ಆಂಧ್ರ ಪ್ರದೇಶದ ಜಗದ್ವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನ ವತಿಯಿಂದ ಪ್ರಕಟಗೊಳ್ಳುವ ಸಚಿತ್ರ ಆಧ್ಯಾತ್ಮಿಕ ಮಾಸಪತ್ರಿಕೆ ‘ಸಪ್ತಗಿರಿ’. ಕಳೆದ ಐದು ದಶಕಗಳಿಂದ 5 ಭಾಷೆಗಳಲ್ಲಿ ಜಿಜ್ಞಾಸು ಓದುಗ ವೃಂದಕ್ಕೆ ಭಕ್ತಿ ಸಾಹಿತ್ಯ ರಸದೌತಣವನ್ನು ನೀಡುತ್ತಾ ಬಂದಿದೆ.
ಕನ್ನಡ ಭಾಷಾ ವಿಭಾಗದ ಸಂಪಾದಕೀಯ ಸಲಹಾ ಮಂಡಳಿಯ ಸದಸ್ಯರಾಗಿ ಎರಡು ವರ್ಷಗಳ(2023-2025) ಅವಧಿಗೆ ಮಾಧ್ಯಮ ಸಮಾಲೋಚಕ , ಸಂಸ್ಕೃತಿ ಚಿಂತಕ, ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ನೇಮಕಗೊಂಡಿರುತ್ತಾರೆ.
ಇತ್ತೀಚೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಎಂಪ್ಲಾಯಿಸ್ ಟ್ರೈನಿಂಗ್ ಅಕಾಡೆಮಿ (Sಗಿಇಖಿಂ)ಕಾರ್ಯಾಲಯದಲ್ಲಿ ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಸಂಪಾದಕರಾದ ಡಾ. ವಿ ಜಿ ಚೊಕ್ಕಲಿಂಗಂ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಾಷಾ ಸಲಹೆಗಾರರ ಪಾಲ್ಗೊಂಡಿದ್ದರು.
ಯುವ ಜನತೆಗೆ ಭಾರತೀಯ ಸನಾತನ ಸಂಸ್ಕೃತಿಯ ಸಾರ ಸರ್ವಸ್ವವನ್ನು (ವಿವಿಧ ಜ್ಞಾನ ಶಾಖೆಗಳಾದ ಯೋಗ , ಆರ್ಯುವೇದ, ಜೋತಿಷ್ಯ, ವೇದಗಣಿತ ಇತ್ಯಾದಿ) ತಿಳಿಯಾದ ಭಾಷೆಯಲ್ಲಿ ತಿಳಿಸುವ ನಿಟ್ಟಿನಲ್ಲಿವ ವೈವಿಧ್ಯಮಯ ಸಂಗ್ರಹಯೋಗ್ಯ ಪತ್ರಿಕೆ ರೂಪಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು. ಸಲಹಾ ಮಂಡಳಿಯ ಸಭೆಯಲ್ಲಿ ಕನ್ನಡ ಪ್ರಾಧ್ಯಾಪಕ – ಲೇಖಕ ಡಾ. ಆರ್. ವಾದಿರಾಜು, ಉಪ ಸಂಪಾದಕಿ ಕೃಷ್ಣವೇಣಿ ಸೇರಿದಂತೆ ಅನೇಕ ವಿದ್ವನ್ಮಿತ್ರರು ಪಾಲ್ಗೊಂಡಿದ್ದರು.
ಸಾರಸ್ವತ ಕೈಂಕರ್ಯ-ಪೂರ್ವಜನ್ಮದ ಸುಕೃತ
ಚಾರಿತ್ರಿಕವಾಗಿ ಕನ್ನಡನಾಡಿನೊಂದಿಗೆ ನಿಕಟ ಸಂಬಂಧ ಹೊಂದಿರುವ ತಿರುಮಲ- ತಿರುಪತಿ ದೇವಸ್ಥಾನದ ಈ ಸಾರಸ್ವತ ಕೈಂಕರ್ಯ ಮಾಡಲು ಶ್ರೀನಿವಾಸನ ಪರಮಾನುಗ್ರಹವೇ ಕಾರಣ. ಕನ್ನಡದ ಕಂಪಿನಿಂದ ಕೂಡಿದ ಮೌಲಿಕ ವಸ್ತು-ವಿಷಯದ ಪತ್ರಿಕೆಯನ್ನು ರೂಪಿಸುವ ಗುರುತರ ಜವಾಬ್ದಾರಿ ದೊರೆತಿರುವುದು ಪೂರ್ವಜನ್ಮದ ಸುಕೃತವೆಂದೇ ಭಾವಿಸಿದ್ದೇನೆ.
–ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಪ್ತಗಿರಿ ಮಾಸಿಕದ ಕನ್ನಡ ಸಂಪಾದಕೀಯ ಸಲಹಾ ಮಂಡಳಿ ಸದಸ್ಯ.
ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕಿರುಪರಿಚಯ:
ವೃತ್ತಿಯಿಂದ ಮಾಧ್ಯಮ ಸಮನ್ವಯಕಾರರು; ಪ್ರವೃತ್ತಿಯಿಂದ ಬರಹಗಾರರು, ಎರಡು ದಶಕಗಳಿಂದ ಆಧ್ಯಾತ್ಮಿಕ ಬರವಣಿಗೆಯಿಂದ ಗುರುತಿಸಿಕೊಂಡವರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ರೂವಾರಿ, ವಂದೇ ಗುರು ಪರಂಪರಾಂ, ಸತ್ಸಂಗ ಸಂಪದ , ದಾಸ ಪಂಥ ಹೊತ್ತಗೆಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ. ತಾವು ಮಾಡುವ ಕಾರ್ಯಕ್ಷೇತ್ರಗಳಲ್ಲಿ ಸದಾ ಹೊಸತನವನ್ನು ಚಿಂತಿಸುತ್ತ ಕಾರ್ಯಪ್ರವೃತ್ತರಾಗುವ ಸೃಜನಶೀಲ ಮನ ಅವರದ್ದು. ಸದ್ಯ ಬೆಂಗಳೂರು ನಿವಾಸಿ.
ಹಲವು ಸಾಂಸ್ಕೃತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್‌ಡಬ್ಲ್ಯೂ ಪದವಿ ತರಗತಿಯ ಪಠ್ಯಕ್ಕೆ ಇವರು ಬರೆದ ‘ಸಂತ ಶಿಶುನಾಳ ಷರೀಫ’ ಲೇಖನ ಆಯ್ಕೆಗೊಂಡಿದೆ. ‘ಶ್ರೀ ಕೃಷ್ಣಾರ್ಪಣ’ ಇತ್ತೀಚೆಗೆ ಪ್ರಕಟಗೊಂಡ ಕೃತಿ, ಟಿಟಿಡಿಯ ಪ್ರತಿಷ್ಠಿತ ‘ಪುರಂದರಾನುಗ್ರಹ’ ಪ್ರಶಸ್ತಿ ; ‘ಟಿ.ವಿ.ಕಪಾಲಿ ಶಾಸ್ತ್ರಿ’ ಪುರಸ್ಕಾರಕ್ಕೆ ಭಾಜನರು.
ಸಂಪರ್ಕ: 97393 69621