ಕಾಕೋಳು ವೇಣುಗೋಪಾಲಸ್ವಾಮಿಯ 90ನೇ ಬ್ರಹ್ಮರಥೋತ್ಸವ

Must Read

ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರಿಂದ ಆಹ್ವಾನ ಪತ್ರಿಕೆ ಬಿಡುಗಡೆ

ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜನಕುಂಟೆ ಸಮೀಪದ ಕಾಕೋಳು ಗ್ರಾಮದಲ್ಲಿರುವ ಶ್ರೀ ಶ್ರೀಪಾದರಾಜ ಪ್ರತಿಷ್ಠಾಪಿತ ಬೃಂದಾವನದ ಚತುರ್ಭುಜ ವೇಣುಗೋಪಾಲ ಸ್ವಾಮಿಯ 90ನೇ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆಯನ್ನು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಕಾಕೋಳು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಾ, ಶ್ರೀಕೃಷ್ಣನ ಸನ್ನಿಧಾನದಲ್ಲಿ ನಮ್ಮ ತಾಪತ್ರಯ- ದುರಿತಗಳು ದೂರವಾಗಿ ಮನೋಕ್ಲೇಶ ನಿವಾರಣೆಯಾಗಿ ನಮ್ಮ ಜೀವನದಲ್ಲಿ ಆರೋಗ್ಯ ಶಾಂತಿ ಸಮೃದ್ಧಿ ಜೊತೆ ಪಾರಮಾರ್ಥಿಕ ಉನ್ನತಿ ನೀಡುವ ಬೃಹತಿ ಸಹಸ್ರ ಮಹಾಯಾಗದಲ್ಲಿ ಭಾಗವಹಿಸುವುದೇ ಒಂದು ಪುಣ್ಯ ವಿಶೇಷ ಎಂದು ತಿಳಿಸಿದರು.

ಮುಂಬರುವ ಮಾರ್ಚ್  23ರಿಂದ 30ರವರೆಗೆ ನಡೆಯುವ  ಬ್ರಹ್ಮರಥೋತ್ಸವಕ್ಕೆ 90 ನೇ ವಸಂತದ ಸಂಭ್ರಮ.ಈ  ಸಂದರ್ಭದಲ್ಲಿ ವಿಶೇಷವಾಗಿ ಲೋಕ ಕಲ್ಯಾಣಾರ್ಥ ಬೃಹತಿ ಸಹಸ್ರ ಮಹಾಯಾಗ ಮತ್ತು ಮಹಾ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಮುರಳಿ ಕಾಕೋಳು ಮತ್ತು ಚೇರ್ಮನ್ ಟ್ರಸ್ಟಿ ಕೆ.ವಿ ಗೋಪಾಲಕೃಷ್ಣ ತಿಳಿಸಿರುತ್ತಾರೆ.

ಗ್ರಾಮಸ್ಥರ ಮತ್ತು ಭಕ್ತ ಜನರ ಸಹಕಾರದಿಂದ ಮಾರ್ಚ್ 26 ಭಾನುವಾರದಂದು ಶ್ರೀ ವೇಣುಗೋಪಾಲ ಸ್ವಾಮಿಯವರ 90ನೇ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group