ಮೂಡಲಗಿಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಮನವಿ

Must Read

ಮೂಡಲಗಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸುವ ಬಗ್ಗೆ ಕೃಷಿ ಸಚಿವರೊಂದಿಗೆ ಮಾತನಾಡಿ ಮುಂದಿನ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವುದಾಗಿ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಕೃಷಿ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಮೂಡಲಗಿ ತಾಲೂಕಾದ ನಂತರ ನಗರದಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕೆಂದು ಶುಕ್ರವಾರ ಸಲ್ಲಿಸಲಾದ ಮನವಿಗೆ ಅವರು ಉತ್ತರಿಸಿದರು.

ಮೂಡಲಗಿ ತಾಲೂಕಿನಲ್ಲಿ ಸುಮಾರು ೩೮ ಸಾವಿರ ಎಕರೆ ಕೃಷಿ ಭೂಮಿ ಇದೆ, ರೈತರು ತಮ್ಮ ಕೆಲಸಗಳಿಗಾಗಿ ೨೦ ಕಿ.ಮೀ ದೂರದ ಅರಭಾವಿಗೆ ಹೋಗಬೇಕಾಗಿದೆ ಆದ್ದರಿಂದ ರೈತರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು ಎಂದು ಪ್ರಗತಿ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಕಡಾಡಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಗತಿ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಬಿ ಎಮ್ ಪಾಲಭಾವಿ, ಉಪಾಧ್ಯಕ್ಷ ಉಮೇಶ ಬೆಳಕೂಡ, ಭೀಮಶಿ ಢವಳೇಶ್ವರ, ವಿಠ್ಠಲ ತುಪ್ಪದ ಹಾಗೂ ಕಾರ್ಯದರ್ಶಿ ಶಿವಬಸು ಕತ್ತಿ ಇದ್ದರು.

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group