ಬೆಳಗಾವಿ – ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಭತ್ತು ಗಡಿಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಕರ್ಫ್ಯೂ ವಿಧಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ತಜ್ಞರು ಸಲಹೆ ನೀಡಿದಂತೆ ವೀಕೆಂಡ್ ಕರ್ಫ್ಯೂ ಜಾರಿಗೊಳಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮೈಸೂರು, ದಕ್ಷಿಣ ಕನ್ನಡ, ಬೀದರ, ಚಾಮರಾಜನಗರ, ಕೊಡಗು, ಕಲಬುರ್ಗಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು ಯಾವ ಯಾವ ಅಂಗಡಿಗಳು ತೆರೆಯುತ್ತವೆ ಯಾವುದು ಇಲ್ಲ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿಲ್ಲ.
ಈಗಾಗಲೇ ಇಂದು ರಾತ್ರಿ ಒಂಭತ್ತರಿಂದ ಲಾಕ್ ಡೌನ್ ಜಾರಿ ಎಂಬುದಾಗಿ ಘೋಷಿಸಲಾಗಿದ್ದು ಜನರು ಈಗಿನಿಂದಲೇ ಅದಕ್ಕಾಗಿ ಸಜ್ಜಾಗಬೇಕಾಗಿದೆ.