ವಿಶ್ವ ಪರಿಸರ ದಿನ ಆಚರಿಸಿದ ಕಿಡ್ ಜೀ ಶಾಲೆ

Must Read

ಸಿಂದಗಿ: ಚಿಕ್ಕ ಮಕ್ಕಳಿಗಾಗಿ ಒಂದು ಅತ್ಯುನ್ನತ ಸೌಲಭ್ಯವುಳ್ಳ ಶಾಲೆಯು ವಿಶ್ವ  ಪರಿಸರ ದಿನದಂದು ಸಸಿ ನೀಡಿ ಸ್ವಾಗತಿಸಿರುವುದು ಶಾಲಾ ಸಂಸ್ಥಾಪಕ ವೆಂಕಟೇಶ್ ಗುತ್ತೇದಾರ ಅವರ ಸಾಮಾಜಿಕ ಕಳಕಳಿ ಎತ್ತಿತೋರಿಸುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ನಗರದ ಬಂದಾಳ ರಸ್ತೆಯ ಶಾಂತವೀರ ನಗರದಲ್ಲಿ ನೂತನವಾಗಿ ಪ್ರಾರಂಭವಾದ ಕೀಡ್‍ಜೀ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ವೆಂಕಟೇಶ್ ಗುತ್ತೇದಾರ ಅವರು ಪಾಲ್ಗೊಳ್ಳುತ್ತಾ ಬಂದಿದ್ದು, ಇಂದು ಪ್ಲೇ ಹೋಮ್, ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಅವರಿಗೆ ಶುಭವಾಗಲಿ ಅವರ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ ಸಂಸ್ಥಾಪಕ ವೆಂಕಟೇಶ ಗುತ್ತೇದಾರ ಮಾತನಾಡಿ, ಪ್ರಥಮ ಹಂತದಲ್ಲಿಯೇ ಸುಮಾರು ದಾಖಲಾತಿ ಆಗಮಿಸಿದ್ದು ಅತ್ಯಂತ ಮತ್ತು ಉತ್ತಮವಾದ ಸ್ಪಂದನೆ ವ್ಯಕ್ತವಾಗಿದೆ. ಹಲವು ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಶುಲ್ಕ ರಹಿತ ಶಿಕ್ಷಣ ನೀಡುವುದು ನಮ್ಮ ವಿ.ಆರ್.ಜಿ ಚಾರಿಟೇಬಲ್ ಎಜ್ಯುಕೇಶನಲ್ ಆಂಡ್ ಡೇವಲಪಮೆಂಟ್ ಸಂದಾಯ ಮಾಡಿ ವಿದ್ಯಾಭ್ಯಾಸದ ಹೊಣೆ ಹೊರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜು ಗುತ್ತೇದಾರ, ಮಂಜುನಾಥ ಬಿಜಾಪುರ, ಶಿಕ್ಷಕ ರವಿ ಗೋಲಾ, ಜೀಲಾನಿ ನಾಟೀಕಾರ, ಮಹ್ಮದ ಪಟೇಲ್ ಬಿರಾದಾರ,  ಪ್ರವೀಣ ಬಿರಾದಾರ, ರಮೇಶ ಚಟ್ಟರಕಿ, ಮುಖ್ಯಗುರು ವಿಪುಲಾ ವೆಂಕಟೇಶ್ ಗುತ್ತೇದಾರ ಹಾಗೂ ಸಿಬ್ಬಂದಿಗಳು ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group