spot_img
spot_img

ಚುನಾವಣೆ ನಂತರ ಪಂಚಮಸಾಲಿ ಹೋರಾಟ ಮುಂದುವರೆಸಲು ಪಣ

Must Read

spot_img
- Advertisement -

ಜಯ ಮೃತ್ಯುಂಜಯ ಶ್ರೀಗಳಿಗೆ ಸಮಾಜದವರಿಂದ ಅಭಿನಂದನೆ

ಮೂಡಲಗಿ: ಕಳೆದ 3 ವರ್ಷಗಳಿಂದ ನಿರಂತರ ಹೊರಾಟದ ಫಲದಿಂದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಪಡೆದುಕೊಂಡಿದ್ದು, ಚುನಾವಣೆ ನಂತರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 2024ರ ಒಳಗಾಗಿ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಓಬಿಸಿ ಮೀಸಲಾತಿಯಲ್ಲಿ ಸೇರ್ಪಡಿಸುವಂತೆ ಒಗ್ಗಟಿನಿಂದ ಹೊರಾಟ ಮಾಡೋಣ ಎಂದು ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕರೆ ನೀಡಿದರು.

ರವಿವಾರ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಬಲಭೀಮ ರಂಗ ಮಂಟಪದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಹಾಗೂ ನಿರಂತರ ಹೋರಾಟ ಮಾಡಿದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಅಭಿನಂಧನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ ಮೀಸಲಾತಿ ಶಾಲಾ ಮಕ್ಕಳ, ಯುವಕರ ಉದ್ಯೋಗಕ್ಕಾಗಿ ಸರ್ಕಾರ 2ಡಿ ಮೀಸಲಾತಿ ನೀಡಿರುವುದು ಹರ್ಷ ತಂದಿದೆ ಎಂದರಲ್ಲದೇ ವಿಧಾನಸಭೆ ಚುನಾವಣೆ ಮುಗಿದ ತಕ್ಷಣ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಓಬಿಸಿ ಮೀಸಲಾತಿಯನ್ನು ಪಡೆದುಕೊಂಡು ಸಮಾಜ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಅಲ್ಲದೇ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಪ್ರತಿಯೊಂದು ತಾಲೂಕಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.

- Advertisement -

ಕಲ್ಲೋಳಿ ಪಟ್ಟಣದಿಂದ ಪ್ರಾರಂಭವಾದ ಹೋರಾಟ ಕೇಂದ್ರ ಹಾಗೂ ರಾಜ್ಯದ ಗಮನ ಸೆಳೆಯಿತು, ಈ ಹೋರಾಟದಿಂದ ಸಮಾಜದ ಜನರು ಒಗ್ಗಟಿನಿಂದ ಕಾರ್ಯದಲ್ಲಿ ತೊಡಗಿರುವುದು ಸಂತೋಷವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸಮಾಜದ ಜನರಿಗೆ ಟಿಕೆಟ್ ಕೊಟ್ಟಿವೆ ಎಂದರು. ಸಮಾಜದ ಜನರಿಗೆ ತೊಂದರೆ, ಸಮಸ್ಯೆ ಆದರೆ ನಾನೆ ಮುಂದೆ ನಿಂತು ಬಗೆ ಹರಿಸುವೆ ಯಾವುದಕ್ಕೂ ಹೆದರಬೇಡಿ ಎಂದು ಶ್ರೀಗಳು ಅಭಯ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿಕ ಬಾಳಪ್ಪ ಬೆಳಕೂಡ, ಸಮಾಜದ ಜನರು ಕೃಷಿ ಕಾಯಕದಲ್ಲಿ ತೊಡಗಿಕೊಂಡವರು, 12ನೇ ಶತಮಾನದಲ್ಲಿ ಬಸವಣ್ಣನವರ ಹಾಗೇ ಇಂದು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ನಿರಂತರ ಕಾಯಕದಲ್ಲಿ ತೊಡಗಿ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೊಡಿಸುವಲ್ಲಿ ಶ್ರಮಿಸಿದಾರೆ. ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಮಕ್ಕಳು ಪೂಜ್ಯರನ್ನು ನೆನೆದು ಬದುಕುತ್ತಾರೆಂದರು.

ಜಿಲ್ಲಾ ಅಧ್ಯಕ್ಷ ನಿಂಗಪ್ಪ ಫೀರೊಜಿ, ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಸೈನಿಕರ ಸಂಘದ ಅಧ್ಯಕ್ಷ ಬಾಳೇಶ ಶಿವಾಪೂರ, ಮಲ್ಲಪ್ಪ ಗೋಡಿಗೌಡರ, ದೀಪಕ ಜುಂಜರವಾಡ, ಸಂಗಮೇಶ ಕೌಜಲಗಿ, ಶಂಕರ ಬೆಳಕೂಡ, ಕಲ್ಲಪ್ಪ ಕಡಾಡಿ, ಪ್ರಭು ಕಡಾಡಿ, ಗಿರಮಲ್ಲಪ್ಪ ಸೌಸುದ್ದಿ ,ಬಾಳಪ್ಪ ಕಂಕಣವಾಡಿ, ಹಣಮಂತ ಸಂಗಟಿ, ಸಿದ್ದಪ್ಪ ಮುಗಳಿ, ಶಿವಾನಂದ ಹೆಬ್ಬಾಳ, ಹಣಮಂತ ಖಾನಗೌಡ್ರ, ಶಿವಪ್ಪ ಪಾಟೀಲ, ಪರಗೌಡ ಪಾಟೀಲ, ರಮೇಶ ಕಡಲಗಿ, ಮಲ್ಲಪ್ಪ ಕುರಬೇಟ, ಅಜೀತ ಬೆಳಕೂಡ, ಕೃಷ್ಣಪ್ಪ ಮುಂಡಿಗನಾಳ, ಬಸಗೊಂಡ ಪರಕನಟ್ಟಿ, ಅಡಿವೆಪ್ಪ ಕುರಬೇಟ, ಮಲ್ಲಪ್ಪ ಗೊರೋಶಿ, ಈರಪ್ಪ ಚೌಗಲಾ, ಭೀಮಶಿ ಹೆಬ್ಬಾಳ, ಶಂಭು ಖಾನಾಪುರ, ಗುರುನಾಥ ಮದಭಾವಿ, ಬಸಗೊಂಡ ಖಾನಾಪುರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

- Advertisement -

ಪಂಚಣ್ಣ ಹೆಬ್ಬಾಳ ಸ್ವಾಗತಿಸಿದರು, ಆನಂದ ಚಿಕ್ಕೊಡಿ ಕಾರ್ಯಕ್ರಮ ನಿರೂಪಿಸಿದರು, ಹಣಮಂತ ಕೌಜಲಗಿ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group