spot_img
spot_img

ರಂಗ ಕರ್ಮಿ ಅಕ್ಷತಾ ಪಾಂಡವಪುರ ಅವರಿಂದ ರಂಗ ತಾಲೀಮು ಉದ್ಘಾಟನೆ

Must Read

- Advertisement -

ಸವದತ್ತಿ: ರಂಗ ಭೂಮಿಯ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ಬೇರೆಯವರ ಕಥೆ, ಕಾದಂಬರಿ ಅಥವಾ ಮತ್ತಿತರ ಬರಹಗಳನ್ನು ಬಳಸಿಕೊಂಡು ಏಕವ್ಯಕ್ತಿ ರಂಗರೂಪ ಕೊಟ್ಟು ಪ್ರಯೋಗ ಮಾಡುವವರು ಕೆಲವರಿದ್ದರೆ, ಇಲ್ಲಿ ತಾವೇ ಬರೆದ ಕಥೆಗಳನ್ನು ರಂಗರೂಪ ಕೊಟ್ಟು ಪ್ರಯೋಗ ಮಾಡುತ್ತಿರುವ ಪ್ರತಿಭಾವಂತ ರಂಗ ಕರ್ಮಿ ಅಕ್ಷತಾ ಪಾಂಡವಪುರ ವಿಭಿನ್ನವೆನಿಸುತ್ತಾರೆ.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಇವುಗಳ ಸಂಯುಕ್ತಾಶ್ರಯದಲ್ಲಿ ‘ಮಲ್ಲಿಗೆ’ ಕಥಾಭಿನಯ ಮತ್ತು ನಾಟಕದ ಹಸ್ತಪ್ರತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ರಂಗ ತಾಲೀಮು ಉದ್ಘಾಟಿಸಿದರು.

- Advertisement -

ಸುದೀರ್ಘ ಒಂದು ತಾಸಿನ ಅವಧಿಯಲ್ಲಿ ಅಕ್ಷತಾ ಪಾಂಡವಪುರ ಅವರು ತಾವೇ ಬರೆದ ‘ಲೀಕ್ ಔಟ್’ ಕಥಾ ಸಂಕಲನದಲ್ಲಿರುವ ‘ಮಲ್ಲಿಗೆ’ ಎನ್ನುವ ಕಥೆಯನ್ನು ಆರಿಸಿಕೊಂಡು ಅವರೇ ಅಭಿನಯಿಸಿದರು. ಈ ಕಥೆಯು ಹೆಣ್ಣಿನ ಬದುಕಿನ ತಾಕಲಾಟಗಳನ್ನು ಚಿತ್ರಿಸುವ ಕಥೆಯಾಗಿದೆ. ಬಡತನದಲ್ಲಿ ಬೆಂದ, ಕುಡುಕ ಗಂಡನೊಂದಿಗೆ ಅನುಭವಿಸುವ ಹೆಣ್ಣಿನ ನೋವುಗಳನ್ನು ಚಿತ್ರಿಸುತ್ತದೆ. ಮಗಳು ‘ಮಲ್ಲಿಗೆ’ ಮುಂಬೈನ ವೇಶ್ಯಾವಾಟಿಕೆಯಲ್ಲಿ ಕಳೆದು ಹೋಗಿರುವ ಸಂದರ್ಭದಂತಹ ಚಿತ್ರಣಗಳು ಪ್ರೇಕ್ಷಕರ ಹೃದಯಕ್ಕೆ ನಾಟುವಂತೆ ನಟಿ ಅಕ್ಷತಾ ಪಾಂಡವಪುರ ನಟಿಸಿ ತೋರಿಸಿದರು.

ಅತಿ ಕಡಿಮೆ ರಂಗ ಪರಿಕರಗಳೊಂದಿಗೆ ಹತ್ತಿಪ್ಪತ್ತು ಜನ ಕುಳಿತುಕೊಳ್ಳಬಹುದಾದ ಚಿಕ್ಕ ಸ್ಥಳವನ್ನು ರಂಗಸ್ಥಳವನ್ನಾಗಿ ಬಳಸಿಕೊಂಡು ತನ್ನ ಕಥೆಗಳನ್ನು ನಾಡಿನಾದ್ಯಂತ ಜನರಿಗೆ ರಂಗ ರೂಪದ ಮೂಲಕ ತಲುಪಬೇಕೆನ್ನುವ ಮಹದಾಸೆಯೊಂದಿಗೆ ಲೇಖಕಿ, ರಂಗಕರ್ಮಿಯಾದ ಅಕ್ಷತಾ ಪಾಂಡವಪುರ ಇಂತಹ ವಿಶಿಷ್ಟ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ದೊಂಬರ ವಹಿಸಿದ್ದರು, ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ರಾಮರೆಡ್ಡಿ.ಕೆ. ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ವೇದಿಕೆ ಮೇಲೆ ರಂಗಕರ್ಮಿ ಗೋಪಾಲ ಪಾಸಲಕರ ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಅಕ್ಷತಾ ಪಾಂಡವಪುರ ಅವರನ್ನು ಸನ್ಮಾನಿಸಲಾಯಿತು, ಡಾ. ಎ. ಎಫ್. ಬದಾಮಿ ವಂದಿಸಿದರು, ಮೋಹನ್ ಬೆಣಚಮರ್ಡಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮುನವಳ್ಳಿಯ ಶ್ರೀ ಉಮೇಶ ಬಾಳಿ, ಡಾ.ವಾಯ್.ಎಂ.ಯಾಕೊಳ್ಳಿ, ಡಾ.ಪ್ರೇಮಾ ಯಾಕೊಳ್ಳಿ, ಝಕೀರ ನದಾಫ್, ಶ್ರೀಮತಿ ನದಾಫ್, ಶ್ರೀಮತಿ ಅನ್ನಪೂರ್ಣ ಕಂಬಿ, ಶ್ರೀನಿವಾಸ ಗದಗ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group