ಬೀದರ – ತಂದೆಯ ಗೆಲುವಿಗಾಗಿ ಮಗ ಹಗಲು ರಾತ್ರಿ ಭಾಲ್ಕಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡಸಿದರೆ ಇನ್ನೊಂದು ಕಡೆ ಅಣ್ಣನ ವೇಗಕ್ಕೆ ಬ್ರೇಕ್ ಹಾಕಲು ತಮ್ಮನ ಪ್ರಯತ್ನ.
ಹೀಗೆ ಬೀದರ ಜಿಲ್ಲೆಯಲ್ಲಿ ಖಂಡ್ರೆ ಕುಟುಂಬದ ಜಿದ್ದಾಜಿದ್ದಿ ನಡೆದಿದ್ದು ಪ್ರಕಾಶ್ ಖಂಡ್ರೆ ಬಿಜೆಪಿ ಅಭ್ಯರ್ಥಿಯಾಗಿ ಭಾಲ್ಕಿ ಕ್ಷೇತ್ರದಾದ್ಯಂತ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಾರೆ.
ಹದಿನೈದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಮೂರು ಸಲ ಶಾಸಕರಾಗಿದ್ದ ಈಶ್ವರ ಖಂಡ್ರೆಯವರ ಓಡುವ ಕುದುರೆ ಸವಾರಿ ನಿಲ್ಲಿಸಲು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಹಗಲು ರಾತ್ರಿ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಈ ಒಂದು ಸಲ ನನಗೆ ಅವಕಾಶ ನೀಡಿ ಎಂದು ಮತದಾರರ ಮುಂದೆ ಕೈ ಜೋಡಿಸಿ ಮನವಿ ಸಲ್ಲಿಸಿದರು.
ಪ್ರಕಾಶ್ ಖಂಡ್ರೆ ಮಗನಾದ ಪ್ರಸನ್ನ ಖಂಡ್ರೆ ತಂದೆ ಗೆ ಹೆಗಲು ಕೊಟ್ಟು ಈ ಸಲ ತಂದೆ ಗೆಲುವಿಗೆ ಗೋಸ್ಕರ ಶತಪ್ರಯತ್ನ ನಡೆಸಿದ್ದಾರೆ. ಬೀಳುತ್ತಿರುವ ಮಳೆಯನ್ನೂ ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸಿದ್ದಾರೆ ಪ್ರಸನ್ನ ಖಂಡ್ರೆ.
ಪ್ರಸನ್ನ ಖಂಡ್ರೆ ಕೆಲವು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಈಶ್ವರ ಖಂಡ್ರೆ ವಿರುದ್ಧ ಕೆಲವು ಗ್ರಾಮದ ಹೆಣ್ಣು ಮಕ್ಕಳು ಅಳಲು ತೋಡಿ ಕೊಂಡಿದ್ದರು ನಮಗೆ ಮನೆ ಕಟ್ಟಿಕೊಡುವೆ ಎಂದು ಹೇಳಿ ಐದು ಸಾವಿರ ರುಪಾಯಿ ತೆಗೆದುಕೊಂಡರು ನಮಗೆ ಮನೆ ಕಟ್ಟಿ ಕೊಟ್ಟಿಲ್ಲ ಎಂದು ಪ್ರಸನ್ನ ಖಂಡ್ರೆ ಮುಂದೆ ಮತದಾರ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ ಘಟನೆ ಕೂಡ ನಡೆಯಿತು.
ಒಟ್ಟಾರೆ ಹೇಳುವುದಾದರೆ ಭಾಲ್ಕಿ ಕ್ಷೇತ್ರ ಖಂಡ್ರೆ ವರ್ಸಸ್ ಖಂಡ್ರೆ, ಅಣ್ಣ ತಮ್ಮ ನಡುವೆ ಜಿದ್ದಾಜಿದ್ದಿ ಕಣ ಆಗಿದೆ ಎಂದು ಹೇಳಬಹುದು.
ವರದಿ: ನಂದಕುಮಾರ ಕರಂಜೆ, ಬೀದರ