ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ

Must Read

ಇದೇ ರವಿವಾರ ದಿ. 5 ರಂದು ಬೆ 11 ಗಂಟೆಗೆ ಬೆಳಗಾವಿ ನಗರದ ನಗರದಲ್ಲಿರುವ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಬೆಳಗಾವಿ ವಿಭಾಗ ಮಟ್ಟದ ಸಮಾವೇಶ ಜರುಗಲಿದೆ.

ತುಮಕೂರು ಜಿಲ್ಲೆಯ ಕೊರಟಗೆರೆಯ ಪೂಜ್ಯ ಶ್ರೀ ಬಸವಕಿರಣ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದು ರಾಜ್ಯ ಸಂಘದ ಅಧ್ಯಕ್ಷರಾದ ಡಾ. ಎಲ್ ಭೈರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ  ಸಿದ್ನಾಳ ವಹಿಸಲಿದ್ದಾರೆ. 

ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಉಪಾಧ್ಯಕ್ಷೆ ಶಾರದಮ್ಮ, ವಿಜಯ್ ಆರ್ಥೋ ಮತ್ತು ಟ್ರೋಮ ಸೆಂಟರ್ ನಿರ್ದೇಶಕರಾದ ರವಿ ಪಾಟೀಲ, ಸೂರ್ಯಕಾಂತ್ ಕದಮ್, ಎಸ್. ಪಿ ಬಿರಾದಾರ, ಸುರೇಶ್ ನಾಯಕ, ನ್ಯಾಯವಾದಿಗಳು ಮತ್ತು  ಯುವ ಮುಖಂಡರಾದ ಮುರುಗೇಂದ್ರ ಗೌಡ ಪಾಟೀಲ, ಬಸವರಾಜ ರೊಟ್ಟಿಯವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ರಾಜ್ಯ ಸಂಘ ಮತ್ತು ವಿವಿಧ ಸಂಘಟನೆಗಳ ಮುಖಂಡರು ಆಗಮಿಸಲಿದ್ದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಬೇಕು ಬೇಡಿಕೆಗಳ ಕುರಿತು ಚರ್ಚಿಸುವುದರ ಜೊತೆಗೆ ನೌಕರರ ಆರೋಗ್ಯ,ವಸತಿ ಮತ್ತು ಇನ್ನಿತರ ಕುಂದು ಕೊರತೆಗಳ ಕುರಿತು  ಸಮಾಲೋಚನೆ ನಡೆಸಲಿದ್ದಾರೆ.

ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳ ನಿವೃತ್ತ ನೌಕರರು ಮತ್ತು ಸಂಘದ ಸದಸ್ಯರು ಭಾಗಿಯಾಗುವುದರ ಜೊತೆಗೆ ಸಂಘಕ್ಕೆ ಆರ್ಥಿಕ ಸಹಾಯ ಸಹಕಾರ ನೀಡಿ ಸಂಘವನ್ನು ಸಬಲೀಕರಣ ಗೊಳಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಂಎಸ್ ಮುದಕವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಸರಕಾರಿ ಶಾಲೆಗೆ ೫೧ ಸಾವಿರ ಮೌಲ್ಯದ ಸೌಂಡ ಸಿಸ್ಟಮ್ ಕಾಣಿಕೆ

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ರೂ.೫೧,೦೦೦/ ಬೆಲೆಯ ಸೌಂಡ್ ಸಿಸ್ಟಮ್, ಮೈಕ್, ಸೌಂಡ ಬಾಕ್ಸನ್ನು ಗ್ರಾಮದ ಗುತ್ತಿಗೆದಾರ ಮಂಜುನಾಥ...

More Articles Like This

error: Content is protected !!
Join WhatsApp Group