spot_img
spot_img

ಡಾ.ಅಶೋಕ ದಳವಾಯಿಗೆ 4ನೇ ಪಿ.ಎಚ್.ಡಿ

Must Read

spot_img
- Advertisement -

ಮೂಡಲಗಿ: ಹಿರಿಯ ಆಯ್.ಎ.ಎಸ್ ಅಧಿಕಾರಿ ಕೃಷಿ ತಜ್ಞ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕೌಜಲಗಿಯ ಡಾ.ಅಶೋಕ ಎಂ.ದಳವಾಯಿಯವರು ಈಗ 4ನೇ ಬಾರಿ ಪಿ.ಎಚ್.ಡಿ ಪದವಿ ಪಡೆಯಲಿದ್ದಾರೆ.

ಓಡಿಸ್ಸಾ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದವರು ದಳವಾಯಿಯವರಿಗೆ ಗೌರವ “ಡಾಕ್ಟರ ಆಫ್ ಸೈನ್ಸ್ ಪದವಿ ಪ್ರದಾನ ಮಾಡುವುದಾಗಿ ತಿಳಿಸಿದ್ದಾರೆ.

ಡಿ.18 ರಂದು ವಿಶ್ವವಿದ್ಯಾಲಯದ ಡಾ.ಎಮ್.ಎಸ್.ಸ್ವಾಮಿನಾಥನ್ ಭವನದಲ್ಲಿ ಜರುಗಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಓರಿಸ್ಸಾ ರಾಜ್ಯಪಾಲರು ಪದವಿ ಪ್ರದಾನ ಮಾಡುವರು, ದಳವಾಯಿಯವರು ಈ ಮುಂಚೆ ಆರ್ಥಶಾಸ್ತ್ರ ವಿಷಯದಲ್ಲಿ ಪ್ರಬಂಧ ಮಂಡಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಗಳಿಸಿಕೊಂಡಿದ್ದರು, ನಂತರ ಅವರು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದ ಧಾರವಾಡ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯ ದವರು 2016ರಲ್ಲಿ ದಳವಾಯಿಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಇತ್ತೀಚೆಗೆ ಗದಗಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದವರು ಕೂಡಾ ದಳವಾಯಿಯವರಿಗೆ ಕೃಷಿ, ಆಡಳಿತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಪ್ರದಾನ ಮಾಡಿದರು. ಈಗ ಅವರು ನಾಲ್ಕನೇ ಬಾರಿ ಪಿ.ಎಚ್.ಡಿ ಪದವಿ ಪಡೆಯುತ್ತಿರುವ ದೇಶದ ಏಕೈಕ ಆಯ್.ಎ.ಎಸ್ ಅಧಿಕಾರಿಯಾಗಿದ್ದಾರೆ.

- Advertisement -
- Advertisement -

Latest News

ಗುಬ್ಬೆವಾಡ  ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ

ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group