ಸಿಂದಗಿ: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ಅವರು ಎಸ್‍ಓಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪಾಲನೆ ಕುರಿತು ದಿಢೀರನೆ ಶಾಲಾ ಸಂದರ್ಶನ ನೀಡಿದರು.
ನಂತರ ಮಾತನಾಡಿ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಸಿಂದಗಿ ಶಾಲೆಗಳಿಗೆ ಸಿಂದಗಿ ಜೆಎಂಎಫ್ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ಇವರು ದಿಢೀರ್ ಭೇಟಿ ನೀಡಿ ಶಾಲೆಗಳಲ್ಲಿ ಎಸ್‍ಓಪಿ (ಪ್ರಾಮಾಣಿತ ಕಾರ್ಯಾಚರಣಾ ವಿಧಾನ) ನಿಯಮಗಳು ಪಾಲನೆ ಯಾಗುತ್ತಿರುವ ಕುರಿತು ವೀಕ್ಷಣೆ ಮಾಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಕಳೆದ 2 ವರ್ಷಗಳಿಂದ ಶಾಲೆಗಳು ಪ್ರಾರಂಭವಾಗದೇ ಮಕ್ಕಳ ಶಿಕ್ಷಣ ಗುಣಮಟ್ಟ ಕುಸಿದಿದ್ದು ಅದರ ಸುಧಾರಣೆಗೆ ಸರಕಾರ ಮಕ್ಕಳ ಬೌದ್ಧಿಕ ಮಟ್ಟದ ಶಿಕ್ಷಣವನ್ನು ಪ್ರಾರಂಭಿಸುವಂತೆ ನಿರ್ದೇಶನ ನೀಡಿದರು.
ಅದರ ಪ್ರಕಾರ ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವಲ್ಲಿ ಪಾಲಕರಲ್ಲಿ ಮನವರಿಕೆ ಮಾಡಿ ತಮ್ಮ ಮಕ್ಕಳನ್ನು ಶಾಲೆ ಕಳಿಸುವಂತೆ ತಿಳಿವಳಿಕೆ ನೀಡಿ ಕಡ್ಡಾಯವಾಗಿ ಸ್ಯಾನಿಟೈಜರ ಬಳಸಿ ಮತ್ತು ಸಾಮಾಜಿಕ ಅಂತರದೊಂದಿಗೆ ಸ್ವಚ್ಚತೆ ಕಾಪಾಡಿ ಎಂದು ತಿಳಿಸುತ್ತ ಶಾಲಾ ಆವರಣವನ್ನು ಸ್ವಚ್ಚಗೊಳಿಸುವಲ್ಲಿ ಪುರಸಭೆ ಕಾರ್ಯವೈಖರಿ ವಿಫಲವಾಗಿದ್ದು ಶಾಲೆಯ ವತಿಯಿಂದ ಅರ್ಜಿ ಸಲ್ಲಿಸುವ ಮೂಲಕ ಸ್ವಚ್ಚತೆಗೆ ಮುಂದಾಗುವಂತೆ ತಿಳಿಸಿ ಎನ್ನುವ ಕೆಲವೊಂದು ನಿರ್ದೇಶನಗಳನ್ನು ನೀಡಿದರು.
ಭೇಟಿ ವೇಳೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ನೀರಲಗಿ. ಸಿ ಜಿ ಹೆಬ್ಬಾಳ್ ಅವರು ಸಂದರ್ಶನ ವೇಳೆಯಲ್ಲಿ ಹಾಜರಿದ್ದರು. ಶಾಲೆಯ ಮುಖ್ಯಗುರು ಶರಣಬಸಪ್ಪ ಲಂಗೋಟಿ, ಆರ್ ಆರ್ ನಿಂಬಾಳ್ಕರ್, ಶಿವಾನಂದ ಅವಟಿ ಹಾಗೂ ಎಲ್ಲ ಶಿಕ್ಷಕ ವೃಂದದವರು ಹಾಜರಿದ್ದರು.