ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಭಗವಂತ ವರ್ಸಸ್ ಈಶ್ವರ ಒಬ್ಬರ ಮೇಲೆ ಒಬ್ಬರ ಆರೋಪ ಮಾಡಿಕೊಂಡು ಬಿಸಿಯಾಗಿದ್ದರೆ ಜಿಲ್ಲೆಯ ಅಭಿವೃದ್ಧಿ ಆಗುವುದೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಬೀದರ್ ಜಿಲ್ಲೆಯ ಜನರು.
ಕೊರೋನಾ ವೈರಸ್ ಕಾಟದಿಂದಾಗಿ ಇಡೀ ದೇಶ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸುತ್ತಿದ್ದರೆ ಜಿಲ್ಲೆಯ ಈ ಇಬ್ಬರು ನಾಯಕರು ತಮ್ಮ ತಮ್ಮ ವರ್ಚಸ್ಸಿಗಾಗಿ ಜಿಲ್ಲೆಯನ್ನೇ ನಿರ್ಲಕ್ಷಿಸಿ ಪರಸ್ಪರ ಆರೋಪಗಳಲ್ಲಿ ತೊಡಗಿದ್ದು ಜಿಲ್ಲೆಯ ಜನರು ಈ ಇಬ್ಬರ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವ ಕಾರಣಕ್ಕಾಗಿ ಜನಶೀರ್ವಾದ ಯಾತ್ರೆ ? ಎಂದು ಭಗವಂತ ಖೂಬಾ ಅವರನ್ನು ಪ್ರಶ್ನಿಸಿದ ಕೆಪಿಸಿಸಿ ರಾಜ್ಯ ಕಾರ್ಯ ಅಧ್ಯಕ್ಷ ಈಶ್ವರ ಖಂಡ್ರೆ, ತಮಗೆ ಜನರ ಸಲುವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಯೋಗ್ಯತೆ ಇಲ್ಲದೆ ವೈಫಲ್ಯ ವನ್ನು ಮುಚ್ಚಿ ಕೊಳ್ಳಲು ಇದ್ದ ಯೋಜನೆಗಳ ಹೆಸರು ಬದಲಾಯಿಸುವ ಮೂಲಕ ಜನರ ದಿಕ್ಕನ್ನು ಬದಲಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ಅವುಗಳನ್ನು ಬಿಜೆಪಿ ಸರಕಾರ ರದ್ದು ಮಾಡುತ್ತಾ ಇದೆ ಎಂದರಲ್ಲದೆ, ಹೆಸರು ಬದಲಾಯಿಸುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಹೇಳಿ ಎಂದು ಖಂಡ್ರೆ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆ, ವಸತಿಯೋಜನೆ ಕಾಂಗ್ರೆಸ್ ಪಾಲಾಗಿದೆ ಎಂದು ಹೇಳುತ್ತಿರಿ ನೀವು ಸುಳ್ಳು ಹೇಳುವದರಲ್ಲಿ ನಿಸ್ಸಿಮರು ಜನರ ದಾರಿ ತಪ್ಪಿಸಲು ಜನಶೀರ್ವಾದ ಯಾತ್ರೆ ಕೈಗೊಂಡಿದ್ದ, ಬಡಜನರ ರಿಗೆ ಕೊರೊನಾ ಸಮಯದಲ್ಲಿ ಚಿಕಿತ್ಸೆ ಸಿಗದೆ, ಲಸಿಕೆ ಸಿಗದೆ ಇದ್ದಾಗ ಅವರ ಕಷ್ಟ ಕೇಳಿದ್ದಿರಾ ?ಆಗ ಮನೆಯಲ್ಲಿ ಮಲಗಿ ಈಗ ಮಂತ್ರಿ ಯಾದ ಮೇಲೆ ಜನರಿಗೆ ಮುಖ ತೋರಿಸಲು ಬಂದಿದ್ದೀರಾ ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ನಮ್ಮ ಕಾಂಗ್ರೆಸ್ ಸರ್ಕಾರ ವಿದ್ದಾಗ ಬೀದರ ಜಿಲ್ಲೆಗೆ ಅನೇಕ ಹೊಸ ಹೊಸದಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ಅವೆಲ್ಲವನ್ನು ನೀವು ರದ್ದು ಪಡಿಸುವ ಕೆಲಸ ಮಾಡತ್ತಲಿದ್ದೀರಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದ ಕೆಪಿಸಿಸಿ ರಾಜ್ಯ ಕಾರ್ಯ ಅಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ