ಬೀದರನಲ್ಲಿ ಕುಮಾರಸ್ವಾಮಿ; ಜೆಡಿಎಸ್ ನಿಷ್ಠಾವಂತ ನಾಯಕ ನಸಿಮ್ ಪಟೇಲ್ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ

Must Read

ಬೀದರ – ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೀದರನತ್ತ ಮಾಡಿರುವ ಕುಮಾರಸ್ವಾಮಿಯವರಿಗೆ ಶಾಕ್ ಆಗಿದೆ.

ಜೆಡಿಎಸ ಪಕ್ಷದ ಪ್ರಮುಖ ಬೀದರ್ ಜಿಲ್ಲೆಯ ನಾಯಕ ನಸಿಮ್ ಪಟೇಲ್ ತಮ್ಮ ತಲೆ ಮೇಲೆ ಇದ್ದ ಹೊರೆ ಭಾರ ಕೆಳಗೆ ಇಳಿಸಿ ಮುಖ್ಯ ಮಂತ್ರಿ ಚಂದ್ರು ನೇತ್ರತ್ವದಲ್ಲಿ ಆಮ್ ಆದ್ಮಿ ಪಕ್ಷ ಸೇರಿ ಕೊಂಡಿದ್ದಾರೆ.

ಬೀದರ್ ಜಿಲ್ಲೆ ಪ್ರವಾಸ ಕೈಗೊಂಡಿದ್ದ ಜೆಡಿಎಸ್ ಘಟಾನುಘಟಿ ನಾಯಕರಾದ ಜೆ ಡಿ ಎಸ್ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಕಲ್ಯಾಣ ಕರ್ನಾಟಕ ಎಮ್ ಎಲ್ ಎ ಹಾಗು ಪ್ರಮುಖ ನಾಯಕರು ಬೀದರ್ ನಲ್ಲಿ ಪೂರ್ವ ಭಾವಿ ಚುನಾವಣೆ ಸಿದ್ದತೆ ನಡೆಸಲು ಭಾಗವಹಿಸಲು ಆಗಮಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂಬರುವ 2023ರ ಚುನಾವಣೆಯ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆಯನ್ನು ಇದೇ ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ಬೀದರ್ ನ ನವದಗೆರೆಯ ಚಿಕ್ಕಪೇಟೆ ರಸ್ತೆಯಲ್ಲಿರುವ ಹೊಟೇಲ್ ವೈಬ್ ನಲ್ಲಿ ಹಮ್ಮಿಕೊಂಡಿದ್ದಾರೆ.

ಸಭೆಯಲ್ಲಿ ಸಿ ಎಮ್ ಇಬ್ರಾಹಿಂ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಂಬರುವ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಪ್ರಮುಖರು ಇರಲಿದ್ದಾರೆ. ಪ್ರಮುಖರ ಸಭೆಯ ಬಳಿಕ ಬೀದರ್ ಜಿಲ್ಲೆಯ ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಕುಮಾರಸ್ವಾಮಿಯವರು ವಿಮಾನದ ಮೂಲಕ ಬೆಂಗಳೂರಿನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು, ಹೈದರಾಬಾದ್ ನಿಂದ ಬೀದರ್ ಗೆ ರಸ್ತೆ ಮೂಲಕ ಸಂಚರಿಸಿ, ನಗರದ ಪ್ರವಾಸಿ ಮಂದಿರ (ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ) ಹತ್ತಿರ ಕಾರಂಜಾ ಸಂತ್ರಸ್ತ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ, ನಗರದ ಜೆಡಿಎಸ್ ಕಛೇರಿಗೆ ಭೇಟಿ ನೀಡುತ್ತಾರೆ. ಬಳಿಕ ನಗರದ ನವದಗೆರೆಯಲ್ಲಿರುವ ಹೋಟೆಲ್ ವೈಬ್ ನಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.

ಜು.29ರಂದು ಬೀದರ್ ನಲ್ಲೇ ವಾಸ್ತವ್ಯ ಹೂಡಿ, ಜುಲೈ 30ರಂದು ಬೆಳಗ್ಗೆ 09 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿ, ನಂತರ ಕಾರ್ಯಕ್ರಮದ ನಿಮಿತ್ಯ ಬೀದರ್ ನಿಂದ ಕಲಬುರಗಿ ನಗರಕ್ಕೆ ರಸ್ತೆ ಮೂಲಕ ಸಂಚರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group