ಡಾ.ಪುನೀತ್ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ

Must Read

ಸಿಂದಗಿ: ದಿವಂಗತ ಡಾ. ಪುನೀತ ರಾಜಕುಮಾರ ಜನ್ಮದಿನ ಮಾ 17 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಡಾ.ಪುನೀತ ರಾಜಕುಮಾರ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ದಿನ ಅವರ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪವರ ಸ್ಟಾರ ಪುನೀತ ರಾಜಕುಮಾರ ಅಭಿಮಾನಿ ಬಳಗದವರು ತಿಳಿಸಿದರು.

ಪಟ್ಟಣದ ಆನಂದ ಚಿತ್ರಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಚಿತ್ರ ಬಿಡುಗಡೆಯ ನಿಮಿತ್ತ ಸ್ವಾಮಿ ವಿವೇಕಾನಂದ ವೃತ್ತದಿಂದ ಆನಂದ ಚಿತ್ರ ಮಂದಿರದವರಗೆ ವಿವಿಧ ವಾದ್ಯ ಮೇಳಗಳೊಂದಿಗೆ ಡಿಜೆ ಮೆರವಣಿಗೆ ಸಮಸ್ತ ಅಭಿಮಾನಿ ಬಳಗದ ವತಿಯಿಂದ ಪುನೀತ ರಾಜಕುಮಾರ ಕಟ್‍ ಔಟ್ ಗೆ ಪುಷ್ಪಾರ್ಚನೆ, ಆಟೋ ರಿಕ್ಷಾಗಳ ಮೇಲೆ ಮತ್ತು ಪ್ರತಿ ವೃತ್ತಗಳಲ್ಲಿ ಅಪ್ಪು ಧ್ವಜ ಕಟ್ಟಿ ಭಾವಚಿತ್ರ ಮೆರವಣಿಗೆ ಮಾಡಲಾಗುವದು ಮತ್ತು ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಒಟ್ಟಾರೆ ಅವರ ಹೆಸರಿನಿಂದ ಒಂದು ಸಂಘ ನೊಂದಣಿ ಮಾಡುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲ ಅಭಿಮಾನಿಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಅಲ್ಲದೆ ಅಂದು ದೇವರ ಹಿಪ್ಪರಗಿ ನಮ್ಮೂರು ಶಾಲೆಯಲ್ಲಿರುವ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ, ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಮತ್ತು ಚಿತ್ರ ಬಿಡುಗಡೆಯ ಮೊದಲನೆಯ ದಿನ ಪ್ರೇಕ್ಷಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಅಭಿಮಾನಿ ಬಳಗದ ವತಿಯಿಂದ ಮಾಡಲಾಗಿದೆ ಎಂದರು.

ಈ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಿತ್ರ ಮಂದಿರದ ಮಾಲೀಕ ಅಶೋಕ ಅಣ್ಣಾ ಮನಗೂಳಿ ಅವರು ರೂ.25 ಸಾವಿರ ಧನ ಸಹಾಯ ಮಾಡಿದ್ದು ಇನ್ನುಳಿದ ಖರ್ಚು ವೆಚ್ಚವನ್ನು ಪುನೀತ ರಾಜಕುಮಾರ ಅಭಿಮಾನಿ ಬಳಗ ವಹಿಸಿಕೊಳ್ಳುತ್ತದೆ ಎಂದು ತಿಳಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group