ಪ್ರತಿ ಮನೆಗೂ ನಲ್ಲಿ ಮೂಲಕ ನೀರು – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ಮಸಗುಪ್ಪಿಯಲ್ಲಿ 3.37ಕೋಟಿ ರೂ ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ

ಮೂಡಲಗಿ: ಮಸಗುಪ್ಪಿ ಜೆಜೆಎಂ ಕಾಮಗಾರಿಗೆ 3.37 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದ್ದು, ಪ್ರತಿ ಮನೆ ಮನೆಗೆ ಕುಡಿಯುವ ನೀರನ್ನು ನಲ್ಲಿ ಮೂಲಕ ಪೂರೈಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. 

ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ  ಆರ್.ಡಿ.ಪಿ.ಆರ್ ಇಲಾಖೆಯಿಂದ 3.37 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,  ಇದರಿಂದ ಮಸಗುಪ್ಪಿ ಗ್ರಾಮದ ನಾಗರಿಕರಿಗೆ ಕುಡಿಯುವ ನೀರಿನ ಅನುಕೂಲತೆ ಲಭ್ಯವಾಗಲಿದೆ ಎಂದು ಹೇಳಿದರು.

ಮಸಗುಪ್ಪಿ ಗ್ರಾಮಕ್ಕೆ 2.02 ಕೋಟಿ ರೂಪಾಯಿ, ಲಕ್ಷ್ಮೀ ನಗರಕ್ಕೆ 60 ಲಕ್ಷ ಮತ್ತು ಬಡಲಕನ್ನವರ ತೋಟಕ್ಕೆ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಜಲ ಜೀವನ ಮಿಷನ್ ಕಾಮಗಾರಿಗಳು ನಡೆಯಲಿವೆ, ಮಸಗುಪ್ಪಿ ಗ್ರಾಮದ ಜನತೆಯ ಅಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವದಾಗಿ ಹೇಳಿದ ಅವರು, ಗ್ರಾಮದ ಸರ್ವತೋಮುಖ ಪ್ರಗತಿಗಾಗಿ ಸರಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿರುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಈ ಸಂದರ್ಭದಲ್ಲಿ ಮಸಗುಪ್ಪಿ ಗ್ರಾ.ಪಂ ಅಧ್ಯಕ್ಷೆ ಶಾಂತಾ ತಿಗಡಿ, ಉಪಾಧ್ಯಕ್ಷ ದುಂಡಪ್ಪ ಪಂಜೋದಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಕಲ್ಲಪ್ಪ ಉಪ್ಪಾರ, ಭೂ ನ್ಯಾಯ ಮಂಡಳಿ ಸದಸ್ಯ ಸಂಜು ಹೊಸಕೋಟಿ, ಅಶೋಕ ಮಳಲಿ, ಆನಂದ ಹೊಸಕೋಟಿ,  ಗ್ರಾ.ಕು.ನೀ ಮತ್ತು ನೈರ್ಮಲ್ಯಿಕರಣ ಗೋಕಾಕ ಉಪವಿಭಾಗದ ಎ.ಇ.ಇ ಆರ್.ವಿ.ಜಾಧವ, ಬಸು ಬುಜನ್ನವರ, ಬಾಳಪ್ಪ ತಿಗಡಿ, ಕೆಂಚಪ್ಪ ಶಿಂತ್ರಿ, ಭರಮಪ್ಪ ಆಶಿರೊಟ್ಟಿ, ಸಾತಪ್ಪ ಕೊಳದುರ್ಗಿ, ರಾಮಣ್ಣ ಗಂಗನ್ನವರ, ಭರಮಣ್ಣ ಗಂಗನ್ನವರ, ಕಲ್ಲೋಳೆಪ್ಪ ಅಶಿರೊಟ್ಟಿ, ಹನಮಂತ ಕುಲಕರ್ಣಿ, ಮುರಗೇಪ್ಪ ಗಾಡವಿ, ಭೀಮಪ್ಪ ಬಡ್ನಿಂಗಗೋಳ, ನಿಂಗಪ್ಪ ಹೆಜ್ಜಗಾರ ವೀರುಪಾಕ್ಷ ಕೋಳವಿ,  ಬಂದೆನವಾಜ ನದಾಫ್ ಮುಂತಾದವರು ಉಪಸ್ಥಿತರಿದ್ದರು.

ದೇವಸ್ಥಾನಕ್ಕೆ ಭೇಟಿ: ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಸಗುಪ್ಪಿ ಗ್ರಾಮದ ಜಾಗೃದೇವರಾದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group