- Advertisement -
ಸಿಂದಗಿ: ಇದೇ ಜೂ11ರಂದು ಅನುಗ್ರಹ ಕಲ್ಯಾಣ ಮಂಟಪದಲ್ಲಿ ಶಾಂತಗಂಗಾಧರ ಶ್ರೀಗಳ ಹುಟ್ಟುಹಬ್ಬ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ತಳವಾರ ಮಹಾಸಭಾ ಸಂಘ ಮತ್ತು ತಳವಾರ ತಾಲೂಕು ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜಕುಮಾರ ನರಗೋದಿ ಹೇಳಿದರು.
ಪಟ್ಟಣದ ಗುರುದೇವಾಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಸಮಾಜದ ಶ್ರೀಗಳಾದ ಶಾಂತಗಂಗಾಧರ ಮಹಾಸ್ವಾಮಿಗಳ 76ನೇ ವರ್ಷದ ವರ್ದಂತಿ ಮತ್ತು 2022-23ನೇ ಸಾಲಿನಲ್ಲಿ ಸಾಧನೆಗೈದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ತಳವಾರ ತಾಲೂಕು ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಶಾಂತಗಂಗಾಧರ ಶ್ರೀಗಳು, ಮಹಾಂತೇಶ ಯರನಾಳ, ಭರತೇಶ ಹಿರೊಳ್ಳಿ, ಈರಣ್ಣ ಕುರಿ, ಶಿವಣ್ಣ ಕೋಟಾರಗಸ್ತಿ, ಎಮ್.ಎಸ್.ಕಡ್ಲೆವಾಡ, ಮಲ್ಲು ಹಿರೊಳ್ಳಿ ಇದ್ದರು.