಂದಿದ್ದೇವೆನ್ನುವುದರ ಬದಲಾಗಿ ಯಾರು ಏನು ಮಾಡುತ್ತಿದ್ದಾರೆನ್ನುವುದರ ಚಿಂತನೆಯಲ್ಲಿ ಚರ್ಚೆ ಮಾತ್ರ ನಡೆಸಿಕೊಂಡರೆ ಜೀವನದ ಸಮಯ ವ್ಯರ್ಥ. ಇದರಲ್ಲಿ ನಮ್ಮ ಸಹಕಾರ ಧರ್ಮದ ಪರವಿದೆಯೋ ಅಧರ್ಮದ ಪರವಿದೆಯೋ ಎನ್ನುವ ಜ್ಞಾನವಿದ್ದರೆ ಉತ್ತಮ.

ನನ್ನ ಸಂಪಾದನೆಯ ಮೂಲವೇ ವಿದೇಶಿಗಳದ್ದಾಗಿದ್ದರೆ ದೇಶ ಭಕ್ತಿ ಕೇವಲ ತೋರುಗಾಣಿಕೆಯಾಗುತ್ತದೆ. ರಾಜಕೀಯದಲ್ಲಿ ಕೇವಲ ಭ್ರಷ್ಟಾಚಾರಿಗಳಿಗೇ ಸಹಕಾರ ಅಧಿಕಾರ,ಜನಬಲ,ಹಣಬಲ ಇದ್ದರೆ ಭ್ರಷ್ಟರಿಗೆ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಲ್ಲಿ ಅಡಗಿರುವ ಅತಿಯಾದ ವಿದೇಶಿ ವ್ಯಾಮೋಹದ ಪ್ರತಿಫಲ ಪ್ರಜೆಗಳೆ ಅನುಭವಿಸಿ ಜೀವನದ ಮುಖ್ಯ ಉದ್ದೇಶ ಮರೆತಿದ್ದರೂ ಮೇಲಿರುವ ಆ ಶಕ್ತಿ ಅಧರ್ಮ, ಅನ್ಯಾಯ, ಅಸತ್ಯವನ್ನು ಸಹಿಸಿಕೊಂಡಿರಲು ಕಷ್ಟ.

ಸಹನೆ ಇರಬೇಕು ಅತಿಯಾದರೆ ಅಸಹನೀಯ ಪರಿಸ್ಥಿತಿ ಮನುಕುಲಕ್ಕೆ ತಿರುಗುತ್ತದೆ. ಕ್ರಾಂತಿಯಿಂದ ಜೀವಹಾನಿ, ಮಾನಹಾನಿ, ಧನಹಾನಿ ಹೆಚ್ಚಾಗುತ್ತದೆ. ಇದೇ ಮುಂದಿನ ಪೀಳಿಗೆಗೆ ಪಠ್ಯವಾದರೆ ಮತ್ತೆ ಅದೇ ಇತಿಹಾಸ ಹಿಂದಿನ ರಾಜರ ಕಾಲದ ಆಡಳಿತದಲ್ಲಿ ರಾಷ್ಟ್ರದ ಬಗ್ಗೆ ಗೌರವ, ಪ್ರೀತಿ ಕಾಣಬಹುದಿತ್ತು.

ಈಗ ಕೇವಲ ಅಧಿಕಾರದಾಹವಷ್ಟೆ  ಕಾಣುತ್ತಿದ್ದೇವೆ.‌ ಹಣಕ್ಕಾಗಿ ವಿದೇಶಿಗಳಿಗೆ ಮಣೆ ಹಾಕುವ ಅಜ್ಞಾನದಿಂದ ದೇಶದ ಸಾಲ ಕಳೆಯುವುದೆ? ಸ್ವತಂತ್ರ ಜ್ಞಾನ ಬೆಳೆಯುವುದೆ? ಅದ್ವೈತ ಎಂದರೆ ಒಂದು ಎಂದರ್ಥ. ಒಂದಾಗೋದು ಎಂದಾಗ ನಮ್ಮೊಳಗಿದ್ದ ಮೂಲ ಧರ್ಮ ಕರ್ಮವನ್ನರಿತು ಅದಕ್ಕೆ ಪೂರಕವಾದ ಶಿಕ್ಷಣ ಪಡೆದು ಒಂದೇ ದಾರಿಯಲ್ಲಿ ನಡೆಯುವುದು.

ಅದಕ್ಕೆ ಮಾರಕವಾದ ಹೊರಗಿನ ದಾರಿ ಮುಂದೆ ಬಿಕ್ಕಟ್ಟು ತರುವುದೆನ್ನುವ ಕಾರಣಕ್ಕಾಗಿಯೇ ಹಿಂದಿನ ಕಾಲದ ಶಿಕ್ಷಣ ಧಾರ್ಮಿಕ ಗುರು ಹಿರಿಯರು ನೀಡುತ್ತಿದ್ದರು. ಈಗ ಶಿಕ್ಷಣವನ್ನು ವ್ಯವಹಾರ ಮಾಡಿಕೊಂಡು ಭೌತಿಕಾಸಕ್ತಿ ಬೆಳೆಸಿಕೊಂಡರೆ ಮಕ್ಕಳಿಗೆ ಯಾವುದು ಕಷ್ಟ ಯಾವುದು ಸುಖ ಎನ್ನುವ ಅನುಭವ ಆಧ್ಯಾತ್ಮದ ಪ್ರಕಾರ ಅರ್ಥವಾಗದೆ ಜೀವ ಬೌತಿಕ ದಲ್ಲಿ ರಾಜಕೀಯದ ಕಡೆಗೆ ನಡೆದು ಅತಂತ್ರಸ್ಥಿತಿಗೆ ತಲುಪಿದೆ.ಕಾಲಕ್ಕೆ ತಕ್ಕಂತೆ ನಡೆಯಬೇಕು. ನಿಜ ಆದರೆ ಧರ್ಮ ಸತ್ಯ ಇಲ್ಲದ ಜೀವನ ವ್ಯರ್ಥ ವೆಂದಾಗ ತಿರುಗಿ ಬರಲೇಬೇಕು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group