ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಬಜೆಟ್ – ಈರಣ್ಣ ಕಡಾಡಿ ಶ್ಲಾಘನೆ

Must Read

ಘಟಪ್ರಭಾ: ಜಗತ್ತಿನ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿಕೆ ಕಂಡಿರುವ ಈ ಸಂದರ್ಭದಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನ್ನು ನಾನು ಸಮರ್ಥಿಸುತ್ತೇನೆ ಮತ್ತು ಸ್ವಾಗತಿಸುತ್ತೇನೆ ಎಂದು ಸಂಸದ ಈರಣ್ಣಾ ಕಡಾಡಿ ಮುಕ್ತ ಕಂಠದಿoದ ಹೊಗಳಿದ್ದಾರೆ. ಅವರು ಈ ಬಾರಿ ಮಂಡಿಸಿರುವ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಈ ಬಾರಿಯ ಕೃಷಿ ಬಜೆಟ್ ನಲ್ಲಿ ರೈತರು ಸಾಲಕ್ಕೆ ಅವಲಂಬಿತರಾಗದೆ ಸ್ವಾವಲಂಬಿಗಳಾಗಲು ವಿಶೇಷ ಕ್ರಮ ವಹಿಸಲಾಗಿದ್ದು, ಈ ಮೂಲಕ ಕಳೆದ 9 ವರ್ಷಗಳ ಹಿಂದಿನ ಬಜೆಟ್‌ಗಿಂತ 6 ಪಟ್ಟು ಹೆಚ್ಚು ಹಣವನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.

ಪ್ರಧಾನ ಮಂತ್ರಿ ರಸಗೊಬ್ಬರ ಯೋಜನೆ ಮೂಲಕ 1 ರಾಷ್ಟ್ರ 1 ರಸಗೊಬ್ಬರ ಜಾರಿ ಮಾಡಲಾಗಿದ್ದು, ರೈತರು ಕಡಿಮೆ ಗಾತ್ರದ ಲಿಕ್ವಿಡ್ ಯೂರಿಯಾ ಬಳಸುವುದಕ್ಕಾಗಿ ನ್ಯಾನೋ ಯೂರಿಯಾ ಬಳಕೆಯನ್ನು ಜಾರಿಗೆ ತರಲಾಗಿದೆ. ರಸಗೊಬ್ಬರ ಕ್ಷೇತ್ರಕ್ಕೆ ರೈತರಿಗೆ 1,78,482 ಕೋ. ರೂ,ಗಳನ್ನು ಪ್ರಸ್ತುತ ಬಜೆಟ್‌ನಲ್ಲಿ ಹಣಕಾಸು ನೆರವಿಗೆ ನೀಡಲಾಗಿದೆ ಎಂದು ಕಡಾಡಿ ತಿಳಿಸಿದ್ದಾರೆ.

ಡಿಜಿಟಲ್ ತಂತ್ರಜ್ಞಾನದ ಮೂಲಕ ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಕ್ರಮವಹಿಸಲಾಗಿದೆಯಲ್ಲದೆ, ರೈತಸ್ನೇಹಿ ತಂತ್ರಜ್ಞಾನ ಮೂಲಕ ಕೃಷಿ ಚಟುವಟಿಕೆಗಳ ಖರ್ಚಿಗೆ ಕಡಿವಾಣ ಹಾಕಲಾಗಿದೆ. ಡ್ರೋನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ಮತ್ತು ಔಷಧಿಗಳ ಸಿಂಪರಣೆ, ಬೆಳೆಗಳ ಮೌಲ್ಯಮಾಪನ, ಜಮೀನುಗಳ ಸರ್ವೆ ಕಾರ್ಯಕ್ಕೆ ಕ್ರಮ ವಹಿಸಿದೆ ಎಂದು ಸವರು ತಿಳಿಸಿದ್ದಾರೆ.

2013-14 ರಲ್ಲಿ 23,612 ಮೆಟ್ರಿಕ್ ಟನ್ ಇದ್ದಂತಹ ಸಾವಯುವ ಉತ್ಪಾದನೆ 2021 ರಲ್ಲಿ 34 ಲಕ್ಷ ಟನ್‌ಗೆ ಏರಿಕೆಯಾಗಿಕೆಯಾಗುವ ಮೂಲಕ ಇದು ಶೇಕಡಾ 143% ದಷ್ಟ್ಟು ಹೆಚ್ಚಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ ದೊಡ್ಡ ಮಹತ್ವವನ್ನು ನೀಡಲಾಗಿದ್ದು, ಇದರಿಂದಾಗಿ ಭಾರತ ‘ಮಿಲೆಟ್ ಹಬ್’ ಆಗಿ ಪರಿವರ್ತನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಭಾರತೀಯ ರಾಗಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. 

ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ 1.63 ಲಕ್ಷ ರೈತರಿಂದ 1208 ಲಕ್ಷ ಟನ್ ಭತ್ತ ಮತ್ತು ಗೋಧಿ ಖರೀದಿಸಿ ರೈತರ ಖಾತೆಗೆ ನೇರವಾಗಿ 2.37 ಲಕ್ಷ ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ.  ಮೀನುಗಾರಿಕೆ ಮತ್ತು ಹೈನುಗಾರಿಕೆಗಾಗಿ ಈ ಬಾರಿ ಬಜೆಟ್‌ನಲ್ಲಿ 6,000 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 11.42 ಕೋಟಿಗೂ ಅಧಿಕ ರೈತರು ನೋಂದಣಿಯಾಗಿದ್ದಾರೆ ಎಂದು ಸಂಸದರು ಹೇಳಿದ್ದಾರೆ. 

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹದಾಯಕ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಯೋಜನೆ ಅಡಿಯಲ್ಲಿ ಗರಿಷ್ಠ 30 ಲಕ್ಷದವರೆಗೆ ಸಾಲ ಸಿಗಲಿದ್ದು, ಅದರಲ್ಲಿ ಗರಿಷ್ಠ 15 ಲಕ್ಷಗಳ ವರೆಗೆ ಸಬ್ಸಿಡಿ ನೀಡಲಾಗುವುದು. ದೇಶದ 167 ಮಾರ್ಗಗಳಲ್ಲಿ ಕಿಸಾನ್ ರೈಲು ಯೋಜನೆ ಪ್ರಾರಂಭಿಸಲಾಗಿದ್ದು, ಸುಮಾರು 7.9 ಲಕ್ಷ ಟನ್‌ಗಳಿಗಿಂತ ಹೆಚ್ಚು ಕೃಷಿ ಸರಕುಗಳನ್ನು ಮತ್ತು 58 ವಿಮಾನ ನಿಲ್ದಾಣಗಳಿಂದ 1.58 ಲಕ್ಷ ಟನ್ ಗಳಿಗಿಂತ ಹೆಚ್ಚು ತರಕಾರಿ ಹೈನುಗಳಂತ ಉತ್ಪನ್ನಗಳನ್ನು ಸಾಗಣೆ ಮಾಡಲಾಗಿದೆ ಎಂದು ಇದೆ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಕರ್ನಾಟಕದ ಬಯಲು ಸೀಮೆ ಜಿಲ್ಲೆಗಳನ್ನು ಬರಗಾಲದಿಂದ ಮುಕ್ತಿ ಮಾಡಲು ಭದ್ರ ಮೇಲ್ದಂಡೆ ಯೋಜನೆಗೆ 5,300 ಕೋ. ರೂ. ಹಾಗು ಭದ್ರ ಮೇಲ್ದಂಡೆ ಯೋಜನೆ ಮೂಲಕ ಅಂದಾಜು 30 ಟಿಎಂಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ. ಇದು 2,25,000 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಈ ಬಜೆಟ್‌ನಲ್ಲಿ ನೀಡಲಾಗಿದೆ ಎಂದರು.

ನೈರುತ್ಯ ರೈಲ್ವೆ ವಲಯಕ್ಕೆ 9,200 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಇದರಿಂದ ರೈಲ್ವೆ ಲೈನ್‌ಗಳ ವಿದ್ಯುತ್‌ಕರಣ, ಡಬ್ಲಿಂಗ್ ಕೆಲಸಕ್ಕಾಗಿ ಹಾಗೂ ರೈಲ್ವೆ ಸ್ಟೇಷನ್‌ಗಳ ಮೂಲ ಸೌಲಭ್ಯಗಳ ಉನ್ನತಿಕರಣಕ್ಕೆ ಹಣ ನೀಡಿದ್ದಕ್ಕೆ ರೈಲ್ವೆ ಮಂತ್ರಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಂಸದ ಕಡಾಡಿ ಹೇಳಿದ್ದಾರೆ.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group