ಖೇಣಿಗೆ ವಯಸ್ಸಾಗಿದೆ ಅವರಿಗೆ ಐದು ಸಾವಿರ ಮತ ಕೂಡ ಬರಲ್ಲ – ಚಂದ್ರಾಸಿಂಗ್

Must Read

ಬೀದರ: ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿಯವರಿಗೆ ವಯಸ್ಸಾಗಿದೆ ಅವರಿಗೆ ೫ ಸಾವಿರ ಮತಗಳು ಕೂಡ ಬರೋದಿಲ್ಲ. ನನ್ನ ವಿಜಯ ಖಂಡಿತ ಎಂದು ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ಹೇಳಿದರು.

ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಡನೆ ಅವರು ಮಾತನಾಡಿದರು.

ಇವತ್ತು ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುವುದಾಗಿ ಭರವಸೆ ಕೊಟ್ಟಿದ್ರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದೇನೆ. ನಾನು ಯಾವ ಒತ್ತಡಕ್ಕೂ ಬಗ್ಗಲ್ಲ. ಯಾವುದೇ ಕಾರಣಕ್ಕೂ ಕರ್ಯಕರ್ತರಿಗೆ ಮೋಸ ಮಾಡಲು ಹೋಗುವುದಿಲ್ಲ. ಯಾರೇ ಒತ್ತಡ ಹಾಕಿದರೂ ನಾಮಪತ್ರ ವಾಪಸ್ ಪಡೆಯಲ್ಲ ಎಂದರು

ಯಾವ ಕಾಂಗ್ರೆಸ್ ನಾಯಕರೂ ನನ್ನ ಸಂಪರ್ಕ ಮಾಡಿಲ್ಲ. ಲಾಸ್ಟ್ ಟೈಂ ಕುಟುಂಬಕ್ಕಾಗಿ ಬಿಟ್ಟಿದ್ದೆ. ಈ ಬಾರಿ ನನ್ನ ಪರವಾಗಿ ಅನುಕಂಪ ಸೃಷ್ಟಿಯಾಗಿದೆ. ರಾಜ್ಯದ ನಾಯಕರಿಗೆ ನಾವು ಏನು ಎಂದು ತಿಳಿಸುತ್ತೇವೆ.

ಖೇಣಿಗೆ ವಯಸ್ಸಾಗಿದೆ, ಅವರ ಬಗ್ಗೆ ನಾನು ಮಾತನಾಡೋದು ವೇಸ್ಟ್. ಈ ಬಾರಿ 5 ಸಾವಿರ ಓಟನ್ನು ಖೇಣಿ ತೆಗೆದುಕೊಳ್ಳುವುದಿಲ್ಲ ಎಂದು ಚಂದ್ರಸಿಂಗ್ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group