ಸಿಂದಗಿ: ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ, ವಿದ್ಯಾರ್ಥಿಗಳ ಪಾಲಕರಾದ ತಾವುಗಳು ಕಷ್ಟ ಪಟ್ಟು ದುಡಿದು ಆಸ್ತಿ ಅಂತಸ್ತು ಗಳಿಸುವ ಬದಲು ನಿಮ್ಮ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ದೇಶ ಅಭಿವೃದ್ಧಿ ಪತದತ್ತ ಸಾಗುತ್ತದೆ ಎಂದು ಎಚ್, ಜಿ, ಪ, ಪೂ, ಕಾಲೇಜಿನ ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಸದ್ಭಾವನಾ ಕನ್ನಡ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರು ಶಿಕ್ಷಣಕಿಂತ ಹೆಚ್ಚು ಕೃಷಿಗೆ ಮಹತ್ವ ನೀಡುತ್ತಾರೆ ಕೃಷಿ ಮಾಡುವುದರಲ್ಲಿ ತಪ್ಪೇನಿಲ್ಲ ಮೊದಲು ನಿಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ ದೇಶದಲ್ಲಿ ಶಿಕ್ಷಣ ಕಲಿತ ಎಲ್ಲ ಮಕ್ಕಳು ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಉತ್ತಮ ಶಿಕ್ಷಣ ಪಡೆದು ಸರಕಾರಿ ಉದ್ಯೋಗ ಸಿಗದೇ ಇದ್ದಲ್ಲಿ ನಂತರ ಕೃಷಿಕನಾಗಿ ಕೋಟಿ ಕೋಟಿ ದುಡ್ಡು ಗಳಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀವಾಗಿ ಮುಂದೆ ಬಂದಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ ಜೇರಟಗಿಯ ವಿರಕ್ತ ಮಠದ ಶ್ರೀ ಮ, ನೀ, ಪ್ರ, ಮಹಾಂತ ಸ್ವಾಮಿಗಳು, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಸಿ,ಆರ್,ಪಿ, ರವಿ ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಹಮದ ಶಿರಾಜ ಕಣ್ಣಿ, ಮುಕ್ಯೋಪಾಧ್ಯಾಯ ಮುರಗೇಂದ್ರ ಕೋರಿ, ಪ್ರದೀಪ ಕತ್ತಿ, ರಾಜಶೇಖರ ಕುಂಬಾರ, ಗೋವಿಂದ ವಡ್ಡರ, ಅಬ್ಬಾಸಲಿ ಭಂಟನೂರ, ಸಂತೋಷ ಮದರಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅನಿಸಿಕೆ ರಸ ಮಂಜರಿ ಕಾರ್ಯಕ್ರಮಗಳು, ಭರತ ನಾಟ್ಯ ಸಾರ್ವಜನಿಕರ ಜನಮನ ಸೆಳೆಯಿತು.