spot_img
spot_img

ಮೇ 23 ರಂದು ‘ದೇಶಿ ದರ್ಶನ ಮಾಲೆ ’ ಲೋಕಾರ್ಪಣೆ

Must Read

spot_img
- Advertisement -

ಬೆಂಗಳೂರು – ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಶಿ ದರ್ಶನ ಮಾಲೆ’ಯಡಿ ರಚಿತವಾಗಿರುವ ಏಳು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಇದೇ ಮೇ 23 ಸೋಮವಾರ ಬೆಳಗ್ಗೆ 11.00 ಗಂಟೆಗೆ ನಗರದ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ, ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ .

ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ , ಪುಸ್ತಕಗಳ ಬಿಡುಗಡೆ ಮಾಡುವರು.

- Advertisement -

ದೇಶಿ ದರ್ಶನ ಮಾಲೆಯ ಯೋಜನಾ ಸಂಪಾದಕರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ,ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ರವರು ಉಪಸ್ಥಿತರಿರುವರು.

ದೇಶಿ ದರ್ಶನ ಮಾಲೆ ವಿಚಾರಸಂಕಿರಣ:

ದೇಶಿ ವಿಮರ್ಶಾ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ನಾಡಿನ ವಿವಿಧ ಪಂಥಗಳ ಕುರಿತು ದೇಸಿ ದರ್ಶನ ಮಾಲೆ ಎಂಬ ಶೀರ್ಷಿಕೆಯಡಿ ಏಳು ವಿವಿಧ ಪುಸ್ತಕಗಳನ್ನು ಹೊರತಂದಿದ್ದು , ಈ ಪುಸ್ತಕಗಳ ಕುರಿತು ವಿಚಾರ ಸಂಕಿರಣವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದೆ.

- Advertisement -

ದೇಶಿ ದರ್ಶನ ಮಾಲೆಯ ತತ್ವ ಮತ್ತು ಆಶಯದ ಕುರಿತು ಪ್ರೋ.ಮಲ್ಲೇಪುರಂ ಜಿ ವೆಂಕಟೇಶ ರವರು ವಿಚಾರಗೋಷ್ಠಿಯಲ್ಲಿ ಮಾತನಾಡುವರು , ಗೋಷ್ಠಿಯಲ್ಲಿ ವಿವಿಧ ಪಂಥಗಳು ಕುರಿತು ಪುಸ್ತಕ ರಚಿಸಿರುವ ವಿದ್ವಾಂಸರಾದ ಡಾ. ಶಿವಾನಂದ ಕೆಳಗಿನಮನಿರವರು – ಕಾಳಮುಖ ಪಂಥ; ವ್ಯಾಸಪಂಥ- ಡಾ. ಎಸ್.ಜಿ. ಯತೀಶ್ವರ, ನಾಥಪಂಥ- ಡಾ. ಶ್ರೀಧರ ಹೆಚ್.ಜಿ, ಅವಧೂತ ಪಂಥ- ಡಾ. ಬೆಳವಾಡಿ ಮಂಜುನಾಥ, ಆರೂಢ ಪಂಥ- ಡಾ. ಎಂ.ಬಿ. ಕಟಿ, ಶೈವ ಪಂಥ- ಡಾ. ರೇಣುಕಾ ಪ್ರಸಾದ್ ಪಿ.ಆರ್, ದಾಸ ಪಂಥ- ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಮಾತನಾಡುವರು.

ವಿವರಗಳಿಗೆ 080-22106460 / 90082 35763 ಸಂಪರ್ಕಿಸಬೇಕು ಎಂಬುದಾಗಿ ರಿಜಿಸ್ಟ್ರಾರ್ ಕರಿಯಪ್ಪ ಎಂ. ಮನವಿ ಮಾಡಿಕೊಂಡಿದ್ದಾರೆ.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group