ಬೀದರ: ಅಂಗಡಿಗೆ ಪೇಂಟ್ ಮಾಡಿಸುವಾಗ ಹೊರಗೆ ಪೆಟ್ಟಗೆಯಲ್ಲಿ ಇಟ್ಟಿದ್ದ ಬಂಗಾರ ಹಾಗೂ ಬೆಳ್ಳಿಯ ಸಾಮಾನುಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಈ ಸಂಬಂಧ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದ ಸೊನಾರಗಲ್ಲಿಯಲ್ಲಿ ಶಿವಶಕ್ತಿ ಬಂಗಾರದ ಅಂಗಡಿಯಲ್ಲಿ ಪೇಂಟ ಮಾಡಿಸುವುದಕ್ಕಾಗಿ ಅಂಗಡಿಯಲ್ಲಿದ್ದ ಎಲ್ಲಾ ಸಾಮಾನುಗಳು ಕೌಂಟರ ಬಾಕ್ಸ ದಲ್ಲಿದ ಬಂಗಾರದ 500 ಸುಪಾನಿಗಳು, ಕೆ.ಜಿ ಬೆಳ್ಳಿಯ ಆಭರಣಗಳು, ಹೀಗೆ ಒಟ್ಟು 1.40,000/- ರೂ ಬೆಲೆಬಾಳುವ ಆಭರಣಗಳು ಬಾಕ್ಸ ಸಮೇತ ಅಂಗಡಿಯ ಮುಂದೆ ಇಟ್ಟಿರುತ್ತಾರೆ. ಅವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅಂಗಡಿಯ ಮಾಲೀಕರಾದ ಚಂದ್ರಕಾಂತ ತಂದೆ ಮನೋಹರರಾವ ಡೋಣಗಾಪೂರ ಭಾಲ್ಕಿ ರವರು ನೀಡಿದ ದೂರಿನ ಮೇರೆಗೆ ಭಾಲ್ಕಿ ನಗರ ಪೊಲೀಸ ಠಾಣೆಯಲ್ಲಿ ಐ.ಪಿ.ಸಿ. ಸೆಕ್ಷನ್ 379 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕಳ್ಳರನ್ನು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚೆನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ್ ಮೇಘಣ್ಣನವರ್, ಭಾಲ್ಕಿ ಸಹಾಯಕ ಪೊಲೀಸ್ ಅಧಿಕಾರಿ ಪ್ರಥ್ವಿಕ್ ಶಂಕರ್ ರವರ ಮಾರ್ಗದರ್ಶನದಲ್ಲಿ ಭಾಲ್ಕಿ ನಗರ ಪೊಲಿಸ್ ಠಾಣೆಯ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವ ಆರೋಪಿಗಳನ್ನು ಬಂಧಿಸಿ ಅವರಿಂದ 1 ಲಕ್ಷ 40 ಸಾವಿರ ರೂಪಾಯಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ಬಾಲಾಪರಾಧಿಗಳ ನ್ಯಾಯಾಲಯ ಬೀದರ್ ಅವರ ಮುಂದೆ ಹಾಜರು ಪಡಿಸಿರುತ್ತಾರೆ.
ಪೊಲೀಸರ ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚೆನ್ನಬಸಪ್ಪ ಲಂಗೋಟಿ ರವರು ಶ್ಲಾಘಿಸಿರುತ್ತಾರೆ.
ವರದಿ: ನಂದಕುಮಾರ ಕರಂಜೆ, ಬೀದರ