Homeಸುದ್ದಿಗಳುಗಂಡನ ಕಿರುಕುಳಕ್ಕೆ ವೈದ್ಯೆ ಜೀವನ ನರಕ

ಗಂಡನ ಕಿರುಕುಳಕ್ಕೆ ವೈದ್ಯೆ ಜೀವನ ನರಕ

ಬೀದರ – ಪ್ರೀತಿಸಿ ಮದುವೆಯಾಗಿದ್ದರೂ ಗಂಡನ ಕಿರುಕುಳಕ್ಕೆ ಬೇಸತ್ತ ವೈದ್ಯೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೌರ್ಜನ್ಯ ಎನ್ನುವುದು ಯಾವ ಮಹಿಳೆಯನ್ನೂ ಬಿಟ್ಟಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಪ್ರೀತಿಯ ಮಾಯಾ ಬಜಾರ್ ನಲ್ಲಿ ವೈದ್ಯೆ ಸುಜಾತ ಎಂಬುವವರ ಜೀವನದಲ್ಲಿ ನಡೆದ ಗಂಡನ ಕಿರುಕುಳದ ಘಟನೆ ಇಡೀ ರಾಜ್ಯದಲ್ಲಿ ಪ್ರಜ್ಞಾವಂತರು ತಲೆ ತಗ್ಗಿಸುವಂಥದ್ದಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಿಂಸೆ ತಡೆಯಲು ಹಲವು ಕಾನೂನು ತಂದಿದ್ದರು ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಿಂಸೆ ಇನ್ನೂ ನಿಂತಿಲ್ಲ ಎಂಬುದಕ್ಕೆ ಈ ಸ್ಟೋರಿ ಉದಾಹರಣೆ ಎಂದು ಹೇಳಬಹುದು.

ಬೀದರ್ ನ ಗುಂಪಾ ಕಾಲೋನಿಯ ಹೆಣ್ಣು ಮಗಳು ವೈದ್ಯೆ ಸುಜಾತ ಲವ್ ಮಾಡಿ ಮದುವೆ ಆಗಿದ್ದರು ಆದರೆ ವೈದ್ಯ ಜೀವನದಲ್ಲಿ ಆಕೆ ಕಷ್ಟ ಅನುಭವಿಸಿದ್ದು ನೋಡಿದರೆ ಮುಂದೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎನಿಸಿಬಿಡುತ್ತದೆ.

ಗಂಡನ ಕಿರುಕುಳಕ್ಕೆ ವೈದ್ಯೆ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿರುವ ಘಟನೆ ನಡೆಯುತ್ತದೆ. ಗಂಡನ ಮೇಲೆ ಹಾಗೂ ಆತನ ಕುಟುಂಬದವರ ವಿರುದ್ಧ ಗಾಂಧಿ ಗಂಜ್ ಮಹಿಳಾ ಪೋಲಿಸ್ ಠಾಣೆಯಲ್ಲಿ ದಿ. ೩೦.೩.೨೨ ರಂದು ದೂರು ದಾಖಲಾಗಿದೆ. ಆದರೂ ಏನೂ ಪ್ರಯೋಜನ ಆಗಿಲ್ಲ ಎಂಬುದು ಕುಟುಂಬಸ್ಥರ ಕಣ್ಣೀರು ಮತ್ತು ಆರೋಪವಾಗಿದೆ.

ಈ ಪ್ರಕರಣದಿಂದ ತಿಳಿಯವುದೇನೆಂದರೆ ಈ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜನರೆಲ್ಲರ ದೈಹಿಕ, ಮಾನಸಿಕ ರೋಗ ದೂರ ಮಾಡುವ ವೈದ್ಯರಿಗೇ ಈ ರೀತಿಯ ಪರಿಸ್ಥಿತಿ ಉಂಟಾದರೆ ಜನಸಾಮಾನ್ಯರ ಪಾಡೇನು. ಕಿರುಕುಳ ನೀಡುವ ಗಂಡನ ವಿರುದ್ಧ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಸಮಾಜಕ್ಕೆ ಯಾವ ಸಂದೇಶ ಸಾರುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ಆ ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಪೊಲೀಸರು ಆರೋಪಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group