ಉಚಿತ ಯೋಜನೆಗಳಿಗೆ ಗಾಂಧೀಜಿ ತೀವ್ರ ವಿರೋಧ ಹೊಂದಿದ್ದರು; ಮಹಾಬಲೇಶ್ವರ ಗುಪ್ತಾ

0
1632

ವಿಜಯ ಟೀಚರ್ಸ್ ಕಾಲೇಜಿನಲ್ಲಿ ಗಾಂಧೀಜಿ ಚಿಂತನೆ ಕುರಿತ ಉಪನ್ಯಾಸ.

ಕರ್ನಾಟಕ ಸರ್ವೋದಯ ಮಂಡಲ ಮತ್ತು ವಿಜಯ ಟೀಚರ್ಸ್ ಕಾಲೇಜು ವತಿಯಿಂದ “ಗಾಂಧೀಜಿಯವರ ಮೂಲಭೂತ ಆರ್ಥಿಕ ಚಿಂತನೆಗಳು ಒಂದು ವಿಶ್ಲೇಷಣೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಪ್ರಾಂಶುಪಾಲ ಹಾಗೂ ಗಾಂಧಿ ಚಿಂತಕ ಡಾ ಮಹಾಬಲೇಶ್ವರ ಗುಪ್ತ ಮಾತನಾಡಿ, ಮಹಾತ್ಮ ಗಾಂಧಿಜೀಯವರು ಯಾವುದೇ ಸರ್ಕಾರ ಉಚಿತ ಸವಲತ್ತುಗಳು, ಯೋಜನೆಗಳನ್ನು ನೀಡುವ ಬಗ್ಗೆ ಪ್ರಬಲವಾಗಿ ವಿರೋಧ ಹೊಂದಿದ್ದರು. ಯಾವುದೇ ಮನುಷ್ಯ  ಶ್ರಮ ಪಟ್ಟು ದುಡಿದು ತಿನ್ನಬೇಕು ಎಂಬ ಉದ್ದೇಶವನ್ನು ಹೊಂದಿದ್ದರು.ಆದರೆ ಇಂದಿನ ಸರ್ಕಾರಗಳು ಜನರಿಗೆ ಉಚಿತ ಯೋಜನೆಗಳನ್ನು ನೀಡುವ ಮೂಲಕ ಸೋಮಾರಿಗಳಾನ್ನಾಗಿ ಮಾಡುತ್ತಿವೆ ಎಂದರು.

ಯಂತ್ರ, ತಂತ್ರಜ್ಞಾನವನ್ನು ವಿರೋಧ ವ್ಯಕ್ತಪಡಿಸಿರುವ ಗಾಂಧೀಜಿಯವರು ಯಂತ್ರ ಬಳಕೆಗಳು ಮನುಷ್ಯನನ್ನು ನಿರುದ್ಯೋಗಕ್ಕೆ ತಳ್ಳಲಿವೆ. ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿಯವರು ಪ್ರಬಲವಾಗಿ ಪ್ರತಿಪಾದಿಸಿದ್ದರು ಪ್ರತಿ ದೇಶವು ಸ್ವಾವಲಂಬನೆಯನ್ನು ಹೊಂದಿರಬೇಕು ಎಂಬ ಉದ್ದೇಶವನ್ನು ಹೊಂದಿದ್ದರು ಎಂದು ಹೇಳಿದರು.

ಸಮಾರಂಭವನ್ನು ಶಿಕ್ಷಕರ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಕೆ.ಎಸ್.ಸಮೀರ ಉದ್ಘಾಟಿಸಿದರು ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ.ಹೆಚ್.ಎಸ್.ಸುರೇಶ್ ಅಧ್ಯಕ್ಷತೆ ವಹಿಸಿದ್ದರು ಪ್ರಾಚಾರ್ಯರಾದ ಡಾ.ಪಿ‌.ಟಿ.ಮೀನಾ ಪ್ರಾಸ್ತಾವಿಕ ನುಡಿಗಳನಾಡಿದರು ಬೆಂಗಳೂರು ನಗರ ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸರ್ವೋದಯ ಮಂಡಲ ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ ಮತ್ತಿತರರು ಹಾಜರಿದ್ದರು.