spot_img
spot_img

ಕಾಲುವೆ ಮತ್ತು ಕಾಲುವೆ ರಸ್ತೆ ರೈತರ ಜೀವನಾಡಿ ಇದ್ದಂತೆ – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ನೀರಾವರಿ ಕಾಲುವೆ ಮತ್ತು ಕಾಲುವೆ ಮೇಲಿನ ರಸ್ತೆ ಈ ಎರಡು ಗ್ರಾಮೀಣ ಪ್ರದೇಶದ ರೈತರ ಅಗತ್ಯ ವಸ್ತುಗಳು ಮತ್ತು ರೈತನ ಜೀವನಾಡಿಗಳಿದ್ದಂತೆ ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಮಾ-04 ರಂದು ಕಲ್ಲೋಳಿ ಪಟ್ಟಣದಲ್ಲಿ ಕರ್ನಾಟಕ ನೀರಾವರಿ ನಿಗಮದ ಅನುದಾನದಡಿ ಜಿ.ಎಲ್.ಬಿ.ಸಿ ಮುಖ್ಯ ಬಂದರ ಗೇಟನಿಂದ ಗೋಕಾಕ ರಸ್ತೆಯವರೆಗೆ ಚ.ನಂ-0.00 ಕಿ.ಮೀದಿಂದ 3.30 ಕಿ.ಮೀ ವರಗೆ ಕಾಲುವೆ ಪಕ್ಕದ ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಆತ್ಮನಿರ್ಭರ ಕೃಷಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ವಿಶೇಷ ಆದ್ಯತೆ ನೀಡಿದ್ದು, ಕೃಷಿ ಚಟುವಟಿಕೆಗಳಲ್ಲಿ ನಿರತರಾದ ರೈತರ ಜೀವನಮಟ್ಟ ಮತ್ತು ಆರ್ಥಿಕಮಟ್ಟ ಸುಧಾರಣೆಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅವುಗಳನ್ನು ರೈತರು ಸರಿಯಾಗಿ ಬಳಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಕಲ್ಲೋಳಿ ಜಿ.ಎಲ್.ಬಿ.ಸಿ ಮುಖ್ಯ ಬಂದರ ಗೇಟನಿಂದ ಗೋಕಾಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಈರಣ್ಣ ಕಡಾಡಿ

ಪ್ರಮುಖರಾದ ರಾವಸಾಬ ಬೆಳಕೂಡ, ಚೂನಪ್ಪ ಪೂಜೇರಿ, ಬಸವರಾಜ ಕಡಾಡಿ, ಶಂಕರ ಬೆಳಕೂಡ, ಭಗವಂತ ಪತ್ತಾರ, ಮಹಾದೇವ ಮದಭಾಂವಿ, ಪರಪ್ಪ ಕಡಾಡಿ, ಶ್ರೀಶೈಲ ತುಪ್ಪದ, ಸಿದ್ದಣ್ಣ ಹೆಬ್ಬಾಳ, ಫಕೀರಪ್ಪಾ ಕಡಾಡಿ, ಮಲ್ಲಪ್ಪ ಕಡಾಡಿ, ಭೀಮರಾಯ ಕಡಾಡಿ, ವಿಠ್ಠಲ ಕಟ್ಟಿಕಾರ, ಶಿವಗೊಂಡ ವ್ಯಾಪಾರಿ, ವಿಶ್ವನಾಥ ಪಾಟೀಲ, ಧರೆಪ್ಪ ಖಾನಗೌಡ್ರ, ಅಜೀತ ಚಿಕ್ಕೋಡಿ, ಅಪ್ಪಾಸಾಬ ಮಳವಾಡ, ಬಸವರಾಜ ಕೆಂಚಪ್ಪ ಕಡಾಡಿ, ಶ್ರೀಶೈಲ ಕಡಾಡಿ, ಶಿವಪ್ಪ ಬಿ.ಪಾಟೀಲ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ, ಮಹಾಂತೇಶ ಬಿ.ಪಾಟೀಲ. ಸಹಾಯಕ ಅಭಿಯಂತರ ಸುಭಾಸ ಮಹಿಮಗೊಳ ಸೇರಿದಂತೆ ಪ್ರಗತಿಪರ ರೈತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group