ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ದೀಪಿಕಾ ರೆಡ್ಡಿ ಪ್ರಚಾರ

Must Read

ಸಿಂದಗಿ: ಉಪಚುನಾವಣೆಯ ನಿಮಿತ್ತವಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರವಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್ ಆರ್ ದೀಪಿಕಾ ರೆಡ್ಡಿ ವಾರ್ಡನಂ 1 ರಲ್ಲಿ ಯುವಕರೊಂದಿಗೆ ಮನೆಮನೆಗೆ ಮತಯಾಚನೆ ಮಾಡಿದರು.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ನೀಡಲಾಗಿರುವ ಭಾಗ್ಯಗಳನ್ನು ಇಲ್ಲಿನ ಜನರು ತುಂಬಾ ಸ್ವೀಕರಿಸುತ್ತಿದ್ದಾರೆ, ಅವರ ಯೋಜನೆಗಳು,ವಿವಿಧ ಭಾಗ್ಯಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನಮ್ಮ ಅಭ್ಯರ್ಥಿ ಅಶೋಕ ಮನಗೂಳಿ ಅವರ ತಂದೆ ದಿ,ಎಂ ಸಿ ಮನಗೂಳಿ ಅವರು 2 ವರ್ಷದ ಅವಧಿಯಲ್ಲಿ ಮಾಡಿರುವ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಜನರು ಮರೆತಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಮನಗೂಳಿ ಅವರ ಅಭಿವೃದ್ದಿ ಎರಡು ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುರಪೂರ ಯುವ ಕಾಂಗ್ರೇಸ್ ಅಧ್ಯಕ್ಷ ರಾಜು ನಾಯಕ ಸೇರಿದಂತೆ ಪಟ್ಟಣದ ಯುವ ಕಾರ್ಯಕರ್ತರು ಸಾಥ್ ನೀಡಿದರು.

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group