ಮೂಡಲಗಿ: ಶ್ರಮಿಕರ ಬದುಕಿಗೆ ನೆರವಿನ ಆಸರೆಯಾಗಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ. ಇಲ್ಲಿಯ ಅಸಂಘಟಿತ ಕಾರ್ಮಿಕರು ಆಹಾರ ಧಾನ್ಯಗಳ ಕಿಟ್ ಸದುಪಯೊಗ ಪಡೆದುಕೊಳ್ಳಬೇಕು ಎಂದು ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ಲಕ್ಕಪ್ಪ ಲೋಕೂರಿ ಹೇಳಿದರು.
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸ್ಥಳೀಯ ಅಸಂಘಟಿತ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.
ಬಸವರಾಜ ಪಣದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ, ಉಪಾಧ್ಯಕ್ಷ ಬಸವಂತ ಕೋಣಿ, ಪಿಡಿಒ ಎಚ್.ಎನ್.ಭಾವಿಕಟ್ಟಿ, ಗೌಡಪ್ಪ ಮಾಳೇದ, ಈಶ್ವರ ಮುಧೋಳ, ಈಶ್ವರ ಬಳಿಗಾರ, ಶಿವನಪ್ಪ ಮಾಳೇದ, ಅಶೋಕ ಕೋಣಿ, ಈರಣ್ಣ ಬಳಿಗಾರ, ಸಿದ್ದಪ್ಪ ಬಾಣಸಿ, ಸುಭಾಷ ಜಂಬಗಿ, ರಾಮಣ್ಣ ನೀಲಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಅಸಂಘಟಿತ ಕಾರ್ಮಿಕರು, ಸ್ಥಳೀಯರು ಇದ್ದರು.