ಕವನ: ರಾಜಕಾರಣಿ ನೀ ಬಲು ಚಾಣಾಕ್ಷ

Must Read

ರಾಜಕಾರಣಿ ನೀ ಬಲು ಚಾಣಾಕ್ಷ

ಖಾದಿ ಧರಿಸಿದಾಕ್ಷಣ ನನ್ನದು ಆ ಪಕ್ಷ ಈ ಪಕ್ಷ
ಪಕ್ಷದಿಂದ ಪಕ್ಷಕ್ಕೆ ಜಿಗಿಯುವವನಿಗೆ ಲಕ್ಷ ಲಕ್ಷ
ಜೊತೆಗೆ ಪ್ರಬಲ ಪಕ್ಷಗಳ ಬಲಾಬಲ ಸಮೀಕ್ಷ
ರಾಜಕಾರಣಿಗೆಲ್ಲಿದೆ ಬದ್ಧತೆಯ ಚೌಕಟ್ಟಿನ ಲಕ್ಷ್ಯ

ಇತ್ತ ನಮ್ಮವನೆಂಬ ಜಾತಿ ಮತಗಳ ಭಿಕ್ಷ
ಗೆದ್ದ ನಂತರ ಅಭಿವೃದ್ಧಿಯ ನಿರ್ಲಕ್ಷ್ಯ
ಚುನಾವಣೆಗೂ ಮುನ್ನ ಎಲ್ಲರಿಗೂ ಮಾತೃಪಕ್ಷ
ಅಧಿಕಾರ ಸಿಗದಿದ್ದರೆ ಕೊನೆಗೆ ಸ್ವಪಕ್ಷದ ಪಿತೃಪಕ್ಷ !

ಜಣಜಣ ಕಾಂಚಾಣ ಬೆನ್ನತ್ತಿ ಲಕ್ಷಗಳೆಲ್ಲ ಅಲಕ್ಷ್ಯ
ನಿತ್ಯವೂ ಗೋಮಾಳ ಆಸ್ತಿಗಳ ಭೋಜ್ಯ ಭಕ್ಷ
ಮಠ ಮಂದಿರ ಸುತ್ತಿ ಪಡೆದರೇನು ಲಿಂಗ ದೀಕ್ಷ
ಜನರ ಹಿಡಿಶಾಪದಿಂದ ಎಂದಿಗೂ ಸಿಗದು ಮೋಕ್ಷ

ನಿಮಗೇಕಿಲ್ಲ ಅಂತರಂಗದ ಅರಿವಿನ ಆತ್ಮಸಾಕ್ಷ್ಯ
ಹತಾಶನಾಗಿ ನಾನು ಆ ಅಧ್ಯಕ್ಷ ನಾನು ಈ ಅಧ್ಯಕ್ಷ
ನಾನು ಆ ಉಪಾಧ್ಯಕ್ಷ ನಾನು ಈ ಉಪಾಧ್ಯಕ್ಷ
ಎಂದಾಗುವೆ ನೀ ಪ್ರಾಮಾಣಿಕ ಆಡಳಿತ ದಕ್ಷ

ನ್ಯಾಯನೀತಿಗಿಲ್ಲ ಬೆಲೆ ಕಳ್ಳರು ನೀವು ಪರೋಕ್ಷ
ಸುಳ್ಳಿನ ಸಂಭ್ರಮವೇಕೆ ಸತ್ಯ ಎದುರಿಗಿದೆ ಪ್ರತ್ಯಕ್ಷ
ಜನಸೇವೆಗೆಂದು ಬಂದ್ಮೇಲೆ ನಿನಗೇಕೆ ಫಲಾಪೇಕ್ಷ
ಬಡವನ ಕಣ್ಣೀರಿಗೆ ನೀನಾಗು ನೆರವಿನ ಕಲ್ಪವೃಕ್ಷ


ಮಲ್ಲಪ್ಪ ಭೈರಗೊಂಡ ಹಾಲಕೆರೆ, ಗದಗ ಜಿಲ್ಲೆ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group