ಬೀದರ: ಗಾಳಿಯಲ್ಲಿ ಗುಂಡು ಹಾರಿಸಿ ವಿಚಿತ್ರ ರೀತಿಯಲ್ಲಿ ಬಸವತೀರ್ಥ ಮಠದ ಜಾತ್ರಾಮಹೋತ್ಸವಕ್ಕೆ ಬಸವತೀರ್ಥ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಬಸವತೀರ್ಥ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಿದರು.
ಚಾಲನೆಗೆ ಗಾಳಿಯಲ್ಲಿ ಗುಂಡು ಹಾರಿಸಲು ಅವಕಾಶ ಇದೆಯಾ…?
ಪಿಸ್ತೂಲ್ ಆತ್ಮ ರಕ್ಷಣೆ ಗೋಸ್ಕರ ಇದ್ದು ಕಾನೂನು ಅಡಿಯಲ್ಲಿ ಪಡೆಯುತ್ತಾರೆ. ಆದರೆ ಡಾ..ಸಿದ್ದಲಿಂಗ ಸ್ವಾಮಿಗಳು ಬೌನ್ಸರ್ ಮತ್ತು ಮಹಿಳಾ ಬೌನ್ಸರ್ ಇಟ್ಟುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದು ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದೆಯಾ ಎಂಬ ಪ್ರಶ್ನೆ ಎದ್ದಿದೆ.
ಮತ್ತೊಂದು ಕಡೆ ಬಸವತೀರ್ಥ ಮಠದ ಸ್ವಾಮೀಜಿ ಬೆಂಬಲಿಗರು ಹಾಗೂ ತಾಂಡ ಜನರ ಮಧ್ಯೆ ಆಸ್ತಿ ವಿಷಯಕ್ಕೆ ಗಲಾಟೆ ಇದ್ದು ಸೋಮುಲುನಾಯಕ ತಾಂಡದ ಆಸ್ತಿ ಕಬ್ಜಾ ಮಾಡಲು ಯತ್ನಿಸಿದ ವೇಳೆ ನಡೆದ ಗಲಾಟೆಯಲ್ಲಿ ತಾಂಡಾ ಜನರ ಮೇಲೆ ಸ್ವಾಮೀಜಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಬೀದರ್ ಜಿಲ್ಲೆಯ ಸೋಮಲುನಾಯಕ ಕಲ್ಲೂರ್ ತಾಂಡದಲ್ಲಿ ಈ ಘಟನೆ ನಡೆದಿದೆ.
ವರದಿ: ನಂದಕುಮಾರ ಕರಂಜೆ, ಬೀದರ