ಸಚಿವರ ತವರೂರು ಕ್ಷೇತ್ರದಲ್ಲಿ ಹದಗೆಟ್ಟ ಹಾಸ್ಟೆಲ್ ವ್ಯವಸ್ಥೆ ; ವಿದ್ಯಾರ್ಥಿಗಳ ಗೋಳು ಕೇಳುವವರಾರಿಲ್ಲ

Must Read

ಔರಾದ್ ಸಮಾಜ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ

ಬೀದರ– ಜಿಲ್ಲೆಯ ಔರಾದ ಪಟ್ಟಣ ಅಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿ ಪಟ್ಟ ಪಡೆದುಕೊಂಡ ಕ್ಷೇತ್ರ ಎಂದು ಇಡೀ ದೇಶ ಹಾಗು ರಾಜ್ಯದ ಜನರ ಗಮನಸೆಳೆಯುತ್ತದೆ. ಎಲ್ಲರೂ ಅಭಿಮಾನದಿಂದ ಹೇಳುತ್ತಾರೆ. ಇದು ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದ ಕ್ಷೇತ್ರ ಕೂಡ. ಉದಾಹರಣೆಗೆ ಬೆಂಗಳೂರು ಕಮಿಷನರ್ ಆಗಿದ್ದ ಔರಾದಕರ್ ಔರಾದ ತಾಲೂಕಿನವರು ಇಂಥ ಕ್ಷೇತ್ರದಲ್ಲಿ ಇವಾಗ ನೋಡಿ ವಿದ್ಯಾರ್ಥಿಗಳ ಗೋಳು ಅರಣ್ಯರೋದನವಾಗಿದೆ. ಯಾರೂ ಕೇಳುವವರೇ ಇಲ್ಲ.

ಇಲ್ಲಿನ ಮ್ಯಾಟ್ರಿಕ್ ನಂತರ ಬಾಲಕರ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ಅವ್ಯವಸ್ಥೆ ತಾಂಡವವಾಡುತ್ತಿದ್ದು ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಅಡಿಗೆ ಮನೆ ಹೊಲಸಾಗಿದ್ದು ಸ್ವಚ್ಛತೆವಲ ಕಣ್ಮರೆಯಾಗಿದೆ ಅಂಥದರಲ್ಲಿಯೇ ಅಡಿಗೆ ಮಾಡುವುದು ನಿಜಕ್ಕೂ ವಿಚಿತ್ರ ಅನ್ನಿಸುತ್ತದೆ. ವಿದ್ಯಾರ್ಥಿಗಳು ಮಲಗುವ ಮಂಚಗಳು ಗಬ್ಬೆದ್ದುಹೋಗಿವೆ. ಹರಿದ ಹಾಸಿಗೆಗಳಿಂದ ಕಂಗೊಳಿಸುತ್ತಿವೆ ಇಂಥ ಹಾಸಿಗೆಗಳಲ್ಲಿ ಹೇಗೆ ವಿದ್ಯಾರ್ಥಿಗಳು ಮಲಗುತ್ತಾರೋ ದೇವರೇ ಬಲ್ಲ.

ಇನ್ನು ಇಲ್ಲಿ ಕೊಡುವ ಆಹಾರದ ಬಗ್ಗೆ ವಿದ್ಯಾರ್ಥಿಗಳು ಪತ್ರಿಕೆಯ ಜೊತೆ ನೈಜ ಮಾಹಿತಿ ನೀಡಿದ್ದು ಇಲ್ಲಿದೆ ನೋಡಿ.

ಮುಂಜಾನೆ ಮಾಡಿರುವ ತಿಂಡಿ ಮಧ್ಯಾಹ್ನ ನೀಡುತ್ತಾರೆ, ಶೌಚಾಲಯ ಹಾಗೂ ಸ್ನಾನದ ಗೃಹ ಗಬ್ಬು ವಾಸನೆಯಿಂದ ಕೂಡಿದೆ. ಕೋವಿಡ್ ಸಂದರ್ಭದಲ್ಲಿ ನಾವು ವಸತಿ ನಿಲಯದಲ್ಲಿ ಇರುವದು ಕಷ್ಟಕರ ಸಂಗತಿಯಾಗಿದೆ. ವಾರ್ಡನ್ ಅವರು ತಿಂಗಳಿಗೊಮ್ಮೆ ವಸತಿ ನಿಲಯಕ್ಕೆ ಬರುತ್ತಾರೆ.ತಾಲೂಕು ಅಧಿಕಾರಿ ಸುಭಾಷ್ ನಾಗೂರೆ ಅವರಿಗೆ ಯಾವಾಗ ಕರೆಮಾಡಿದರೂ ನಾನು ಮೀಟಿಂಗ್ ನಲ್ಲಿ ಇದ್ದೇನೆ ಅಂತಾರೆ. ಪ್ರತಿ ದಿನ ಮೀಟಿಂಗ್ ನಲ್ಲೆ ಇರುತ್ತಾರೆ ಅಂತಾರೆ ವಿದ್ಯಾರ್ಥಿಗಳು.

ಬಹುದಿನಗಳ ನಂತರ ಕಾಲೇಜುಗಳು ಪ್ರಾರಂಭವಾಗಿವೆ ನಮ್ಮ ಗ್ರಾಮಗಳಿಂದ ಬರುವುದಕ್ಕೆ ಬಸ್ಸಿನ ವ್ಯವಸ್ಥೆ ಕೂಡ ಇಲ್ಲ ವಸತಿ ನಿಲಯದಲ್ಲಿ ಈ ವ್ಯವಸ್ಥೆ ಕಾಲೇಜುಗಳಿಗೆ ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳ ಈ ತೊಂದರೆಯ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಾಗಲಿ, ಶಾಸಕ ಸಚಿವರುಗಳಾಗಲಿ ಗಮನಹರಿಸುವವರಾರಿಲ್ಲ, ಕೇಳುವರಾರಿಲ್ಲ ಮೊದಲೇ ಕೋವಿಡ್ ನಿಂದ ತತ್ತರಿಸುತ್ತಿರುವ ವಿದ್ಯಾರ್ಥಿಗಳ ಜೀವನ ಇನ್ನುಮುಂದಾದರೂ ಒಳ್ಳೆಯ ರೀತಿಯ ಅಭ್ಯಾಸ ಮಾಡಬೇಕೆಂದರೆ ಹಾಸ್ಟೆಲ್ಗಳ ಪರಿಸ್ಥಿತಿ ಈ ರೀತಿ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಸಚಿವರ ಕ್ಷೇತ್ರದಲ್ಲಿಯೇ ಒಂದು ಹಾಸ್ಟೆಲ್ ನ ಕಥೆ ಹೀಗಾದರೆ ಬೇರೆ ಬೇರೆ ಅಭಿವೃದ್ಧಿ ಗಳ ಬಗ್ಗೆ ಯಾವ ಪರಿಸ್ಥಿತಿ ಇದೆಯೋ ಏನೋ. ಮುಂದೆ ಕಾದು ನೋಡಬೇಕು ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಸುಧಾರಣೆ ಆಗುತ್ತದೆಯೋ ಇಲ್ಲವೋ ಎಂಬುದನ್ನು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಸತ್ಯ ಹೇಳಿದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು

ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ ವಿಮರ್ಶಕ ಸಂಶೋಧಕ ದೇಸಿ ಸಾಹಿತಿ ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ...

More Articles Like This

error: Content is protected !!
Join WhatsApp Group