ನಾವು ಸುದೈವಿಗಳು.. ಇನ್ನೂ ಜೀವಂತವಾಗಿ ಇದ್ದೇವೆ..ಅದೂ ಹಿಂದೂ ಗಳಾಗಿ..
ಇದರ ಶ್ರೇಯ ಸ್ವತಂತ್ರ ಭಾರತದ ಮೊಟ್ಟ ಮೊದಲಿನ ಗೃಹ ಮಂತ್ರಿಯಾದ ಸರದಾರ ವಲ್ಲಭ ಭಾಯಿ ಪಟೇಲರಿಗೆ ಸಲ್ಲಬೇಕು.
1947 ಅಗಸ್ಟ್ 15, ಭಾರತ ಸ್ವತಂತ್ರ ವಾಯಿತು ಆಂಗ್ಲರ ಆಡಳಿತದಿಂದ..ಆದರೆ ನಮ್ಮ ಭಾಗ..ಅಂದರೆ ಹೈದರಾಬಾದ ಕರ್ನಾಟಕ ಪ್ರದೇಶ ಸ್ವತಂತ್ರವಾಗಿದ್ದು ಮುಂದಿನ 13 ತಿಂಗಳು ನಂತರ..ಅಂದರೆ 17 ಸೆಪ್ಟೆಂಬರ್ 1948..
ಹೌದು , ಮಿತ್ರರೇ.. ಅಲ್ಲಿಯ ತನಕ ಈ ಭಾಗದ ಜನರ ಪರಿಸ್ಥಿತಿ ಹೇಳಲಿಕ್ಕೂ ಆಗದು.. ಮತಾಂಧ ನಿಜಾಮನ ಸೈನ್ಯದ ಒಂದು ಕ್ರೂರ ಅಧಿಕಾರಿ ಕಾಸಿಂ ರಿಜ್ವಿ ಯ ದುರಾಡಳಿತದ ಹೊಡೆತಕ್ಕೆ ಇಲ್ಲಿಯ ಜನ ತತ್ತರಿಸಿ ಹೋಗಿದ್ದರು
ಕಲ್ಬುರ್ಗಿ, ಬೀದರ,ರಾಯಚೂರು ಕೊಪ್ಪಳ ಜಿಲ್ಲೆಗಳು ಮತ್ತು ಬಳ್ಳಾರಿ ಜಿಲ್ಲೆಯ ಕೆಲವು ತಾಲೂಕುಗಳು ಸೇರಿ ಈ ಭಾಗವನ್ನು ಹೈದರಾಬಾದ ಕರ್ನಾಟಕ ಭಾಗ ಅಂತ ಕರೆಯುತ್ತಾರೆ.. ಆದರೆ ರಾಜಕಾರಣಿಗಳು ಪೂರ್ತಿ ಬಳ್ಳಾರಿ ಜಿಲ್ಲೆಯನ್ನು ಹೈದರಾಬಾದ ಕರ್ನಾಟಕ ಭಾಗ ಕ್ಕೆ ಸೇರಿಸಿದ್ದಾರೆ.
ನಾನು ಆಗಲೇ ಬರೆದಂತೆ ಹೈದರಾಬಾದ ಅರಸ.. ನಿಜಾಮ ಆ ಕಾಸಿಂ ರಿಜ್ವಿಯ ಕೈಗೊಂಬೆ ಯಾಗಿ ಈ ಇಡೀ ಭಾಗವನ್ನು ಭಾರತದ ಅಧೀನಕ್ಕೆ ಸೇರದೆ ಸ್ವತಂತ್ರವಾಗಿ ಇರಬೇಕೆಂದು ಇಲ್ಲವೇ ಪಾಕಿಸ್ತಾನಕ್ಕೆ ಸೇರಬೇಕೆಂದು ತೀರ್ಮಾನ ಮಾಡಿದ್ದ..
ಆಗಿನ ನಮ್ಮ ಪ್ರಧಾನಿ ಈ ವಿಷಯದಲ್ಲಿ ಯಾವ ನಿರ್ಣಯಕ್ಕೆ ಬರದೆ ಸುಮ್ಮನೆ ಕಾಲ ಹರಣ ಮಾಡುತ್ತಾ ಇದ್ದರು. ಆಗ ಇಲ್ಲಿನ ಕೆಲವು ರಾಷ್ಟ್ರ ಭಕ್ತ ರಾಜಕಾರಣಿಗಳು, ಕೆಲವು ಯುವಕರು ಈ ಮತಾಂಧ ಕಾಸಿಂ ರಿಜ್ವಿ ವಿರುದ್ಧ ,ಈ ಭಾಗವನ್ನು ಭಾರತ ಗಣರಾಜ್ಯಕ್ಕೆ ಸೇರಿಸಲು ಹಗಲಿರುಳೂ ಎಲ್ಲ ರೀತಿಯ ಕಸರತ್ತುಗಳನ್ನು ಮಾಡುತಿದ್ದರು.
ಸರ್ದಾರ್ ಶರಣ್ ಗೌಡ, ದತ್ತಾತ್ರೇಯ ಅವರಾದಿ ಹೀಗೆ ಅನೇಕ ಧೀಮಂತರು ಶ್ರೀ ರಾಮಾನಂದ ತೀರ್ಥ ಎಂಬ ದೇಶ ಭಕ್ತ ರ ಅಡಿಯಲ್ಲಿ ದುಡಿಯುತ್ತಿದ್ದರು.
ಅಂತಹವರಲ್ಲಿ ನನ್ನ ತಂದೆಯವರು ಒಬ್ಬರು..ಆದರೆ ಅವರೆಂದೂ ಬೆಳಕಿಗೆ ಬರಲೇ ಇಲ್ಲ.. ಯಾವ ಪ್ರಶಸ್ತಿ ಕೂಡಾ ಪಡೆಯಲಿಲ್ಲ..
ನನ್ನ ತಂದೆಯವರು ಆಗಿನ್ನೂ ತರುಣರು..ಅವರು ಒಬ್ಬ ಗೂಢಚಾರಿಯ ತರಹ ಕೆಲಸ ಮಾಡ್ತಾ ಇದ್ದರು.. ಮೇಲಿಂದ ಮೇಲೆ ಹೈದರಾಬಾದಿಗೆ ಹೋಗುವದು..ಅಲ್ಲಿಯ ನಿಜಾಮನ ಮತ್ತು ಕಾಸಿಂ ರಿಜ್ವಿ ಯ ಸೈನ್ಯದ ಚಟುವಟಿಕೆ ಎಲ್ಲ ಈ ಭಾಗದ ಸ್ವಾತಂತ್ರ್ಯ ಸೇನಾನಿಗಳಿಗೆ ತಿಳಿಸುವ ಕೆಲಸ ಮಾಡ್ತಾ ಇದ್ದರು.
ಆಗ ನಮ್ಮ ತಂದೆ ಹೈದರಬಾದ ಊರಲ್ಲಿ nizam College ನಲ್ಲಿ commerce ವಿದ್ಯಾಭ್ಯಾಸ ಮಾಡ್ತಾ ಇದ್ದರು..
ಅದು ಹೇಗೋ ರಝಾಕಾರ ಸೈನ್ಯಕ್ಕೆ ಗೊತ್ತಾಗಿ, ನನ್ನ ತಂದೆಯವರನ್ನು ಸೆರೆ ಹಿಡಿದು , ಅವರ ಕೈಕಾಲು ಕಟ್ಟಿ, Nizam College ಮೇಲಿಂದ ಕೆಳಗೆ ಬಿಸಾಕಿದರಂತೆ. ನಮ್ಮ ತಂದೆಯವರಿಗೆ ತುಂಬಾನೇ ಪೆಟ್ಟಾಗಿ ಸುಮಾರು ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇರಬೇಕಾಯಿತು. ಇದರಿಂದ ಅವರ ಶಿಕ್ಷಣಕ್ಕೆ ಹೊಡೆತ ಬಿದ್ದು, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ತಮ್ಮೂರಿಗೆ ಮರಳಿ ಬರಬೇಕಾಯಿತು.
ಆಳಂದ ತಾಲೂಕಿನ ಸಂಗೋಳಗಿ, ಇದು ನಮ್ಮೂರು.
ಆಳಂದ ತಾಲೂಕು ಕರ್ನಾಟಕ ರಾಜ್ಯದ ಗಡಿ ತಾಲೂಕು. ಅಲ್ಲಿಂದ ಕೆಲವೇ ಕಿ.ಮೀ. ಅಂತರದಲ್ಲಿ ಮಹಾರಾಷ್ಟ್ರ ರಾಜ್ಯ ಶುರು ಆಗುತ್ತದೆ. ಮಹಾರಾಷ್ಟ್ರ ಆಗಲೇ ಸ್ವತಂತ್ರ ಭಾರತ ಗಣರಾಜ್ಯ ದ ಒಂದು ಭಾಗ ವಾಗಿತ್ತು. ಅಲ್ಲಿ ಹೈದ್ರಾಬಾದ ವಿಮೋಚನೆ ಗಾಗಿ ಕಾರ್ಯಕರ್ತ ರ ಶಿಬಿರಗಳು ಇರುತ್ತಿದ್ದವು . ನಮ್ಮ ತಂದೆಯವರು ಈ ಕ್ರೂರ ರಜಾಕಾರರ ಸೈನ್ಯದ ಚಲನ ವಲನ ಗಳ ಮಾಹಿತಿ ಸಂಗ್ರಹಿಸಿ ಗಡಿಯವರೆಗೆ ಹೋಗಿ ಅಲ್ಲಿಯ ಸಕ್ರಿಯ ಸ್ವಾತಂತ್ರ್ಯ ಸೇನಾನಿಗಳ ಶಿಬಿರಕ್ಕೆ ತಲುಪಿಸುತ್ತಿದ್ದರು.
ಒಮ್ಮೆ ರಜಾಕಾರರ ಸೈನ್ಯ ಆಳಂದ ವರೆಗೂ ಬಂದು ಬೀಡು ಬಿಟ್ಟಿತ್ತು. ಅಲ್ಲಿಯ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾ ಇತ್ತು. ಆಗ ಗಣೇಶ ಹಬ್ಬ. ರಜಾಕಾರರ ಸೈನ್ಯ ಆಳಂದ ಊರಿನ ತುಂಬಾ ಯಾವ ಮನೆ, ಬೀದಿ, ಅಂಗಡಿ, ಮಂದಿರಗಳಲ್ಲಿ ಗಣೇಶ ಉತ್ಸವ ಆಚರಿಸಲೂ ಬಿಡಲಿಲ್ಲ. ನಮ್ಮ ಅಜ್ಜ ಪೇಟೆಯಿಂದ ಗಣೇಶ ವಿಗ್ರಹ ತರುವದನ್ನೂ ನೋಡಿ, ರಜಾಕಾರರ ಸೈನ್ಯ , ನಮ್ಮ ಅಜ್ಜನನ್ನು ಚೆನ್ನಾಗಿ ಥಳಿಸಿದರು ಮತ್ತು ಗಣೇಶನ ಮೂರ್ತಿಯನ್ನು ಒಡೆದು, ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರಂತೆ..
ನಾನು ಸಣ್ಣವಿದ್ದಾಗ , ನಮ್ಮ ಅಜ್ಜ ನನಗೆ ಈ ವಿಷಯ ಹೇಳುತ್ತಿದ್ದರು.
ಈ ರೀತಿ ಹೈದರಾಬಾದ ವಿಮೋಚನೆಗಾಗಿ ಹೋರಾಡುತ್ತಿದ್ದ ನಮ್ಮ ತಂದೆ ಮತ್ತು ಅವರ ತಂಡವನ್ನು ರಝಾಕರರ ಸೈನ್ಯ ನಮ್ಮೂರಿಗೆ ಬಂದು ಸೆರೆ ಹಿಡಿದು, ಕೈ ಕಾಲು ಕಟ್ಟಿ,, ಅವರನ್ನು ಎಳೆದು ಕೊಂಡು ಆಳಂದ ಊರ ಹತ್ತಿರ ಇರುವ ಒಂದು ನಿರ್ಜನ್ಯ ಪ್ರದೇಶಕ್ಕೆ ಒಯ್ದು ಎಲ್ಲರ ಮೇಲೆ ಗುಂಡಿನ ಸುರಿಮಳೆ ಸುರಿಸಿದರು.(ಆಳಂದ ಊರು ಹತ್ತಿರ ಇರುವ ಡೋಗಿ ಬನ ಎಂಬ ಪ್ರದೇಶಕ್ಕೆ ಒಯ್ದು ಈ ಕೃತ್ಯ ಎಸಗಿದರು)
15 ಜನ ಯುವಕರು ಅಸು ನೀಗಿದರು. ನಮ್ಮ ತಂದೆಗೆ ಒಟ್ಟು 9 ಗುಂಡು ಬಡಿದವು.ಸುದೈವ ದಿನ, ಯಾವುದೇ ಪ್ರಮುಖ ಅಂಗಕ್ಕೆ ಗುಂಡು ತಾಗಲಿಲ್ಲ. ಕಾಲಿಗೆ, ಬಲ ತೋಳಿಗೆ, ಟೊಂಕಕ್ಕೆ, ಹೀಗೆ ಗುಂಡು ತಾಗಿದ್ದವು ,ಒಂದು ಗುಂಡು ಹೊಟ್ಟೆಯ ಎಡ ಭಾಗಕ್ಕೆ ತಾಗಿತ್ತು.
ಸಾಯಂಕಾಲ ಸಮಯ, ಕತ್ತಲು ಆವರಿಸಿತ್ತು..ಗುಂಡು ಹಾರಿಸಿ, ರಜಾಕಾರರ ಸೈನ್ಯ ಅಲ್ಲಿಂದ ಪರಾರಿ ಆಯಿತು. ನಮ್ಮ ತಂದೆಯ ಒಬ್ಬ ಗೆಳೆಯ.. ಬಾಬು ಜಂಬಗಿ ಅಂತ ಅವನ ಹೆಸರು..ಅವನಿಗೆ ಸುದೈವದಿಂದ, ಯಾವುದೇ ಮೇಜರ್ ಗಾಯ ಆಗಿರಲಿಲ್ಲ. ಅವರು ನಮ್ಮ ತಂದೆಯನ್ನು ತನ್ನ ಎರಡೂ ಕೈಗಳಿಂದ ಎತ್ತಿ, ಹೆಗಲ ಮೇಲೆ ಹೊತ್ತು ,ಸುಮಾರು ಕಿ. ಮೀ ನಡೆದು..(ರಾತ್ರಿಯೆಲ್ಲಾ), ದಾರಿಯಲ್ಲಿ ಸಿಕ್ಕ ವೈದ್ಯರಿಂದ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಸಿ , ಬೆಳಗು ಆಗುವ ವೇಳೆಗೆ ದುದನಿ ಸ್ಟೇಷನ್ ವರೆಗೆ ತಂದನಂತೆ , ನಮ್ಮ ತಂದೆಯ ಕರುಳುಗಳು ಹೊರಗೆ ಬಂದಿದ್ದವು. ಅವನ್ನೆಲ್ಲ ಒಳಗೆ ತುರುಕಿ, ತನ್ನ ರುಮಾಲಿನಿಂದ ಹೊಟ್ಟೆಯನ್ನು ಬಿಗಿದು, ಹಳ್ಳಿಯ ಜನ ರ ಸಹಾಯದಿಂದ ,(ಕೆಲವರ ಎತ್ತಿನ ಬಂಡಿಯಲ್ಲಿ, ಕೆಲವರ ಕುದುರೆ ಮೇಲೆ ಕುಳಿತು.. ಹೀಗೆ ಸುಮಾರು 30km ರಾತ್ರಿಯ ವೇಳೆಯಲ್ಲಿ ಪ್ರಯಾಣ ಮಾಡಿ ದುದನೀ station ವರೆಗೆ ಸಾಗಿಸಿ , ಅಲ್ಲಿಂದ ರೈಲು ಪ್ರಯಾಣ ಮಾಡಿ ಸೋಲಾಪುರ ಊರಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿದನು..
ಸೋಲಾಪುರ , ಭಾರತ ಗಣರಾಜ್ಯ ದ ಅಂಗವಾಗಿತ್ತು , ಆ ಸೋಲಾಪುರ ಊರಿನ ಸರಕಾರಿ ಆಸ್ಪತ್ರೆಯಲ್ಲಿ ಮೂರು ತಿಂಗಳ ನಂತರ ವರೆಗೆ admit ಆಗಿ , ವಾಸಿ ಆದರು, ಎಲ್ಲ ಗುಂಡುಗಳ ಗಾಯ ವಾಸಿ ಆಗಿ, ಒಂದು ಗುಂಡು ಮಾತ್ರ , ನಮ್ಮ ತಂದೆ ಸಾಯುವ ವರೆಗೂ, ಅವರ ಶರೀರದಲ್ಲಿ ಉಳಿಯಿತು.
ಹೀಗೆ ಹೈದರಬಾದ ವಿಮೋಚನೆ ಗಾಗಿ, ಹೋರಾಡಿದ ನಮ್ಮ ತಂದೆಯವರು ಮುಂದೆ ಎಂದಿಗೂ ಇದರ benefit ತೆಗೆದು ಕೊಳ್ಳಲಿಲ್ಲ.
he never applied for freedom fighter pension
ನಮಗೆ ಯಾರಿಗೂ, ಅದರ reservation benefit ಕೊಡಿಸಲಿಲ್ಲ
ಮುಂದೆ P.V.ನರಸಿಂಹ ರಾವ ಭಾರತದ ಪ್ರಧಾನ ಮಂತ್ರಿ ಆದಾಗ, , ಇವರ ಸೇವೆಯನ್ನು ಗುರುತಿಸಿ , ಸನ್ಮಾನ ಮಾಡಿ, freedom fighter pension sanction ಮಾಡಿದರು
P.V.Narasimha Rao was close to NV School , where my father studied.
ಡಾ. ಉದಯ ಪಾಟೀಲ,
ನೇತ್ರ ತಜ್ಞರು,
ಕಲಬುರ್ಗಿ..
mobile..9342018762..

