spot_img
spot_img

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

Must Read

- Advertisement -

ಸಿಂದಗಿ: ನಡೆದಾಡುವ ದೇವರು, ವಿಜಯಪುರದ ಜ್ಞಾನ ಯೋಗಾಶ್ರಮದ ಅನಂತ ಚೇತನ, ಶತಮಾನದ ಸಂತ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಗಲಿಕೆಯಿಂದ ಅಪಾರ ನೋವುಂಟಾಗಿ ಜೊತೆಗೆ ನಮ್ಮ ಜಿಲ್ಲೆಗೆ ನುಂಗಲಾರದ ನಷ್ಟವಾಗಿದೆ ಕಣ್ಣಿಗೆ ಕಾಣುವ ದೇವರೇ ಮರೆಯಾದರು ಮರೆಯದ ಮಾಣಿಕ್ಯ ನಮ್ಮ ದೇವರು ಸಿದ್ದೇಶ್ವರ ಶ್ರೀಗಳು ಎಂದು ಕಲ್ಪವೃಕ್ಷ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಪಾಟೀಲ್ ಭಾವುಕರಾಗಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಪ್ರೌಢ ಪದವಿ ಹಾಗೂ ಪದವೀಧರ ಕಾಲೇಜಿನಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಸಂತರಲ್ಲೇ ಅಪರೂಪದ ಸಂತರು, ಅವರ ನಡೆ, ನುಡಿ, ವಚನ, ಕೇಳುವವರ ಜೀವನ ಪಾವನವಾಗುತ್ತಿತ್ತು ಆ ನುಡಿಗಳನ್ನು ಕೇಳಿದ ಜಿಲ್ಲೆಯಲ್ಲಿ ಅದೆಷ್ಟೋ ಒಡೆದು ಹೋಗಿರುವ ಸಾಂಸಾರಿಕ ಜೀವನಗಳು ಮತ್ತೆ ಮರುಜನ್ಮ ಪಡೆದು ಶಾಂತಿಯಿಂದ ಸಂಸಾರ ನಡೆಸುತ್ತಿದ್ದಾರೆ ಇಂತಹ ಮಹಾತ್ಮರು ಅಗಲಿದ್ದು ರಾಜ್ಯ ಜಿಲ್ಲೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ನಷ್ಟವಾಗಿದೆ. ಕೋಟಿ ಕೋಟಿ ಭಕ್ತಾದಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಲಿಂಗೈಕ್ಯ ಶ್ರೀಗಳಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತೇನೆ ಎಂದರು.

- Advertisement -

ಗ್ರಾಮದಲ್ಲಿ ವಿವಿಧ ಕಾಲೋನಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ಆವರಣದಲ್ಲಿ ಶ್ರೀ ಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಆಚರಿಸಿದರು. ಗ್ರಾ. ಪಂ. ಆವರಣದಲ್ಲಿ ಗ್ರಾಮದ ಹಿರಿಯರಾದ ಎನ್ ಎನ್ ಪಾಟೀಲ್ ಮಾತನಾಡಿದರು.

ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಎಸ್. ಎಚ್ ದುಳಬಾ, ಎಸ್. ಬಿ. ಬಿರಾದಾರ, ಎಸ್ ಎಮ್ ಲಂಗೋಟಿ, ಅರ್ ಆಯ್ ಚೌಧರಿ, ಜಿ ಬಿ ಬಿಸ್ಟಾಕಿ, ಎಸ್ ವಾಯ ಲಮಾಣಿ, ಆರ್ ಎಸ್ ಹಿರೇಮಠ, ಎಸ್ ಎಸ್ ಪಟ್ಟಣಶೆಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

- Advertisement -

ಸಿ.ಎಂ.ಮನಗೂಳಿ ಕಾಲೇಜಿನಲ್ಲಿ…

ಪಟ್ಟಣದ ಸಿಎಂ ಮನಗೂಳಿ ಕಾಲೇಜಿನಲ್ಲಿ ಕೂಡ ಅಗಲಿದ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಎಚ್ ಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ ಆರ್ ಹೆಗ್ಗನದೊಡ್ಡಿ, ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ.ಬಿ ಜಿ ಪಾಟೀಲ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಭೀಮನಗೌಡ ಬಿರಾದಾರ, ಸಿದ್ದಲಿಂಗ ಕಿಣಗಿ,  ಸಿಬ್ಬಂದಿಗಳಾದ ಎಸ್.ಬಿ.ಚಿಮ್ಮಲಗಿ, ಸುರೇಶ ಇಂಗಳೆ, ಸಿದ್ದು ಕಲಾಲ, ಎಂ.ಎಸ್ ಅರ್ಜುಣಗಿ, ಪದ್ಮಶ್ರೀ ನಾರಾಯಣಕರ ಇದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group