ಸಿಂದಗಿ : ವಿಜಯಪುರ ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಹಾಗೂ ಸೈಕಲ್ ಸವಾರಿ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ಪ್ರೊಮೋ ಬಿಡುಗಡೆ ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ ಚಿತ್ರ ತಂಡದಿಂದ ಹುಟ್ಟು ಹಬ್ಬದ ಶುಭ ಕೋರಿ ಸನ್ಮಾನಿಸಿದರು. ಇನ್ನೂ ಇದೇ ಸಂದರ್ಭದಲ್ಲಿ ಸೈಕಲ್ ಸವಾರಿ ನಟ ನಿರ್ದೇಶಕ ದೇವು ಅಂಬಿಗ ಹಾಗೂ ನಟಿ ದೀಕ್ಷಾ ಭೀಸೆ ಹಾಗೂ ಖಳ ನಟ ಶಿವಾಜಿ ಮೆಟಗಾರ ಅವರ ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಳ್ಳು ಮುಗಿಬಿದ್ದಿದ್ದರು. ಅಭಿಮಾನಿಗಳನ್ನು ಸಮಾಧಾನ ಮಾಡಲು ಹರಸಾಹಸ ಪಡಬೇಕಾಯಿತು.
ಚಿತ್ರ ಬಿಡುಗಡೆ ಮುನ್ನವೇ ಸೈಕಲ್ ಸವಾರಿ ಚಿತ್ರಕ್ಕೆ ಅಭಿಮಾನಿಗಳು ಈ ಮಟ್ಟಕ್ಕೆ ಪ್ರೀತಿ ತೋರಿಸಿದ್ದಕ್ಕೆ ಚಿತ್ರ ತಂಡ ಪತ್ರಿಕೆಯ ಮುಖಾಂತರ ಧನ್ಯವಾದಗಳು ಹೇಳುತ್ತಾರೆ ನಟ ನಿರ್ದೇಶಕ ದೇವು ಅಂಬಿಗ ಹಾಗೂ ನಟಿ ದೀಕ್ಷಾ ಭೀಸೆ. ಇದೇ ಸಂದರ್ಭದಲ್ಲಿ ನಟ ನಿರ್ದೇಶಕ ದೇವು ಅಂಬಿಗ, ನಟಿ ದೀಕ್ಷಾ ಭೀಸೆ ಹಾಗೂ ಪಾಲಕರು,ಮುಂತಾದ ಕಲಾವಿದರು ಹಾಗೂ ರಾಜಕೀಯದ ಅನೇಕ ಗಣ್ಯ ವ್ಯಕ್ತಿಗಳು ಸೇರಿದಂತೆ ಉಪಸ್ಥಿತರಿದ್ದರು.
ನಾಯಕ ನಟರಾಗಿ ದೇವು ಅಂಬಿಗ ನಾಯಕಿಯಾಗಿ ಭರತನಾಟ್ಯದಲ್ಲಿ ಸಾಧನೆಗೈದ ವಿಜಯಪುರದ ಅಪ್ಪಟ ಪ್ರತಿಭೆ ದೀಕ್ಷಾ ಭೀಸೆ, ವಿಲನ್ ಪಾತ್ರದಲ್ಲಿ ಅದ್ಭುತ ನಟಸಿದ ಶಿವಾಜಿ ಮೇಟೆಗಾರ, ಲೋಕೇಶ, ಆನಂದ ಕಾಂಬ್ಳೆ, ಅಶೋಕ ಭಜಂತ್ರಿ, ಕಲ್ಮೇಶ ಮತ್ತು ತಂಡ. ಕಲಾವಿದರಾದ ನಾಗರಾಜ ದೊಡಮನಿ,ರಾಮಚಂದ್ರ ಕಾಂಬ್ಳೆ, ಶೀವಲಿಲಾ, ನ್ಯಾಸಾ, ಕಾವ್ಯ,ರಂಜು, ಗೀತಾ, ಜಾನು, ಜಯಶ್ರೀ, ಮೋಹನ, ಪ್ರಭು,ಹಬೀಬ, ಹಾಸ್ಯಕಲಾವಿದ ದೇವುಕುಮಾರ ಸಾತಲಗಾಂವ್, ಸಚೀನ, ಮಾಂತು, ಶಿವಾನಂದ ಕಂಕಣವಾಡಿ, ಆರ್.ಜಿ ಮೇಡೆಗಾರ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ. ಚಿತ್ರದ ಚಿತ್ರೀಕರಣ ಮುಗಿದಿದ್ದು ಸಂಕಲನ, ಡಬ್ಬಿಂಗ್, ಬಿಜಿಎಮ್, ಎಸ್ಎಫ್ಎಕ್ಸ್, ಕಲರಿಂಗ್, ಡಿಐ ದೇವು ಅಂಬಿಗ ಅವರ ಕಲಾರಂಗ ಫಿಲ್ಮ್ ಸ್ಟುಡಿಯೋ ವಿಜಯಪುರದಲ್ಲಿ ಮುಗಿಸಲಿದೆ. ಇನ್ನೂ ಸೈಕಲ್ ಸವಾರಿ ಚಿತ್ರಕ್ಕೆ ಸುರೇಶ ಶಿವೂರ ನಿರ್ಮಾಣ ಮಾಡಿದ್ದಾರೆ.
ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ನಿರ್ದೇಶನ ದೇವು. ಕೆ ಅಂಬಿಗ ಅವರು,ಕಲಾರಂಗ ಫಿಲ್ಮ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ, ಛಾಯಾಗ್ರಾಹಣ ರೋಹನ್ ದೇಸಾಯಿ, ಗೀತ ಸಂಯೋಜನೆ ವಿನೋದ ಹಿರೇಮಠ, ಸಹ ನಿರ್ದೇಶನ ಶನ್ಮುಖ ಕೊಟ್ಟಲಗಿ ಹಾಗೂ ವಿನೋದ ರಾಠೋಡ, ಕಲಾ ನಿರ್ದೇಶಕ ಮಾಂತು ದಳವಾಯಿ, ಕಲಾ ನಿರ್ದೇಶಕ ಭೀಮರಾಯ ಕಾರಜೋಳ, ಸಹಾಯಕ ನಿರ್ದೇಶಕರು ಮಾಂತು ದಳವಾಯಿ ತಿರುಪತಿ ಹಾಗೂ ಸಚೀನ, ಸಾಹಸ ನಿರ್ದೇಶಕ ದುರ್ಗೇಶ. ಅತೀ ಶೀಘ್ರದಲ್ಲಿಯೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ಪತ್ರಿಕೆಗೆ ನಿರ್ದೇಶಕ ದೇವು ಅಂಬಿಗ ತಿಳಿಸಿದ್ದಾರೆ.
ವರದಿ – ವಿಶ್ವಪ್ರಕಾಶ ಮಲಗೊಂಡ