ಮುನವಳ್ಳಿ: “ಶಿಕ್ಷಕರ ಸಂಘದಲ್ಲಿ ಸತತ ಮೂರು ಅವಧಿ ಅಧ್ಯಕ್ಷರಾಗಿ ಸದ್ಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುರೇಶ ಬೆಳವಡಿಯವರು ಉತ್ತಮ ಸಂಘಟನಾ ಚತುರರು. ಎಲ್ಲಿಯೇ ಹೋಗಲಿ ತಂಡವಾಗಿ ಎಲ್ಲರನ್ನೂ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದರು.
ಅಷ್ಟೇ ಅವರ ಜೊತೆಗೆ ಸದಾ ಜೊತೆಯಾಗಿ ಇರುತ್ತಿದ್ದ ಎಚ್.ಆರ್.ಪೆಟ್ಲೂರವರದು ಗಟ್ಟಿ ಧ್ವನಿ.ತಮ್ಮ ಹೋರಾಟದ ಮೂಲಕ ಗುರುತಿಸಿಕೊಂಡವರು.ಪ್ರತಿಯೊಂದು ಸಭೆಗಳಲ್ಲಿಯೂ ವಿಚಾರಗಳನ್ನು ಕೇಳುವ ಗಟ್ಟಿ ಧ್ವನಿ ಹೊಂದಿದ್ದರು. ಅವರು ಈಗ ಅಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮೆ. ಬೆಳವಡಿಯವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರಚನಾತ್ಮಕ ಚಟುವಟಿಕೆಗಳು ಶಿಕ್ಷಕರ ಸಂಘದಿಂದ ಮೂಡಿ ಬರಲಿ” ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಎ.ಅಣ್ಣೀಗೇರಿಯವರು ಕರೆ ನೀಡಿದರು.
ಅವರು ಮುನವಳ್ಳಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ವ್ಹಿ.ಬೆಳವಡಿಯವರ ಬೀಳ್ಕೊಡುಗೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದ ಎಚ್.ಆರ್.ಪೆಟ್ಲೂರವರಿಗೆ ಸ್ನೇಹಜೀವಿ ಬಳಗದವರ ಗೆಳೆಯರ ವತಿಯಿಂದ ಜರುಗಿದ ಹೃದಯಸ್ಪರ್ಶಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸವದತ್ತಿ ತಾಲೂಕ ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ನಾವಲಗಟ್ಟಿ. ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ ಉಪಾಧ್ಯಕ್ಷರಾದ ಅನಸೂಯ ಮದನಬಾವಿ, ಶ್ರೀ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ ಅಧ್ಯಕ್ಷರಾದ ಮೌನೇಶ ಮಾಯಾಚಾರಿ, ನಿವೃತ್ತ ಮುಖ್ಯೋಪಾಧ್ಯಾಯರ ಅಶೋಕ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಆರ್.ವೈ.ಅಡಿಭಟ್ಟಿ “ ಬೆಳವಡಿಯವರು ಮಿತಭಾಷಿ. ಯಾವಾಗಲೂ ನಿಮ್ಮ ಕೆಲಸವೇನಿದೆ.? ನೇರವಾಗಿ ಹೇಳಿರಿ ಎಂದು ಕೇಳಿ ತಕ್ಷಣವೇ ಸ್ಫಂದಿಸುವ ಮನೋಭಾವದವರು. ಯುವ ಪೀಳಿಗೆಯ ನಾಯಕತ್ವ ವ್ಯಕ್ತಿತ್ವ ಹೊಂದಿದವರು.
ಪೆಟ್ಲೂರವರು ಇವರಿಬ್ಬರಿಗೂ ದೇವರು ಆಯುರಾರೋಗ್ಯವನ್ನು ನೀಡಲಿ” ಎಂದು ಆಶಿಸಿದರು. ಶಿಕ್ಷಕ ಬಿ.ಬಿ.ಹುಲಿಗೊಪ್ಪ ಮಾತನಾಡಿ “ ಸುರೇಶ ಬೆಳವಡಿಯವರೊಂದಿಗೆ ನಿಕಟಪೂರ್ವವಾಗಿ ಸದಾ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಣಮಂತ ಪೆಟ್ಲೂರವರಿಗೆ ಅವರ ಪರಿಶ್ರಮ ಮತ್ತು ಅದೃಷ್ಟದ ಮೂಲಕ ಈ ಹುದ್ದೆ ಲಭಿಸಿದ್ದು ನಮ್ಮೆಲ್ಲರ ಗುರುಭವನದ ಕನಸು ನನಸಾಗುವಂತಾಗಲಿ”ಎಂದು ಹಾರೈಸಿದರು.
ಸುಧೀರ ವಾಘೇರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ “ಮುನವಳ್ಳಿಯಲ್ಲಿ ಸ್ನೇಹಜೀವಿ ಬಳಗ ಹಿರಿಯರ ಮಾರ್ಗದರ್ಶನದಲ್ಲಿ ಒಂದು ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಮುನ್ನಡೆದಿದ್ದು. ತಮ್ಮ ಬಳಗ ಬೆಳೆದು ಬಂದ ಬಗೆಯನ್ನು” ತಿಳಿಸಿದರು.
ಪರಸಗಡ ತಾಲೂಕ ಪ್ರಾಥಮಿಕ ಪತ್ತಿನ ಸಂಘದ ನಿರ್ದೇಶಕರಾದ ಗುರುನಾಥ ಪತ್ತಾರ ಈ ಸಂದರ್ಭದಲ್ಲಿ ಸನ್ಮಾನಿತರಾದ ಸುರೇಶ ಬೆಳವಡಿ ಹಾಗೂ ಎಚ್.ಆರ್.ಪೆಟ್ಲೂರ ಬದುಕಿನ ಘಟ್ಟಗಳು ಅವರು ಸಾಗಿ ಬಂದ ದಾರಿಯ ಕುರಿತು ಅವಲೋಕನ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಜಯಶ್ರೀ ಕುಲಕರ್ಣಿ.ಶಿಲ್ಪಾ ವಡವಡಗಿ.ಪಡೆನ್ನವರ.
ಸುಜಾತಾ ಕರೋಶಿ. ಪ್ರಕಾಶ ಶೀಲವಂತ.ಬಿ.ಎಸ್.ಪೂಜೇರ.ಎಚ್.ಜಿ.ಬಾಳೇಕುಂದ್ರಿ.ಎನ್.ಆರ್.ಚಲವಾದಿ.ಸೋನೋನಿ.ಬಿ.ಐ.ಇ.ಆರ್.ಟಿ ವೈ.ಬಿ.ಕಡಕೋಳ.ಸಿಂದೋಗಿ ಸಿ.ಆರ್.ಪಿ ಸಿ.ವೈ.ನಿಪ್ಪಾಣಿ. ಅರ್ಟಗಲ್ ಪ್ರೌಢಶಾಲೆಯ ಶಿಕ್ಷಕರಾದ ಜಿ.ಪಿ.ಅವತಾರಿ.ಆರ್.ಎಸ್.ನೀಲೂಗಲ್. ಅಂಚೆ ಇಲಾಖೆಯ ರಾಜು ಹಟ್ಟಿ.
ಸ್ನೇಹಜೀವಿ ಬಳಗದ. ಜಿ.ಎಸ್.ಚಿಪ್ಪಲಕಟ್ಟಿ, ಮೈನುದ್ಧೀನ ಕೊಳಚಿ, ನಾಗರಾಜ ಕಿತ್ತೂರ, ಮಹಾಂತೇಶ ಜೇವೂರ, ಪಂಚಪ್ಪ ತಾಂದಳೆ, ಸುಭಾಸ ಬೂದಗಟ್ಟಿ, ಆನಂದ ವಾಡೇಕರ, ದಾವೂದ್ ಮುಲ್ಲಾ, ಮಾಳೇಶ ಕರಿಗಾರ, ಮಹಾದೇವ ಜೋತ್ಕನ್ನವರ, ಎಸ್.ಬಿ.ಬೇವಿನಗಿಡದ, ರಾಜು ನಾಯ್ಕರ, ಪಂಚು ಸುಣಗಾರ, ಬಾಳು ಹೊಸಮನಿ.ಮುಂತಾದವರ ಸಮ್ಮುಖದಲ್ಲಿ ಗೌರವ ಸನ್ಮಾನ ಜರುಗಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಎಚ್.ಆರ್.ಪೆಟ್ಲೂರ. “ತಮ್ಮ ಈ ಪ್ರೀತಿಯ ಗೌರವ ಸನ್ಮಾನಕ್ಕೆ ನಾನು ಸದಾ ಚಿರಋಣಿ. ಸದಾ ಶಿಕ್ಷಕರ ಒಡನಾಡಿಯಾಗಿ ಮಕ್ಕಳಿಗೆ ವಿದ್ಯೆಯ ನೀಡುತ್ತ.ತಮ್ಮ ಎಲ್ಲ ಆಸೆ ಆಕಾಂಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಅಧ್ಯಕ್ಷ ಹುದ್ದೆಯ ಗುರುತರ ಜವಾಬ್ದಾರಿ ನನ್ನ ಮೇಲಿದೆ.ಮುಂದಿನ ದಿನಗಳಲ್ಲಿ ಹಂತಹಂತವಾಗಿ ಒಂದೊಂದು ಕಾರ್ಯಗಳನ್ನು ಮಾಡುತ್ತ ಮೊಟ್ಟ ಮೊದಲಿಗೆ ಶಿಕ್ಷಕರ ಸೇವಾ ಪುಸ್ತಕಗಳನ್ನು ಗುರುಸ್ಪಂಧನದ ಮೂಲಕ ಸರಿಪಡಿಸುವ ಕಾರ್ಯ ಅಂದರೆ ಗಳಿಕೆ ರಜೆಗಳು.
ಇತರೆ ಮಾಹಿತಿಗಳು ಅಪೂರ್ಣವಾಗಿದ್ದಲ್ಲಿ ಸರಿಪಡಿಸುವುದು.ಈಗಾಗಲೇ ಬೆಳವಡಿಯವರ ಮಾರ್ಗದರ್ಶನದಲ್ಲಿ ಗುರುಭವನದ ಕಾಮಗಾರಿ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಅದರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ. ನಿರೀಕ್ಷೆಗಳು ಅಪಾರ.ಅದರಂತೆ ಶಕ್ತಿಮೀರಿ ಪ್ರಯತ್ನ ಮಾಡುವೆ ಎಂದು ಹೇಳಬಯಸುವೆ ನನ್ನ ಈ ಅಧ್ಯಕ್ಷ ಸ್ಥಾನಕ್ಕೆ ಕಾರಣ ವಿಧಾನಸಭಾ ಉಪಸಭಾಪತಿಗಳು ಹಾಗೂ ಜನಪ್ರೀಯ ಶಾಸಕರಾದ ಆನಂದ ಮಾಮನಿ ಹಾಗೂ ಸುರೇಶ ಬೆಳವಡಿಯವರು ಕಾರಣ. ಅವರ ಜೊತೆಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಜಗದೀಶಗೌಡ ಪಾಟೀಲ, ಪ್ರಾಥಮಿಕ ಶಾಲಾ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿಯವರ ಸಹಕಾರ ತಾಲೂಕಿನ ನಮ್ಮ ಎಲ್ಲ ಪದಾಧಿಕಾರಿಗಳ ಸಲಹೆ ಸಹಕಾರಗಳ ಮೂಲಕ ಶಿಕ್ಷಕರ ಬೇಡಿಕೆಗಳನ್ನು ಸಂಘದ ಚೌಕಟ್ಟಿನಡಿಯಲ್ಲಿ ಕಾರ್ಯಗತಗೊಳಿಸಲಾಗುವುದು.” ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಅಶೋಕ ಹಿರೇಮಠ “ ವ್ಯಕ್ತಿಗಳ ವ್ಯಕ್ತಿತ್ವವನ್ನು ಸದ್ದಿಲ್ಲದೇ ಗುರುತಿಸುವ ಶಕ್ತಿ ಬೆಳವಡಿಯವರಲ್ಲಿತ್ತು. ಅದಕ್ಕೆ ನಾನೇ ಉದಾಹರಣೆ ನನ್ನ ಕನಸಿನಲ್ಲಿಯೂ ನನಗೆ ಜಿಲ್ಲಾ ಪ್ರಶಸ್ತಿ ದೊರಕಬಹುದು ಎಂದು ಊಹಿಸಿರಲಿಲ್ಲ. ನನ್ನ ಶಾಲೆಯವರೆಗೂ ಬಂದು ನನ್ನ ಕಾರ್ಯವೈಖರಿ ಕಂಡು.ತಾವೇ ನನ್ನ ಬಗ್ಗೆ ಮಾಹಿತಿ ಕಲೆ ಹಾಕಿ ಜಿಲ್ಲಾ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ್ದು ಬೆಳವಡಿಯವರು. ನಿಜಕ್ಕೂ ಅವರ ಮಿತಭಾಷೆ ತ್ವರಿತ ಕಾರ್ಯ ಮರೆಯಲಾಗದು.ಹಾಗೆಯೇ ಪೆಟ್ಲೂರವರು ಹೋರಾಟದ ಮನೋಭಾವದವರು. ಅವರ ನಡೆ ನುಡಿ ದಿಟ್ಟ ಹಾಗೆಯೇ ಕಾರ್ಯಪ್ರವೃತ್ತರು. ಸಂಘವೆಂದ ಮೇಲೆ ನಮ್ಮವೈಯುಕ್ತಿಕ ಹಿತಾಸಕ್ತಿ ಬಲಿಕೊಟ್ಟು ಸಂಘಕ್ಕಾಗಿ ದುಡಿಯಬೇಕಾಗುತ್ತದೆ.
ಅಂತಹ ಸಾಮಥ್ರ್ಯಪೆಟ್ಲೂರವರಲ್ಲಿ ನಾನು ಮೊದಲಿನಿಂದಲೂ ಕಂಡಿದ್ದೇನೆ. ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನನಗೂ ಹೆಮ್ಮೆಯುಂಟು ಮಾಡಿದೆ” ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಯುವ ಕಲಾವಿದ ಗಾಯಕ ಬಾಳು ಹೊಸಮನಿ ಹಲವು ಗೀತೆಗಳನ್ನು ಹಾಡಿದರು. ಗುರುಮಾತೆಯವರಾದ ಭಾರತಿ ಹೋಟಿ, ಸುಜಾತಾ ಹೊನ್ನಳ್ಳಿ ಪ್ರಾರ್ಥನಾ ಗೀತೆಹಾ ಡಿದರು. ರವಿ ಸಣಕಲ್ಸ್ವಾ ಗತಿಸಿದರು. ನಾಗಪ್ಪ ಹೊನ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.
ವರದಿಃ ವೈ.ಬಿ.ಕಡಕೋಳ ಸಂಪನ್ಮೂಲ ಶಿಕ್ಷಕರು ಮುನವಳ್ಳಿ