spot_img
spot_img

ರೈಲ್ವೆ ಅಪಘಾತ ತಪ್ಪಿಸಿದ ಯುವಕರು

Must Read

- Advertisement -

ಬೆಳಗಾವಿ – ಬೆಳಗಾವಿಯ ದೂದ್ ಸಾಗರದ ಬಳಿ ಭಾರಿ ಮಳೆಯಿಂದಾಗಿ ಮರವೊಂದು ರೈಲ್ವೆ ಹಳಿಯ ಮೇಲೆ ಬಿದ್ದಿದ್ದರಿಂದ ಉಂಟಾಗಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ ಯುವಕರ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಈ ಘಟನೆ ಸೋಮವಾರ ನಡೆದಿದೆ.

ಬೆಂಗಳೂರಿನ ಯುವ ಮುಖಂಡರಾದ ಬಿ ಎಲ್ ಹರೀಶ್ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಮತ್ತು ಅವರ ಸಹೋದರರ ಮಕ್ಕಳು ದೂದ್ ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಈ ಯುವಕರು ಬೆಂಗಳೂರಿಗೆ ಮರಳುವುದಕ್ಕಾಗಿ ರೈಲ್ವೆ ನಿಲ್ದಾಣದತ್ತ ಹಳಿಯ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದರು ಈ ವೇಳೆ ಗುಡ್ಡದ ಮೇಲಿಂದ ಬಾರಿ ಗಾತ್ರದ ಮರವೊಂದು ಹಳಿಯಮೇಲೆ ಉರುಳಿಬಿದ್ದಿತು ಇದನ್ನು ಗಮನಿಸಿದ ಯುವಕರ ತಂಡ ಅದೇ ಸಮಯದಲ್ಲಿ ಕೊಂಚ ದೂರದಲ್ಲಿ ಬರುತ್ತಿದ್ದ ರೈಲಿಗೆ ಕೆಂಪು ಆಂಗಿ, ಪ್ಲಾಸ್ಟಿಕ್ ಮೊದಲಾದುವುಗಳನ್ನು ತೋರಿಸಿದರು ಇದನ್ನು ಗಮನಿಸಿದ ಚಾಲಕ ಬ್ರೇಕ್ ಹಾಕಿದ್ದರಿಂದ ರೈಲು ಮರದ ಸಮೀಪವೇ ಬಂದು ನಿಂತಿತು.

- Advertisement -

ಇದರಿಂದ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿದೆ.

ಸಮಯಪ್ರಜ್ಞೆ ತೋರಿ ಮುಂದಾಗಬಹುದಾಗಿದ್ದ ಅವಘಡವನ್ನು ತಪ್ಪಿಸಿದ ಯುವಕರ ಕಾರ್ಯಕ್ಕೆ ರೈಲ್ವೆ ಇಲಾಖೆ ಸೇರಿದಂತೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.


Mallikarjuna Polkal
9060145533

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group