ಬೀದರ ದಕ್ಷಿಣ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿ ಮಲ್ಲೇಶ ಗಣಪುರ ದಕ್ಷಿಣ ಕ್ಷೇತ್ರದಲ್ಲಿ ಸಂಚಾರ

Must Read

ಬೀದರ: ಬೀದರ ದಕ್ಷಿಣ ಕ್ಷೇತ್ರದ ‌ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಮಲ್ಲೇಶ ಗಣಪುರ ಅವರು ದಕ್ಷಿಣ ಕ್ಷೇತ್ರದ ಚಟ್ನಳ್ಳಿ, ನಾಗೂರ, ರಾಜಗಿರ ಹೊನ್ನಾಡಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಸಂಚಾರ ನಡೆಸಿದರು.

ಗ್ರಾಮದಲ್ಲಿ ಎಲ್ಲಾ ಸಮಾಜದ ಮುಖಂಡರ ಜೊತೆಗೆ ಚರ್ಚ್ ಹಾಗೂ ಮಂದಿರ ಭೇಟಿ ಮಾಡಿದರು.

ಮಲ್ಲೇಶ ಗಣಪುರ ದಕ್ಷಿಣ ಕ್ಷೆತ್ರದ  ಆಕಾಂಕ್ಷಿಗಳಾಗಿದ್ದಾರೆ ಅವರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಕಿ  ಮಲ್ಲೇಶ ಗಣಫುರ ಕೂಡಾ ಒಬ್ಬರು ಕಳೆದ 2015 ರಿಂದ 2018 ರ ವರೆಗೆ ಕೇಂದ್ರ ಸರ್ಕಾರ ಭಾರತಿಯ‌ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ರಾಗಿ‌ ಸೇವೆ ಸಲಿಸಿದ್ದಾರೆ. ಹಾಗೂ  2019 ರಲ್ಲಿ ಟೆಲಿಕಾಂ ಅಡ್ವಾಯಿಜರಿ ಕಮಿಟಿ ಸದಸ್ಯ ರಾಗಿ ಸೇವೆ ಸಲಿಸಿದ್ದು ಈಗ ಬೀದರ ದಕ್ಷಿಣ ಕ್ಷೇತ್ರದಿಂದ ವಿಧಾನ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.     

ಈಗಾಗಲೇ ಕ್ಷೇತ್ರವನ್ನು ಸುತ್ತುತ್ತಾ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕ್ಷೇತ್ರದ 42 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಬಿಜೆಪಿ ಪಕ್ಷದ  ಸಂಘಟನೆಗೆ ಮುಂದಾಗಿದ್ದಾರೆ ದಕ್ಷಿಣ ಕ್ಷೇತ್ರದ ಎಲ್ಲಾ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಜನರ ಸೇವೆ ಆಲಿಸಲು ಸಂಚಾರ ನಡೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group