spot_img
spot_img

ದೇವರ ದರ್ಶನದ ನಂತರ ದೇವಾಲಯದಲ್ಲಿ ಕುಳಿತುಕೊಳ್ಳಬೇಕು, ಏಕೆ?

Must Read

- Advertisement -

🌻 ಸ್ಥಿರಚಿತ್ತದಿಂದ ಐಹಿಕ ಜಗತ್ತಿನ ಜಂಜಾಟಗಳನ್ನು ಮರೆತು ಮೌನಯೋಗದಿಂದ ಭವಬಂಧನಗಳನ್ನು ದೂರಕ್ಕೆ ಮಾಡಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದು ಸತ್ ಸಂಪ್ರದಾಯ ಪದ್ದತಿ. ದೇವಸ್ಥಾನದಲ್ಲಿ ಎಂದಾ ಕ್ಷಣ ದೇವರಿಗೆ ಎದುರಲ್ಲಿ ಎಂದು ಅರ್ಥವಲ್ಲ. ದೇವಾಲಯದ ಪ್ರಾಂಗಣದಲ್ಲಿ ಎಲ್ಲಾದರೂ ಮೌನದಿಂದ ಕಣ್ಮುಚ್ಚಿಕೊಂಡು ಮನಸ್ಸನ್ನು ದೈವದ ಜೊತೆ ಒಂದು ಮಾಡಬೇಕು, ದೇವಾಲಯ ಪ್ರವೇಶ ಮಾಡಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕು.

🌻 ದೇವಸ್ಥಾನ ಪ್ರವೇಶಕ್ಕೆ ಮೊದಲು ನಮ್ಮ ಮನಸ್ಸನ್ನು ಪ್ರಶಾಂತವಾಗಿರಿಸಿ ಶಾಂತಚಿತ್ತರಾಗಿ ನಂತರ ದೇವಾಲಯ ಪ್ರವೇಶ ಮಾಡಬೇಕು. ನಮ್ಮ ಅಂತಸ್ತು, ಶ್ರೀಮಂತಿಕೆ, ಶ್ರೇಷ್ಠತೆ, ಅಹಂಕಾರ, ಸಿಟ್ಟು, ಅಧಿಕಾರ ಇವೆಲ್ಲವನ್ನೂ ದೇವಾಲಯಗಳಲ್ಲಿ ಪ್ರದರ್ಶಿಸಬಾರದು. ದೇವರಿಗೆ ಅತಿ ಶ್ರೀಮಂತನೂ ಬಡ ದರಿದ್ರನೂ ಕೂಡ ಒಂದೇ! ಎಂಬ ಈ ವಿಷಯನ್ನು ಯಾರೂ ಸಹ ಮರೆಯಬಾರದು. ಆಲಯದಲ್ಲಿ ಲಂಚ ಕೊಟ್ಟು ನಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಬಾರದು.

🌻 ನಮ್ಮಿಂದ ದೇವಾಲಯಕ್ಕೆ ಬಂದಿರುವ ಯಾವ ಭಕ್ತನಿಗೆ ತೊಂದರೆಯಾದರೂ ಅದು ದೇವರಿಗೆ ನಮ್ಮಿಂದ ತೊಂದರೆ ಆದಂತೆ, ಅಪರಾಧ ಮಾಡಿದಂತೆ ಆಗುವುದು. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ದೇವರ ಸನ್ನಿಧಿಯಲ್ಲಿ ನಾವೆಲ್ಲರೂ ಸಹ ಹುಲು ಮಾನವರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಂಥವರೂ ದೊಡ್ಡಸ್ತಿಕೆಯನ್ನು ಪ್ರದರ್ಶಿಸಬಾರದು.

- Advertisement -

ದೇವಾಲಯದಲ್ಲಿ ನಾವು ಎಲ್ಲರೂ ಆಚರಿಸಬೇಕಾದ ವಿಷಯಗಳು.

💫 ದೇವರು ಎಲ್ಲರಿಗೂ ದೇವರೇ! ದೈವ ಕಾರ್ಯಗಳಿಗೆ ಎಲ್ಲರೂ ಹಿರಿಯರೇ!

💫 ದೈವ ಪ್ರೀತಿಗೆ ಎಲ್ಲರೂ ಪಾತ್ರರೇ!

- Advertisement -

💫 ದೈವ ದರ್ಶನಕ್ಕೆ ಎಲ್ಲರೂ ಸಮಾನರೇ!

💫 ಸರ್ವಭೂತ ಸಮಾನತೆಯನ್ನು ಸದ್ವಿಚಾರ ಆಚರಣೆಯನ್ನು ಮನಗಂಡು ಮನ್ನಿಸಿ ಆಚರಿಸಿದವನೇ ದೇವರಿಗೆ ಪ್ರಿಯ ಭಕ್ತನಾಗುತ್ತಾನೆ.

💫 ದೇವರೆಂದರೆ ಶ್ರೀಮಂತರ ಜೀತದಾಳಲ್ಲ,

💫 ದೇವರೆಂದರೆ ಅಧಿಕಾರಿಗಳ ಆಸ್ತಿಯಲ್ಲ,

💫 ದೇವರೆಂದರೆ ರಾಜಕೀಯ ಪುಡಾರಿಗಳ ಸ್ವತ್ತಲ್ಲ.

💫 ದೇವರು ದೀನರ ಗೆಳೆಯ!

💫 ದೇವರು ದುಃಖಿತರ ಮಿತ್ರ!

💫 ದೇವರು ಬಡವರ ಬಂಧು!

💫 ದೇವರು ಆರ್ತರ ಭೃತ್ಯು!

💫 ದೇವರು ನೀತಿ ನಿಯಮವಂತರ ತಂದೆ!

💫 ದೇವರು ಸೇವಕರ ಸೇವಕ!

💫 ದೇವರು ಆಪತ್ಪ್ಭಾಂದವ!

💫 ದೇವರು ಶೋಷಿತರ ಮಿತ್ರ!

🌻 ಆಡಂಬರದ ಬಟ್ಟೆಗಳನ್ನುಟ್ಟು, ಅಧಿಕಾರದ ಮದವನ್ನು, ಸಿರಿವಂತಿಕೆಯ ಸೊಕ್ಕನ್ನು, ಅಗ್ರವರ್ಣದ ಅಹಂಕಾರವನ್ನು ತೋರಿಸುವವರಿಗೆ ಎಂದೂ ದೇವರು ಪ್ರಸನ್ನನಾಗುವುದಿಲ್ಲ. ಅಂತಹ ಜನರ ಪ್ರಾರ್ಥನೆಯನ್ನೂ ಸಹ ಕೇಳುವುದಿಲ್ಲ! ದೇವರ ಮುಂದೆ ಅಧಿಕ್ಯತೆಯನ್ನು, ಅಂತಸ್ತನ್ನು ತೋರಿಸುವುದು ಮಹಾ ಅಪಚಾರ! ದೇವರ ಮುಂದೆ ಢಂಬಾಚಾರ ಪ್ರದರ್ಶನ ಘೋರ ಮಹಾಪಾಪ. ನಾವು ದೇವರ ಸೇವಕರೇ ನಿಜ! ಆದರೆ ದೇವರು ದೀನಜನ ಸೈನಿಕನು! ಪೀಡಿತ ತಾಡಿತ ಶೋಷಿತರ ಪ್ರಿಯ ಗೆಳೆಯನು!

💫 ದೇವರಿಗೆ ಕುಲವಿಲ್ಲ !

💫 ದೇವರಿಗೆ ಆಚಾರವಿಲ್ಲ!

💫 ದೇವರಿಗೆ ಬೇಧವಿಲ್ಲ!

💫 ದೇವರಿಗೆ ಕ್ರೋಧವಿಲ್ಲ!

💫 ದೇವರು ದಯಾಮಯನು!

💫 ದೇವರು ಸರ್ವ ಜಗತ್ ರಕ್ಷಕನು!

ದೇವರು ಯಾರಿಗೂ ಸ್ವಂತವಲ್ಲ ! ಯಾರ ಸ್ವತ್ತೂ ಅಲ್ಲ..!

🌻 ದೇವರಿಗೆ ಏನು ಬೇಕು ? ದೇವರಿಗೆ ನಮ್ಮ ಮನದ ಅರ್ಪಣಾ ಭಾವನೆ ಬೇಕು! ಶರಣಾಗತಿ ಬೇಕು! ಅಹಂಕಾರವಿಲ್ಲದ ಮನಸ್ಸಿನ ನಿರ್ಮಲ ಭಕ್ತಿ ಬೇಕು! ನಂಬಿಕೆ ಬೇಕು! ಭಗವಂತನಲ್ಲಿನ ಆರಾಧನಾ ಭಾವನೆ ಬೇಕು! ಕೋರಿಕೆ ಕಾಮನೆಗಳಿಲ್ಲದ ಅರ್ಚನೆ ಬೇಕು. ನೆನಪಿಡಿ; ನಮ್ಮ ಅತ್ಯಾಶೆಗಳನ್ನು ದೇವರು ಮನ್ನಿಸುವುದಿಲ್ಲ. ಅಸಂಬದ್ದ ಬಯಕೆಗಳನ್ನು ಎಂದಿಗೂ ಈಡೇರಿಸುವುದಿಲ್ಲ.

🌻 ಶುಷ್ಕಭಕ್ತಿಯಿಂದ, ಆಡಂಬರ ಬುದ್ಧಿಯಿಂದ, ಅತ್ಯಾಸೆಯಿಂದ, ಅನ್ಯ ಮನಸ್ಸಿನಿಂದ, ಅರ್ಹತೆಯಿಲ್ಲದ ಬಯಕೆಗಳಿಂದ ಎಂದೂ ದೇವರನ್ನು ಪೂಜಿಸಬಾರದು. ನಮಗೆ ಏನು ಕೊಡಬೇಕು, ಎಲ್ಲಿ ಕೊಡಬೇಕು, ಯಾವಾಗ ಕೊಡಬೇಕು ಅನ್ನುವುದು ಆತನಿಗೆ ಚೆನ್ನಾಗಿ ಗೊತ್ತು.

ದೇವಸ್ಥಾನಕ್ಕೆ ಹೋಗಿ ದರ್ಶನದ ನಂತರ ಯಾಕೆ ಕುಳಿತುಕೊಳ್ಳಬೇಕು?

🌻 ದೇವರ ಸನ್ನಿಧಿಗೆ ಹೋಗುವುದು ಕೇವಲ ದರ್ಶನಕ್ಕೆ ಅಲ್ಲ. ದೇವರ ದರ್ಶನದ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಯಾರಿಗೂ ತೊಂದರೆ ಆಗದಂತೆ ಕುಳಿತು ಸ್ವಲ್ಪ ಸಮಯ ದೈವ ಧ್ಯಾನದಲ್ಲಿ ಕಳೆಯಬೇಕು. ಅಲ್ಲಿನ ಧನಾತ್ಮಕ ಶಕ್ತಿಯನ್ನು ನಮ್ಮ ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಯೋಚನೆಗಳೆಲ್ಲವೂ ಸಕ್ರಮವಾಗುತ್ತವೆ. ತೆಗೆದುಕೊಂಡ ಹಾಗೂ ತೆಗೆದುಕೊಳ್ಳಬೇಕಾದ ನಿರ್ಧಾರಗಳು ದೃಢವಾಗುತ್ತವೆ. ದೇವಸ್ಥಾನದ ಒಳಗಿನ ಸ್ಥಳ ಪ್ರಭಾವವು ಅಲ್ಲಿನ ಧನಾತ್ಮಕ ಕಂಪನಗಳು ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ.

💫 ಎಂದಿಗೂ ಸಹ ಅವಸರದಿಂದ ದೈವ ದರ್ಶನವನ್ನು ಮಾಡಬಾರದು.

💫 ಕೌಟುಂಬಿಕ ವಿಷಯಗಳನ್ನು ಗುಡಿಯಲ್ಲಿ ಚರ್ಚಿಸಬಾರದು.

💫 ಹಾಸ್ಯ ಪ್ರಸಂಗಗಳನ್ನು ಮಾಡಬಾರದು.

💫 ಯಾರ ಮೇಲೆಯೂ ಸಿಟ್ಟು ಮಾಡಬಾರದು.

💫 ಯಾರನ್ನೂ ಅಸಹ್ಯದಿಂದ ನೋಡಬಾರದು.

💫 ಅಂಗವಿಕಲರನ್ನು ಮನೋರೋಗಿಗಳನ್ನು ನೋಡಿ ನಗಬಾರದು. ಅವರಿಗೆ ದೇವರ ದರ್ಶನಕ್ಕೆ ಇತರರಿಗಿಂತ ಮೊದಲು ಅವಕಾಶ ಮಾಡಿಕೊಡಬೇಕು.

💫 ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ವಿಕೃತ ಮನೋಭಾವದಿಂದ ನೋಡಬಾರದು.

💫 ವೃದ್ಧರು, ಮಹಿಳೆಯರನ್ನು ಗೌರವಿಸಬೇಕು. ಅವರಿಗೆ ದೇವರ ದರ್ಶನಕ್ಕೆ ಮೊದಲ ಆದ್ಯತೆ ನೀಡಬೇಕು.

💫 ಎದೆಯುಬ್ಬಿಸಿ ತಲೆ ಎತ್ತಿ ನಡೆಯಬಾರದು, ನೋಡಬಾರದು.

💫 ದೇವಾಲಯದ ಆವರಣದ ಮೌನಕ್ಕೆ ಭಂಗ ತರಬಾರದು.

💫 ತಮ್ಮ ಜಾತಿ, ಹಣ, ದೊಡ್ಡಸ್ಥಿಕೆಗಳನ್ನು ದೇವರ ಮುಂದೆ ಪ್ರದರ್ಶಿಸಬಾರದು. ದೇವರ ಮೇಲೆ ನಂಬಿಕೆ, ಭಕ್ತಿ ಇಲ್ಲದವರು ದೈವಸನ್ನಿಧಿಗೆ ಹೋಗಲೇಬಾರದು.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group