Homeಕವನಕವನ: ಚರಗ ಚೆಲ್ಲಾಕ

ಕವನ: ಚರಗ ಚೆಲ್ಲಾಕ

ಚರಗ ಚೆಲ್ಲಾಕ

ಬನ್ನಿ ಗೆಳತಿಯರೇ
ಚಕ್ಕಡಿ ಹೂಡಿಕೊಂಡು
ಬುತ್ತಿ ಕಟ್ಟಿಕೊಂಡು
ಸಂತಸದಿ ತೂಗಾಡುವ
ಭೂತಾಯಿ ಉಣಿಸಾಕ
ಸೀಗೆ ಹುಣ್ಣಿಮೆ ಮಾಡಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.

ಹಸಿರು ಬಳೆ ಇಟ್ಟುಕೊಂಡು
ಹಸಿರು ಸೀರೆ ಉಟ್ಟುಕೊಂಡು
ನತ್ತು ಬೋರಮಾಳ ಹಾಕಿಕೊಂಡು
ಮಲ್ಲಿಗೆದಂಡೆ ಮುಡಿದುಕೊಂಡು
ಭೂತಾಯಿಗೆ ಉಡಿ ತುಂಬಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.

ಎಳ್ಳು ಹಚ್ಚಿದ ಕಡಕ್ ರೊಟ್ಟಿ
ಶೇಂಗಾ ಚಟ್ನಿ ಗುರೆಳ್ಳು ಚಟ್ನಿ
ಬದನೆಕಾಯಿ ಎಣಗಾಯಿ
ಡೊಣ್ಣ ಮೆಣಸಿನಕಾಯಿ
ಹೆಸರು ಕಾಳು ಮಡಕಿ ಕಾಳು
ಪುಂಡಿಪಲ್ಲೆ ಜುನುಕದ ವಡೆ
ಎಳ್ಳು ಹೋಳಿಗೆ ಗಟ್ಟಿ ತುಪ್ಪ
ಕುಡಿಕೆ ಮೊಸರು ಅನ್ನ ಸಾರು
ಭೂತಾಯಿಗೆ ಉಣಸಾಕ
ಹೋಗುನು ಬರ್ರಿ ಹೊಲಕ
ಚರಗ ಚೆಲ್ಲಾಕ.


ಶ್ರೀಮತಿ ಪುಷ್ಪ ಮುರುಗೋಡ

RELATED ARTICLES

Most Popular

error: Content is protected !!
Join WhatsApp Group