ಸಿಂದಗಿ: ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡಿ ಸಮಾಜದ ಕನಿಷ್ಠ ಮಟ್ಟದಲ್ಲಿರುವ ಕುಟುಂಬಗಳಿಗೆ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸೃಜನಾತ್ಮಕ ಆಲೋಚನೆಗಳ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿದ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರು ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜನನಾಯಕ, ಬಡವರಧ್ವನಿ, ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸ್ ಅವರ ಜಯಂತಿಯನ್ನು ಕೋವಿಡ್-19ರ ಮೂರನೇ ಅಲೆಯ ಭೀತಿ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಪ್ರಕಾಶ ಸಿಂದಗಿ, ಹಿಂದೂಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ಶಿವಲೀಲಾ ಕೊಣ್ಣೂರ, ಶಿರಸ್ತೆದಾರರಾದ ಸುರೇಶ ಮ್ಯಾಗೇರಿ, ಸಿ.ಬಿ.ಬಾಬಾನಗರ, ಶ್ರೀಮತಿ ಚವ್ಹಾಣ, ಕಂದಾಯ ನಿರೀಕ್ಷಕ ಐ.ಎಂ.ಮಕಾಂದಾರ, ಬಿಸಿಎಂ ಹಾಸ್ಟೇಲಗಳ ಮೇಲ್ವಿಚಾರಕರಾದ ಸಂಗನಗೌಡ ಪಟೀಲ, ಸೈಪನಮುಲ್ಕ ಮುಲ್ಲಾ, ಮಹಾಂತಯ್ಯ ಮಠಪತಿ, ಪ್ರಬಾಕರ ಬಿರಾದಾರ, ನಂದಪ್ಪ ಆನಗೊಂಡ, ಎಂ.ಬಿ.ನಾಯ್ಕೋಡಿ, ವಿಠ್ಠಲ ಉಡಗಿ, ನಂದಾಜ್ಯೋತಿ ನಾಶಿ, ಸಾವಿತ್ರಿ ಬಿರಾದಾರ ಸಿಬ್ಬಂದಿಗಳಾದ ದಾನಮ್ಮ ಹೂಗಾರ, ರಾಮನಗೌಡ ರಾಂಪೂರ, ಗುರನಾಥ ರಡ್ಡಿ, ಬಸು ಸೇರಿದಂತೆ ಹಲವರು ಭಾಗವಹಿಸಿದರು.