ಗುರ್ಲಾಪೂರದ ಅಯ್ಯಪ್ಪನಿಗೆ ಪಟ್ಟಾಭಿಷೇಕ

Must Read

ಗುರ್ಲಾಪೂರ: ಬೆಳಗಾವಿ ಜಿಲ್ಲೆಯ  ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹೃದಯ ಭಾಗದಲ್ಲಿರುವ ಅಯ್ಯಪ್ಪಸ್ವಾಮಿಯ  ಶನಿವಾರ ದಿ.14 ರಂದು ಮಕರ ಸಂಕ್ರಮಣ ದಿನದಂದು ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನ್ನಿಧ್ಯದಲ್ಲಿ ಅತಿ ವಿಜೃಂಭಣೆಯಿ0ದ ಅಯ್ಯಪ್ಪನಿಗೆ ಪಟ್ಟಾಭಿಷೇಕ ನಡೆಸಲಾಗುವದು.

ಸಂಜೆ 6 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆಯರು ಸೇರಿ ಗ್ರಾಮದ ಕಂಬಳಿ ಪ್ಲಾಟದ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ಅಯ್ಯಪ್ಪನ ಆಭರಣದ ಪೆಟ್ಟಿಗೆಯನ್ನು ವಿಶೇಷ ಪೂಜೆ ಮಾಡಿ ಪ್ರಮುಖ ರಸ್ತೆಗಳಲ್ಲಿ ಅಯ್ಯಪ್ಪನ ಪಲ್ಲಕ್ಕಿ ಉತ್ಸವ ದೊಂದಿಗೆ ಸಕಲ ವಾದ್ಯವೃಂದದೊಂದಿಗೆ ಸಾಗುತ್ತಾ  ಅಯ್ಯಪ್ಪನ ಸನ್ನಿಧಾನಕ್ಕೆ ಬಂದು ಅಯ್ಯಪ್ಪನಿಗೆ ಆಭರಣ ತೊಡಿಸಿ ಸ್ವಾಮಿಯನ್ನ ಶೃಂಗರಿಸಿ ಮಹಾಪೂಜೆಯನ್ನು ಗುರುಸ್ವಾಮಿಗಳು ಹಾಗು ಕನ್ನಾಸ್ವಾಮಿಗಳು ಮಾಡಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳುವರು ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಘೋಷಣೆಯೊಂದಿಗೆ ಹಾಡನ್ನು ಹಾಡಿ ನಂತರ ಅಯ್ಯಪ್ಪನಿಗೆ ಹಾಗು ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರು  ಮಹಾಪ್ರಸಾದ ತಗೆದು ಕೊಂಡು ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಅಯ್ಯಪ್ಪ ಸ್ವಾಮಿ ಕಮಿಟಿಯವರು ತಿಳಿಸಿರುತ್ತಾರೆ.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group