- Advertisement -
ಸವದತ್ತಿ – ತಾಲೂಕಿನ ಉಳ್ಳಿಗೇರಿ .ಇನಾಮಹೊಂಗಲ, ಚಿಕ್ಕ ಉಳ್ಳಿಗೇರಿ,ಯಡ್ರಾವಿ,ಬೆಡಸೂರ ಹಾಗೂ ಸಂಗ್ರೇಶಕೊಪ್ಪ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕಿನ ಚಿಕ್ಕ ಉಳ್ಳೀಗೇರಿ ಗ್ರಾಮದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಚೂಣಪ್ಪ ಪೂಜೇರಿ. ಬೆಳಗಾವಿ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ನಾಯಕ,ಪ್ರಧಾನ ಕಾರ್ಯದರ್ಶಿ ವೀರೇಶ ಮಂಡೇದ. ಸವದತ್ತಿ ತಾಲೂಕಾ ಅಧ್ಯಕ್ಷ ಸುರೇಶ ಸಂಪಗಾಂವ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಈಶ್ವರ ಶಿಲೇದಾರ, ಬೈಲಹೊಂಗಲ ತಾಲೂಕಾಧ್ಯಕ್ಷ ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.