ಸರಕಾರಿ ಆದರ್ಶ ವಿದ್ಯಾಲಯಕ್ಕೆ ಅರ್ಜಿ ಆಹ್ವಾನ

Must Read

ಸಿಂದಗಿ: ಸರಕಾರಿ ಆದರ್ಶ ವಿದ್ಯಾಲಯ(ಆರ್.ಎಮ್.ಎಸ್.ಎ) ಸಿಂದಗಿಯಲ್ಲಿ 2021-22 ನೇ ಸಾಲಿನಲ್ಲಿ 7,8 ಮತ್ತು 9 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಇಲಾಖೆ ಕರ್ನಾಟಕ ಬೆಂಗಳೂರು ಅವರ ಸುತ್ತೋಲೆಯ ಮೇರೆಗೆ ತರಗತಿ ಮತ್ತುರೊಸ್ಟರ್‍ ವಾರು ಆಧಾರದ ಮೇಲೆ ನಮ್ಮ ಶಾಲೆಯಲ್ಲಿ ಖಾಲಿ ಇರುವ ತರಗತಿವಾರು ಸೀಟುಗಳು 7 ನೇ ತರಗತಿಯಲ್ಲಿ 11 ಸೀಟುಗಳು, 8 ನೇ ತರಗತಿಯಲ್ಲಿ 02 ಸೀಟುಗಳು, 9 ನೇ ತರಗತಿಯಲ್ಲಿ 02 ಸೀಟುಗಳು. ಖಾಲಿಯಿದ್ದು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಸೆ. 07 ರಿಂದ 15 ರವರೆಗೆ ಸಾಯಂಕಾಲ 4-00 ಗಂಟೆಯೊಳಗೆ ಸರಕಾರಿ ಆದರ್ಶ ವಿದ್ಯಾಲಯ(ಆರ್.ಎಮ್.ಎಸ್.ಎ) ಸಿಂದಗಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿಕೊಡಲು ಕ್ಷೇತ್ರ ಶಿಕ್ಷಣಾದಿಕಾರಿ ಆರ್.ಎಸ್. ನೀರಲಗಿ ಹಾಗೂ ಪ್ರಭಾರಿ ಮುಖ್ಯೋಪಾಧ್ಯಾಯ ಆರ್.ಎಸ್.ಚಟ್ಟರಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ದಿನಾಂಕವನ್ನು ಪ್ರವೇಶ ಪತ್ರದಲ್ಲಿ ನಮೂದಿಸಿ ಕೊಡಲಾಗುವುದು. ಸಂಪರ್ಕಿಸುವ ದೂರವಾಣಿ ಸಂಖ್ಯೆ-9880985806 ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು. ತಾಲೂಕಿನ ನಿವಾಸಿಯಾಗಿರಬೇಕು. ವ್ಯಾಸಂಗ ಮಾಡುತ್ತಿರುವ ಶಾಲೆ ದೃಢೀಕರಣ ಪತ್ರ, ಆಧಾರ ಕಾರ್ಡಝರಾಕ್ಸ ಪ್ರತಿ, ಜಾತಿ ಮತ್ತುಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ ಲಗತ್ತಿಸಬೇಕು ಎಂದು ತಿಳಿಸಿದ್ದಾರೆ.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group