ನೀರು ನಿರ್ವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಾಗಾರ

Must Read

ಬೆಳಗಾವಿ: ಜಿಲ್ಲಾ ಪಂಚಾಯತ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ ಮತ್ತು RDS ಮುರುಗೋಡ ಇವರ ಸಹಯೋಗದಲ್ಲಿ ಸೋಮವಾರ ದಿನಾಂಕ 13 ರಂದು ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ  (KRC ತರಬೇತಿ) ಚಿಕ್ಕೋಡಿ ತಾಲೂಕಾ ಪಂಚಾಯತಿಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ, ವಾಟರ್ ಮೇನ್, ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು, ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶ ಗುರಿ, FTK, ನೀರಿನ ಗುಣಮಟ್ಟ ಪರೀಕ್ಷೆ ಯ, ನಿರ್ವಹಣೆ ಮತ್ತು ಮೇಲ್ವಿಚಾರಣೆ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಯೋಜನಾ ವ್ಯವಸ್ಥಪಕರಾದ ದೀಪಕ ಕಾಂಬಳೆ ಜೆ.ಜೆ.ಯಂ. ಯೋಜನೆಯ ಉದ್ದೇಶಗಳು, ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಅಗತ್ಯತೆ ಬಗ್ಗೆ , ನೀರಿನ ಮಿತ ಬಳಕೆ ಬಗ್ಗೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಬಗ್ಗೆ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೇನ್, ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡಬೇಕೆಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಿನ  ಪಂಚಾಯ್ತಿಯ, ಸಿಬ್ಬಂದಿಗಳು, ಎಇ ವೀರಣಗೌಡ, ಮಹಾಂತೇಶ ಅಂಬಿ, ಅಭಿವೃಧ್ದಿ ಅಧಿಕಾರಿಗಳು, ನೀರು ನೈರ್ಮಲ್ಯ ಸಮಿತಿಯ ಸದ್ಯಸ್ಯರು, ವಾಟರ್ ಮೇನಗಳು, ಹಾಗೂ  RDS ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group