ಸಿಂದಗಿ: 2020- 21ನೆಯ ಸಾಲಿನ ಸಿಬಿಎಸ್ಇ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಿಂದಗಿಯ ಲೊಯೋಲ ಶಾಲೆಯ ಪ್ರಾಂಶುಪಾಲರಾದ ಫಾಧರ್ ಸಿರಿಲ್ ಅವರು ತಿಳಿಸಿದ್ದಾರೆ.
ಶಾಲೆಯ ಹತ್ತನೆಯ ತರಗತಿಯ ಪ್ರಥಮ ತಂಡದಲ್ಲಿ ಒಟ್ಟು 27 ವಿದ್ಯಾರ್ಥಿಗಳಿದ್ದು,ಇವರಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದು, ಶಾಲೆಯು ಶೇಕಡಾ ನೂರಕ್ಕೆ 100ರಷ್ಟು ಫಲಿತಾಂಶ ಸಾಧಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಕುಮಾರಿ ಬೃಂದಾ ಶಿವಾನಂದ.ತಾವರಖೇಡ ಇವಳು ಶೇಕಡ 95.8 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅದರಂತೆ ಕುಮಾರಿ ದಿವ್ಯಾ ಬಿರಾದಾರ ಶೇಕಡಾ 92.8, ಕುಮಾರಿ ಅಲ್ಫಿಯಾ ಖಾದರಭಾಷಾ.ಬಂಕಲಗಿ ಶೇಕಡಾ 91.4, ಕುಮಾರ ಪ್ರವೀಣ ಜಟ್ನಾಳ ಶೇಕಡಾ 87.6 ಕುಮಾರ್ ಕುಮಾರ್ ಪುನೀತ ಬಿರಾದಾರ ಶೇಕಡಾ 87, ಕುಮಾರ ಪ್ರದೀಪ್ ಜಾಧವ 85.6 , ಕುಮಾರ ಮಂಜುನಾಥ ತಳವಾರ ಶೇಕಡಾ 83.6, ಕುಮಾರ ವಿಕಾಸ ಜಮಾದಾರ ಶೇಕಡಾ 83.4, ಕುಮಾರಿ ಸೌಜನ್ಯ ಬಿ. ಶೇಕಡಾ 80.6, ಕುಮಾರಿ ಐಶ್ವರ್ಯ ಪಾಟೀಲ. ಶೇಕಡಾ 80.4, ಕುಮಾರ ಮುಕೇಶ್ ಶೇಕಡಾ 80.2, ಕುಮಾರಿ ಸೌಮ್ಯ ಬಿ. ಶೇಕಡಾ 79.6,ಕುಮಾರ ಗಗನ ಶೇಕಡಾ 77.2, ಕುಮಾರಿ ಐಶ್ವರ್ಯ ದಿಡ್ಡಿಮನಿ. ಶೇಕಡಾ 75 ರಷ್ಟು ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಶಾಲೆಯ ಹತ್ತನೆಯ ತರಗತಿಯ ಪ್ರಥಮ ತಂಡದ ವಿದ್ಯಾರ್ಥಿಗಳ ಸಾಧನೆಗೆ, ಸಂಸ್ಥೆಯ ಉಪಾಧ್ಯಕ್ಷ ಫಾದರ್ ಅಂತೋನಿದಾಸ, ಶಾಲೆಯ ಪೂರ್ವದ ಸಂಚಾಲಕ ಫಾದರ್ ರೋಹನ್ ಡಿ ಅಲ್ಮೇಡಾ, ಫಾದರ್ ಆಲ್ವಿನ್ ಡಿಸೋಜ, ಪೂರ್ವದ ಪ್ರಾಂಶುಪಾಲೆ ಸಿಸ್ಟರ್ ಮಿಲಾಗ್ರಿನ್ ಹಾಗೂ ಪ್ರಸ್ತುತ ಪ್ರಾಂಶುಪಾಲ ಫಾದರ್ ಸಿರಿಲ್ ಹಾಗೂ ಉಪಪ್ರಾಂಶುಪಾಲೆ ಸಿಸ್ಟರ್ ಹೆಲೆನ್ ಡಿಸೋಜ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.