ರಸ್ತೆ ಕಾಮಗಾರಿಗೆ ಭೂಮಿಪೂಜೆ

Must Read

ಸಿಂದಗಿ: ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಮಂಜುನಾಥ ಮೆಡಿಕಲ್ ಹತ್ತಿರ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಎಸ್.ಬಿ.ಚಾಗಶೆಟ್ಟಿ, ಶಿವಶರಣಪ್ಪ ಸರಡಗಿ, ದಯಾನಂದ ಪತ್ತಾರ, ಮಂಜುನಾಥ ಬಿಜಾಪುರ, ಪುರಸಭೆಯ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸದಾಶಿವ ಕಬಾಡೆ, ರಫೀಕ ಆಳಂದ, ಬಾಳು ಚಲವಾದಿ, ಸೇರಿದಂತೆ ಅನೇಕರಿದ್ದರು.

ಪಲಾಯನ: ಸಿಸಿ ರಸ್ತೆ ಕಾಮಗಾರಿಯ ಬಗ್ಗೆ ಯಾವುದೇ ವಿವರಣೆ ನೀಡದೇ ಅಧ್ಯಕ್ಷ-ಉಪಾದ್ಯಕ್ಷ ಹಾಗೂ ಪುರಸಭೆ ಜೆಇ ಅವರು ಉತ್ತರಿಸದೆ ಫಲಾಯನವಾದ ದೃಶ್ಯ ಕಂಡು ಬಂದಿತ್ತು. ಇದರ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾಗ್ಯೂ ಕೂಡಾ ಯಾವುದೇ ಮಾಹಿತಿ ಪೂರೈಸದಿರುವುದನ್ನು ನೋಡಿದರೆ ಪಟ್ಟಣದಲ್ಲಿ ವಿವಿಧ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳೆಲ್ಲವು ಮಾರ್ಚ್ ಕೊನೆಯ ಹಂತದಲ್ಲಿ ಹಣ ಎತ್ತುವ ಕಾಮಗಾರಿಗಳು ದಿಢೀರನೇ ನಡೆಯುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಗುಸು-ಪಿಸು ಕೇಳಿಬರುತ್ತಿವೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group